ಜಿಲ್ಲಾ ರೈತ ಸಂಘದಿಂದ ಮುಖ್ಯಂತ್ತಗಳಿಗೆ ಮಂತ್ರಿಗಳಿಗೆ ಮನವಿ
ಕರ್ನಾಟಕ ರಾಜ್ಯ ಮತ್ತೆ ಬರಗಾಲಕ್ಕೆ ತಿತ್ತಾಗಿದೆ. ಈಗಾಗಲೆ ರಾಜ್ಯ ಸರ್ಕಾರ 130 ತಾಲೂಕುಗಳನ್ನು ಬರ ಪ್ರದೇಶ ಜೊತೆಗೆ ಬೀದರ ಜಿಲ್ಲೆ ಎಲ್ಲಾ ತಾಲೂಕುಗಳನ್ನು ಸೇರಿಸಿ ಬರ ಘೋಷಿಸಲು ಆಲೋಚನೆ ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯದ ಬರಗಾಲವನ್ನು ಸಮರೊಪಾದಿಯಲ್ಲಿ ಎದುರಿಸಲು ಹೆಚ್ಚು ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಿ ರಾಜ್ಯದ ರೈತರನ್ನು ರಕ್ಷಿಸಬೇಕೆಂದು ಈ ಮೂಲಕ ವಿನಂತಿಸುತ್ತಾ. ಎನ್.ಡಿ.ಆರ್.ಎಫ್ ನೀತಿಯು ಓಬಿರಾಯನ ಕಾಲದ್ದಾಗಿದ್ದು, ಅದನ್ನು ಕೂಡಲಢ ಮಾರ್ಪಾಡು ಮಾಡಿ ವೈಜ್ಞಾನಿಕವಾಗಿ ರೂಪಿಸಬೇಕು. ಮಹಾತ್ಮಾಗಾಂಧಿ ಉದ್ಯೋದಖಾತ್ರಿ ಯೋಜನೆಗೆ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕು. ಅಂತರಜಲವನ್ನು ವೃದ್ದಿಸಲು ನೆರವು ನೀಡಬೇಕು. ರೈತರ ಸಾಲವನ್ನು ಮಾನ್ನಾ ಮಾಡಲು ಸಹಕರಿಸಬೇಕು. ಕೃಸಿ ಸಾಲ ವಸುಲಾತಿ ನಿಲ್ಲಿಸಬೇಕು.ಕೃಷಿ ಪಂಪ ಸೆಟಗಳಿಗೆ ನಿರಂತರ 8 ಗಂಟೆ ವಿದ್ಯೂತ ಕೊಡಬೇಕು. ಕಾವೇರಿ ಜಲಾನಯನ ಪ್ರದೇಶದ ಆಯಕಟ್ಟುಗಳಿಂದ ತಮಿಳನಾಡುಗೆ ನೀರ ಹರಿಸವುದು ನಿಲ್ಲಿಸಿ ಕಾನೂನ ಹೊರಾಟಕ್ಕೆ ಮುಂದಾಗಿ ರಾಜ್ಯದ ರೈತರನ್ನು ರಕ್ಷಿಸಬೇಕು. ಕಬ್ಬು ಬೇಳೆಗಾರರ ಸಮಸ್ಯಯನ್ನು ಬಗೆ ಹರಿಸಬೇಕು. ಈಲ್ಲೇಯಲ್ಲಿ ಸ್ಪ್ರಿಂಕ್ಲರ್ ಸಲುವಾಗಿ ರೈತರು ಸಾವೀರಾರು ಅರ್ಜಿಗಳನ್ನು ಸಲ್ಲಿಸಿ ಡಿ.ಡಿಯನ್ನು ತೆಗೆದುರಿತ್ತಾರೆ. ಆದರೆ ಸರ್ಕರ ಕೃಷಿ ಇಲಾಖೆಯಿಂದ ರೈತರಿಗೆ ಸ್ಪ್ರೀಕಲ್‌ರ ಪೈಪುಗಳನ್ನು ಅರ್ಜಿ ಹಾಕಿದ ರಯತರಿಗೆ ತಕ್ಷಣ ಕೊಡಬೇಕು. ಜಿಲ್ಲೆಯಲ್ಲಿ ಮಳೆಕೊರತೆಯಿಂದ ಬೇಳೆ ಓನಗಿದ್ದು ಇಳುವರಿ ಸಂಪುರ್ಣ ಕುಂಟಿತವಾಗಿದೆ. ಕೂಡಲೆ ವಿಮಾ ಕಂಪನಿಯಿಂದ ಹಣಕೊಡುವ ವ್ಯವಸ್ಥೆ ಮಾಡಬೇಕು. ಕಬ್ಬು ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಶೇ: 10.25 ಇಳುವರಿಯನ್ನು ಆಧಾರವಾಗಿ ಇಟ್ಟುಕೊಂಡಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ಮಾರ್ಪಾಡು ಮಾಡಿ ಶೇ: 8.5 ಇಳುವಳಿ ಮಾನದಂಡವನ್ನು ಅನುಸರಿಸಬೇಕು. ಉತ್ಪನ್ನವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದ್ದು, ಬೆಲೆ ನಿಗದಿಯಲ್ಲಿ ರೈತರನ್ನು ರಕ್ಷಿಸುವ ನೀತಿಯನ್ನು ಅನುಸರೀಸಬೇಕು. ರಾಜ್ಯದ ಸುಮಾರು 15 ಜಿಲ್ಲೆಯಲ್ಲಿ ತೆಂಗು ಬೇಳೆಯಲಾಗುತ್ತಿದ್ದು, ಕೊಬ್ಬರಿ ಬೇಲೆ ಕುಸಿತದಿಂದು ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. 1-ಕ್ವಿಂಟಾಲ್ ಕೊಬರಿಗೆ 16,760 ರೂ ಉತ್ಪನ್ನ ವೆಚ್ಚವಾಗುತ್ತದೆ. ಎಮದು ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆ ಅಂದಾಜಿಸಿದೆ. ಆದರೆ ಕೆಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ 1-ಕ್ಕೆ 11,750 ರೂಗಳನ್ನು ಘೊಷಣೆ ಮಾಡಿದೆ. ಈ ಬೆಲೆಯು ನಷ್ಠದ ಬೆಲೆಯಾಗಿದ್ದು, ಕೇಂದ್ರ ಸಾರ್ಕಾರ ಪುನರ್ ಪರಿಶೀಲನೆ ಕ್ವಿಂಟಾಲ್ ಕೊಬರಿಗೆ ಕನಿಷ್ಠ 20,000/- ರೂ. ಬೆಂಬಲ ಬೆಲೆಯನ್ನು ನಿಗದಿ ಮಾಡಿ ಕೊಳ್ಳುವುದರೆ ಮೂಲಕ ತೆಂಗು ಬೆಳೆಗಾರರನ್ನು ರಕ್ಷಿಸಬೇಕು. ತೊಗರಿ ಬೆಳೆಯು ವಾಣಿಜ್ಯ ಬೆಲೆಯಾಗಿದ್ದು ವಾರ್ಷಿಕ ಬೆಳೆಯಾಗಿದೆ. ಈ ಬೆಳೆಯು ಸುಮಾರು 7 ತಿಂಗಳ ಬೆಳೆಯಾಗಿದೆ ಆದರೆ ವರ್ಷಕ್ಕೆ ಒಂದೆ ಬೇಳೆ ಬರುವುದರಿಂದ ತೊಗರಿ ಬೆಳೆಯ ಬೆಲೆಯ ಕನಿಷ್ಠ ಬೆಂಬವನ್ನು ಕೂಂಟಲಿಗೆ 10,000/- ಬೆಲೆ ನಿಗದಿ ಗೊಳಿಸಬೇಕು. ತೊಗರಿ ಬೆಳೆಯುವ ರೈತರಿಗೆ ನ್ಯಾಯ ಒದಗಿಸಬೇಕು. ಬೀದರ ಜಿಲ್ಲೇಯ ಪಾಲಿನ ನಿರನ್ನು ರಕ್ಷನೆರ ಮಾಡದು ಗೊದಾವರಿ ಬೆಸನ ಸಂಪೂರ್ಣ ನೀಡು ಬಳಕೆಯಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೊಗದಲ್ಲಿ ಎರಡು ಸಾವಿರ ಕೋಟಿ ಹಣ ಮಿಸಲಿಟ್ಟು ನಿರಾವರಿ ಯೋಜನೆ ರೂವೆನೆ ಬೀದರ ಜಿಲ್ಲೆ ಬರಗಾಲಕ್ಕೆ ತುತ್ತವಾಗದನ್ನು ತಪ್ಪಿಸಬೇಕು. ಕೃಷಿಯಲ್ಲಿ ಕೇಲಸ ಮಾಡುವ ರೈತರು ಮತ್ತು ಕಾರ್ಮಿಕರಿಗೆ ಅನಾಹುಹುಗಳಾದರೆ ಅವರಿಗೆ ಪರಿಹಾರ ಮಾಶಾಸನವನ್ನು ಕೊಡುವ ವ್ಯೆವಸ್ಥೆ ಮಾಡಬೇಕು.ಕೃಷಿ ಸಾಲದ ಮೇಲೆ ಬ್ಯಾಂಕಿನಲ್ಲಿ ಸಿಬಿಲ್ ಮಾನದಂಡ ತೆಗೆದು ಹಾಕಬೇಕು. ಇದನ್ನು ಬ್ಯಾಂಕಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ರೈತ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಕೊಂಡಿಬಾ ಪಾಮಢರೆ, ನಾಗಶೆಟ್ಟಿ ಲಂಜವಾಡೆ, ಖಾಶಿಮ ಅಲಿ , ಬಸವರಾಜ ಅಷ್ಟುರ, ವಿಠಲ ರೆಡ್ಡಿ ಅಣದೂರ , ಶಾಂತಮ್ಮಾ ಮುಲಗೆ, ಮುಖಿಮೊದಿನ ಪಟೆಲ,ವಿಜಯಕುಮಾರ ಬಾವಗಿ, ಶಾಮಣಾ ಬಾವಗೆ ಹಾಗೂ ಅನೇಕ ರೈತ ಬಾಧವರು ಇದ್ದರು.