ಬೀದರ್

ಜಿಲ್ಲೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ನಮ್ಮ ಶಾಸಕರುಗಳು ಧ್ವನಿ ಏತ್ತಬೇಕು: ಭಗವಂತ ಖೂಬಾ

ಇಷ್ಟೊಂದು ಷಡ್ಯಂತ್ರದ ಮಧ್ಯೆಯೂ ನನಗೆ ಮತದಾನ ಮಾಡಿರುವ ಎಲ್ಲಾ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿರ ಋಣಿಯಾಗಿ ರಕ್ಷಕನಾಗಿ ಕೆಲಸ ಮಾಡುವೆ, ಇದರ ಜೊತೆಗೆ ನಮ್ಮ ಶಾಸಕರುಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅರಣ್ಯ ಪ್ರದೇಶವು ಒತ್ತುವರಿ ಮಾಡಿ, ಸ್ಮಶಾನ, ದರ್ಗಾಗಳಿಗೆ ನೀಡಲು ನಡೆಯುತ್ತಿರುವ ಹುನ್ನಾರ, ಡಿ-ಗ್ರೂಪ್ ಹುದ್ದೆಗಳಲ್ಲಿ ನಡೆಯುತ್ತಿರುವ ತಾರತಮ್ಯ, ಭೇಧಭಾವದ ವಿರುದ್ಧ ಮತ್ತು ಟೆಂಡರಗಳಲ್ಲಾಗುತ್ತಿರುವ ಗೋಲಮಾಲ್ ಬಗ್ಗೆ ವಿಧಾನಸೌಧದ ಒಳಗೆ ಮತ್ತು ಹೊರಗೆ ಧ್ವನಿ ಎತ್ತಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಸಂಸದ ಭಗವಂತ ಖೂಬಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಭೆಯಲ್ಲಿ ನುಡಿದರು.

ನನ್ನ ಬದುಕು ಸಕಾರಾತ್ಮಕ ವಿಚಾರಗಳಿಂದ ಕೂಡಿದೆ, ನಾನು ಅಧಿಕಾರಲ್ಲಿರದೆ ಇದ್ದರು, ನನ್ನ ಪ್ರಭಾವ ಬಳಸಿ, ಕ್ಷೇತ್ರದ ಅಭಿವೃದ್ದಿ ಮಾಡುತ್ತೇನೆ, ಯಾಕೆಂದರೆ ನನ್ನ ನಡೆ ನುಡಿಗಳಿಂದ ಕೇಂದ್ರದಲ್ಲಿ ಪ್ರತಿಯೊಬ್ಬ ಮಂತ್ರಿಗಳ ಬಳಿ ಗೌರವ ಇಟ್ಟುಕೊಂಡಿದ್ದೇನೆ. ಅದರಿಂದಲೆ ಕಳೆದ 10 ವರ್ಷದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೇನೆ ಎಂದರು. ಈ ಕಾರಣದಿಂದಲೆ ಪಕ್ಷದ ಕೆಲ ಮುಖಂಡರ ವಿರೋಧದ ಮಧ್ಯೆಯೂ ನನಗೆ 3ನೇ ಬಾರಿಗೆ ಟಿಕೇಟ್ ನೀಡಿದೆ, ಆದರೆ ಕಾಂಗ್ರೇಸ್ ಹಾಗೂ ನಮ್ಮವರ ಷಡ್ಯಂತ್ರ ಮತ್ತು ಹಣದ ಹೊಳೆಯ ಮಧ್ಯೆಯೂ, ಕಾರ್ಯಕರ್ತರ ಶ್ರಮದ ಫಲವಾಗಿ 5.40 ಲಕ್ಷ ಮತಗಳು ಪಡೆದುಕೊಂಡಿರುವೆ, ನಾನು ತಮ್ಮೇಲ್ಲರಿಗೂ ಸದಾಕಾಲ ಚಿರಋಣಿಯಾಗಿರುವೆ ಎಂದರು.

ನಮ್ಮಲ್ಲಿಯ ಮುಖಂಡರ ಹಾಗು ಕೆಲ ನಾಯಕರ ಸ್ವಾರ್ಥಕ್ಕಾಗಿ

ಸೊಲನುಭಿವಿಸಬೇಕಾಯಿತು, ಇದು ಕಾರ್ಯಕರ್ತರಿಗೆ ಮಾಡಿರುವ ಘೋರ ಅನ್ಯಾಯವಗಿದೆ, ಅವರಿಗದು ಅರ್ಥವಾಗಬೇಕಾಗಿದೆ, ಪಕ್ಕದ ಮನೆಯ ಕೂಸು ನಮ್ಮ ಮನೆಯ ತೊಟ್ಟಿಲಲ್ಲಿ ಹಾಕಿದರೆ ಅದು ನಮ್ಮದಾಗದು ಅವರುಗಳು ಇದು ನೆನಪಿಡಬೇಕೆಂದರು. 400 ಪಾರ್ ಹೇಗೂ ಆಗುತ್ತೆ, ಇಲ್ಲಿ ಸೊತರೇನು ಎಂದು ಉಢಾಫೆ ಮಾತನಾಡಿದರು. 2014 ಮತ್ತು 2019 ರಲ್ಲಿ ನಮ್ಮಲ್ಲಿ ಒಬ್ಬಿಬ್ಬರು ಶಾಸಕರು ಮಾತ್ರ ಇದ್ದರು ಆ ಸಮಯದಲ್ಲಿ ಕಾರ್ಯಕರ್ತರ ಜೊತೆ ನಿಂತಿದ್ದು ನಾನು, ಅವಕಾಶ ಸಿಕ್ಕಾಗಲೇಲ್ಲಾ ಕಾಂಗ್ರೇಸ್‍ನವರ ಬಣ್ಣ ಬಯಲು ಮಾಡಿರುವೆ, ನೇರವಾಗಿ ವಿರೋಧಿಸಿರುವೆ ಎಂದರು.

ಕಾರ್ಯಕರ್ತರು ಪಕ್ಷದ ಹಿಂಬಾಲಕರಾಗಬೇಕೆ ವಿನಃ ನಾಯಕನ ಹಿಂಬಾಲಕನಾಗಬಾರದು, ಒಂದು ವೇಳೆ ಪಕ್ಷ ಮತ್ತು ನಾಯಕನ ಮಧ್ಯೆ ಆಯ್ಕೆಗಳು ಬಂದಾಗ, ಕಾರ್ಯಕರ್ತರು ಪಕ್ಷದ ಜೊತೆ ನಿಲ್ಲಬೇಕು, ಪಕ್ಷದ ನಿರ್ಣಯದ ಜೊತೆ ನಿಲ್ಲಬೇಕೆಂದು ಕಾರ್ಯಕರ್ತರು ಕಿವಿಮಾತು ಹೇಳಿದರು.

ಸೊತಿದ್ದೇನೆ ಎಂದು ಕುಗ್ಗಲ್ಲ, ಅಭಿವೃದ್ದಿ ಮಾಡುವುದು ನಿಲ್ಲಿಸೊಲ್ಲ, ಮತದಾರರ ಜೊತೆ ಅವರ ಕುಟುಂಬ ಸದಸ್ಯನಾಗಿ, ಪಕ್ಷ ಸಂಘಟನೆಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡೊಣ, ಮುಂದಿನ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದು ಎಲ್ಲರಲ್ಲೂ ವಿನಂತಿಸಿಕೊಂಡರು.

ಸೊಲಿಸಿ ಬಂದ್ರೆನಪ್ಪ ಎಂದು ಕೇಳುತ್ತಿದ್ದಾರೆ:

ಶಾಸಕರಾದ ಡಾ. ಸಿದ್ದು ಪಾಟೀಲ್ ಮಾತನಾಡಿ, ಕಾಂಗ್ರೇಸ್‍ನವರು ದುಡ್ಡಿನಿಂದ ಚುನಾವಣೆ ಗೆದ್ದಿದ್ದಾರೆ, ಆದರೆ ನಾವು ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ 5.40 ಲಕ್ಷ ಮತ ಪಡೆದಿದ್ದೇವೆ. ನಾವು 4 ಶಾಸಕರುಗಳು ಬೆಂಗಳೂರಿಗೆ ಹೋದಾಗ ಸೋಲಿಸಿ ಬಂದಿರೆನಪ್ಪ ಅಂತ ಕೇಳ್ತಾ ಇದ್ದಾರೆ, ನಾವೆಲ್ಲರೂ ಒಂದಾಗಿ ಕೆಲಸ ಮಾಡಿದರೆ ಇವತ್ತು ಭಗವಂತ ಖೂಬಾ ಗೆದ್ದು, ಕೇಂದ್ರದಲ್ಲಿ ಕ್ಯಾಬಿನೇಟ್ ಮಂತ್ರಿ ಆಗ್ತಾ ಇದ್ರು, ನಮ್ಮ ಎಲ್ಲಾ ಕೆಲಸಗಳು ಆಗ್ತಾ ಇದ್ದವು ಎಂದು ಬೇಸರ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಇವೇಲ್ಲವು ಸರಿ ಮಾಡಿಕೊಂಡು ಮುಂಬರುವ ತಾ.ಪಂ. ಜಿ.ಪಂ. ಗೆಲ್ಲೋಣ ಎಂದರು.

ಬಸವರಾಜ್ ಆರ್ಯ ಮಾರ್ಮಿಕ ನುಡಿ :

ಈ ಔತಣಕೂಟಕ್ಕೆ ಕೆಲವೊಂದಿಷ್ಟು ಜನ ನಾಚಿಕೆ ಬಂದು ಬಂದಿಲ್ಲಾ, ಕೆಲವೊಂದಿಷ್ಟು ಜನ ಮದುವೆಗಳಿಗೆ ಹೊಗಿರುವದರಿಂದ ಬಂದಿಲ್ಲಾ, ಅದರೂ ಪರವಾಗಿಲ್ಲಾ, ಅವರ ಮನೆಯವರೆಗೆ ಟಿಫಿನ್ ಕಟ್ಕೋಂಡು ಹೋಗಿ ಊಟ ಮಾಡಿಸಬೇಕು ಎಂದು ಮಾಜಿ ಸಂಸದರಿಗೆ ತಿಳಿಸಿದರು.

ಯಾವ ಸ್ಥಳದಲ್ಲಿ ಅಂಬೇಡ್ಕರ್ ಅವರು ಕುಳಿತು ಸಂವಿಧಾನ ಬರೆದಿದ್ದರೋ, ಅಂತ ಜಾಗಕ್ಕೆ ಇಂದು ಕಾಂಗ್ರೆಸ್ ನವರು ದುಡ್ಡು ಹಂಚಿ ಹೋಗಿ ಕುಳಿತಿದ್ದಾರೆ, ಇದು ಭಾರತ ಇತಿಹಾಸದಲ್ಲಿ ಮೊದಲು ಎಂದರು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡಿ ಮತ್ತೊಮ್ಮೆ ಬೀದರ್ ನಿಂದ ಬಿಜೆಪಿ ಗೆಲ್ಲಿಸಲು ಪಣ ತೋಡೋಣ ಎಂದರು.

ಕಾರ್ಯಕರ್ತರಿಂದ ಬೇಸರದ ನುಡಿ:

ಸಭೆ ಮುಗಿದ ಬಳಿಕ, ನಮ್ಮ ಕ್ಷೇತ್ರದಲ್ಲಿ ನಾಯಕರು ಕೆಲಸ ಮಾಡಿಲ್ಲಾ, ಮೋದಿ ಮಾಡಿದ್ದು, ನೀವು ಮಾಡಿರುವ ಅಭಿವೃದ್ದಿ ಕೆಲಸಗಳು ಸಹ ಜನರಿಗೆ ತಿಳಿಸಿಲ್ಲಾ, ಒಬ್ಬ ಎಂಪಿ ಕ್ಯಾಂಡಿಡೇಟ್ ಎಷ್ಟೋಂದು ಪ್ರಚಾರ ಮಾಡಲು ಆಗುತ್ತದೆ, ನಾವೇಲ್ಲಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಇದ್ದೇವೆ, ಈ ಸೊಲು ಕಾರ್ಯಕರ್ತರಿಗೆ ಮಾಡಿರುವ ಸೊಲಾಗಿದೆ, ಅಭ್ಯರ್ಥಿಗೆ ಮತ ಹಾಕಿ ಎಂದು ಹೇಳುವ ಮನಸ್ಸು ಸಹ ಲಿಡರಗಳು ಮಾಡಿಲ್ಲಾ, ಏನಾದರೂ ಕೇಳಿದರೆ, ನಿಮಗೆ ಯಾರಿಗೆ ಓಟ್ ಹಾಕಬೇಕು ಅನ್ಸುತ್ತೆ ಅವರಿಗೆ ಹಾಕಿ ಎಂದೆಲ್ಲಾ ಉಡಾಫೆ ಮಾತುಗಳಾಡಿದ್ದಾರೆ, ಇಂತಹ ಮಾತುಗಳು ಆಡಿದರೆ ಮುಂದೆ ಬಿಜೆಪಿ ಹೆಗೆ ಗೆಲ್ಲುತ್ತೆ ಎಂದು ಬೇಸರ ಹೊರಹಾಕಿದರು. ನಂತರ ಕಾರ್ಯಕರ್ತರು, ಎಲ್ಲಾ ಮುಂಡರು ಮಧ್ಯಾಹ್ನದ ಊಟೋಪಚಾರ ಮುಗಿಸಿದರು.

ಈ ಸಮಾರಂಭದಲ್ಲಿ ಶಾಸಕ ಡಾ.ಸಿದ್ದು ಪಾಟೀಲ್, ಬಿಜೆಪಿ ಉಪಾದ್ಯಕ್ಷರಾದ ಶೋಭಾ ತೆಲಂಗ ಮುಖಂಡರಾದ ಬಸವರಾಜ ಆರ್ಯ, ಶಕಂತಲಾ ಬೆಲ್ದಾಳೆ, ರಾಜಶೇಖರ ನಾಗಮೂರ್ತಿ, ಬಾಬುವಾಲಿ, ಪಿರಪ್ಪ ಔರಾದೆ, ಕಿರಣ ಪಾಟೀಲ್, ಮಾಧವ ಹಾಸೂರೆ, ರಾಜೇಂದ್ರ ಪೂಜಾರಿ, ಅಶೋಕ ವಕಾರೆ, ರಾಜರೆಡ್ಡಿ ಶಾಬಾದ, ವಿರಣ್ಣಾ ಕಾರಬಾರಿ, ಸಂಗಮೇಶ ನಾಸಿಗಾರ, ಗಜೇಂದ್ರ ಕನಕಟಕರ್ ಮುಂತಾದವರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!