ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕಾ ಪದಾಧಿಕಾರಿಗಳ ಆಯ್ಕೆ
ನಗರದ ಕಲ್ಯಾಣ ಮಂಟಪ ಚಿದ್ರಿ ಭವನದಲ್ಲಿ ರಾಜ್ಯ ಸಮಿತಿಯ ಆದೇಶದ ಮೇರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಶ್ರೀ ರವಿಕುಮಾರ ಎಸ್. ವಾಘಮಾರೆ, ರಾಜ್ಯ ಸಂಘಟನಾ ಸಂಚಾಲಕರು ಮುಖ್ಯ ಅತಿಥಿಗಳಾಗಿ ಜಗನ್ನಾಥ ಗಾಯಕವಾಡ, ಜಿಲ್ಲಾ ಸಂಚಾಲಕರು ಬೀದರ ಇವರ ನೇತೃತ್ವದಲ್ಲಿ ಆಯ್ಕೆ ಮಾಡುವದರ ಮುಖಾಂತರ ಸಭೆಯನ್ನು ಉದ್ದೇಶಿಸಿ ರವಿಕುಮಾರ ಎಸ್. ವಾಘಮಾರೆ ಯವರ ಕರ್ನಾಟದಲ್ಲಿ ದಲಿತ ಚಳುವಳಿ ಶೋಷಿತರ ಬಹುಜನರ ದೀನ ದಲಿತರ, ರೈತರ, ಮಹಿಳೆಯರ ಪರವಾಗಿ ಹೋರಾಟ ಮಾಡಿರುವ ಚಳುವಳಿ ಪ್ರತಿ ಹಳ್ಳಿಯಿಂದ ರಾಜ್ಯದ ವರೆಗೆ ಛಾಪು ಮುಡಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಿದ್ದಾಂತವಾಗಿದ್ದು ಅನ್ಯಾಯ ಅತ್ಯಾಚಾರ ವಿರುದ್ಧ ಮಾಡಿರುವ ಮತ್ತು ಅದೇ ರೀತಿಯಾಗಿ ಬುದ್ಧ-ಬಸವ-ಅಂಬೇಡ್ಕರ ತತ್ವದ ಸಿದ್ಧಾಂತದ ಮೇಲೆ ನಡೆದಿರುವ ಸಂಘಟನೆ ಪ್ರೋ. ಬಿ. ಕೃಷ್ಣಪ್ಪಾನವರ ಸಿದ್ದಾಂತದ ಮೇರೆಗೆ ತಾವು ಮತ್ತು ದಲಿತರ ಪರವಾಗಿ ಸಮಿತಿಗಳನ್ನು ರಚಿಸಿ ಪುನಃ ಚೇತನಗೊಳಿಸಿ ದಿನ ದಲಿತರ ಹಿಂದುಳಿದ ಅಲ್ಪಾಸಂಖ್ಯಾತರ ಹಕ್ಕುಗಳ ಗೋಸ್ಕರ್ ಹೋರಾಟ ಮಾಡಿ ನ್ಯಾಯವನ್ನು ನೀಡಬೇಕು. ಬೀದರ ಜಿಲ್ಲೆಯ ಪ್ರತಿ ಹಳ್ಳಿಯಲ್ಲಿ ಬಿ.ಕೆ. ಯವರ ಸಿದ್ದಾಂತದ ಜೊತೆಗೆ ಸಂಘಟನೆಯ ಬಲಪಡಿಸಿ ಜಿಲ್ಲೆಯಿಂದ ಹಳ್ಳಿಯ ವರೆಗೆ ಸಂಘಟನೆಯನ್ನು ಕಟ್ಟಬೇಕು. ದಲಿತರ ಸಾಮಾಜಿಕ ನ್ಯಾಯ ನೀಡಲು ಸಜ್ಜಾಗಬೇಕೆಂದು ಸಭೆಯ ಮೂಲಕ ಮಾತನಾಡುತ್ತ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಜಿಲ್ಲಾ ಪದಾಧಿಕಾರಿಗಳು : ಜಗನ್ನಾಥ ಗಾಯಕವಾಡ ಜಿಲ್ಲಾ ಸಂಚಾಲಕರು, ಜಿಲ್ಲಾ ಸಂಘಟನಾ ಸಂಚಾಲಕರು : ಜಗನ್ನಾಥ ವಾಲಂಕರ್, ಕಲ್ಲಪ್ಪಾ ಬಂದೇ, ಭಗತರಾಜ ಸಾಗರ, ಎಡಿಸನ್ ಸುಧಾಕರ, ರಾಜಕುಮಾರ ಡೊಂಗ್ರೆ, ವಿಶಾಲ ಟೇಕರಾಜ, ಶಶಿಧರ ಜ್ಯೋತಿ, ಜಿಲ್ಲಾ ಖಚಾಂಚಿ : ರಾಜಕುಮಾರ ಜಯಂ
ತಾಲೂಕಾ ಪದಾಧಿಕಾರಿಗಳು : ಮಾಣಿಕರಾವ ಎಂ.ಬಿ. ತಾಲೂಕಾ ಸಂಚಾಲಕರು, ಬೀದರ ತಾಲೂಕಾ ಸಂಘಟನಾ ಸಂಚಾಲಕರು ಃ ಅಶೋಕಕುಮಾರ ಜಾಂಪಾಡ, ಸುಧಾಕರ ದೊಡ್ಡಿ, ಶಿವರಾಜ ಸುಲ್ತೆö್ಯ, ಶಿಮೋನ್ ಕಾಳೆ, ಪವನಕುಮಾರ ಚಿಕ್ಕಪೇಟ್, ಸುನೀಲ ಚಿಲ್ಲರ್ಗಿ, ಸಾಗರ ಸಾತೋಳ್ಳಿಕರ್, ನಾಗೇಂದ್ರ ಮರಖಲ್, ತಾಲೂಕಾ ಖಚಾಂಚಿ ಃ ಚಂದ್ರಕಾAತ ನಾಗೂರೆ, ಈ ಕೆಳಕಂಡAತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.