ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಹೆಗಡೆ ಉಚ್ಛಾಟನೆ, ನೂತನ ಅಧ್ಯಕ್ಷನೇಮಕ
ಬೀದರ್: ಸಂಘಟನೆ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸ್ಥಾನದಿಂದ ಪ್ರದೀಪ ಹೆಗಡೆ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫನಾರ್ಂಡಿಸ್ ಹಿಪ್ಪಳಗಾಂವ್ ತಿಳಿಸಿದ್ದಾರೆ.
ಸಮಿತಿಯ ನೂತನ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಹುದ್ದೆ ಆಯ್ಕೆಗಾಗಿ ಸೋಮವಾರ ನಗರದಲ್ಲಿ ಸಭೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ವಿಜಯಕುಮಾರ ಹಿಪ್ಪಳಗಾಂವ, ಜಿಲ್ಲಾ ಉಪಾಧ್ಯಕ್ಷರಾಗಿ ಕಮಲಾಕರ ಎಲ್. ಹೆಗಡೆ, ಮಹಾಪ್ರಧಾನ ಕಾರ್ಯದರ್ಶಿಯಾಗಿ ಡೇವಿಡ್ ನಾಮದಾಪೂರ, ಕಾರ್ಯಾಧ್ಯಕ್ಷ ದತ್ತಾತ್ರಿ ಜ್ಯೋತಿ, ಜಿಲ್ಲಾ ವಕ್ತಾರ ಪೀಟರ್ ಶ್ರೀಮಂಡಲ, ಪ್ರಧಾನ ಕಾರ್ಯದರ್ಶಿ ಸ್ವಾಮಿದಾಸ ಮೇಘಾ, ಸಂಘಟನಾ ಕಾರ್ಯದರ್ಶಿ ಜೈಶೀಲ ಕಲವಾಡ, ಖಜಾಂಚಿ ಜೈಶೀಲ ಮೇತ್ರ, ಸಹ ಕಾರ್ಯದರ್ಶಿ ಜಯರಾಜ್ ಚಿಲ್ಲರ್ಗಿ ಅವರನ್ನು ನೇಮಕ ಮಾಡಲಾಗಿದೆ.
ಸಭೆಯಲ್ಲಿ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫನಾರ್ಂಡಿಸ್ ಹಿಪ್ಪಳಗಾಂವ, ನರೇಂದ್ರ ಬಾಬು ಮಾದಿಗ, ಚಂದ್ರಕಾಂತ ಹಿಪ್ಪಳಗಾಂವ ಇತರರಿದ್ದರು.