ಬೀದರ್

ಜನೌಷಧಿ ಕೇಂದ್ರಗಳಲ್ಲಿ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾರವರು ಜನತೆಯಲ್ಲಿ ಮನವಿ

ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾರವರು ಉತ್ತರಿಸಿ, ಜುಲೈ 17ರವರೆಗೆ 915 ಔಷಧಿಗಳಿಗೆ ಸೀಲಿಂಗ್ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. ಈ ಪೈಕಿ 691 ಔಷಧಗಳನ್ನು ರಾಷ್ಟ್ರೀಯ ಅಗತ್ಯ ಔಷಧಿಗಳ (ಓಐಇಒ) 2022 ರ ಅಡಿಯಲ್ಲಿ ಮತ್ತು 224 ಔಷಧಿಗಳನ್ನು ಓಐಇಒ 2015 ರ ಅಡಿಯಲ್ಲಿ ನಿಗದಿಪಡಿಸಲಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಜೊತೆಗೆ, ಔಷಧಗಳ ಬೆಲೆ ನಿಯಂತ್ರಣ ಆದೇಶ, 2013 ರ ಅಡಿಯಲ್ಲಿ, ಜುಲೈ 7, 2023 ರೊಳಗೆ ಸುಮಾರು 2,450 ಹೊಸ ಔಷಧಿಗಳ ಚಿಲ್ಲರೆ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಿಗೆ (ಪಿಎಂಬಿಜೆಕೆ) ಸಂಬಂಧಿಸಿದಂತೆ, ದೇಶದಾದ್ಯಂತ ಈಗ 9,512 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಖೂಬಾ ಹೇಳಿದರು. ಮಾರ್ಚ್ 2024 ರೊಳಗೆ 10,000 Pಒಃಎಏ ಗಳನ್ನು ತೆರೆಯುವ ಗುರಿ ಇದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ದೊರೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಜನೌಷಧಿಗಳತ್ತ ಮುಖ ಮಾಡುತ್ತಿದ್ದಾರೆ, ಇದರ ಜೊತೆಗೆ ಸ್ವಯಮ ಉದ್ಯೋಗ ಮಾಡಬಯಸುವ ವಿದ್ಯಾವಂತರು ಸಹ ಜನೌಷಧಿ ಪ್ರಾರಂಭಿಸಲು ಆಸಕ್ತಿ ತೊರುತ್ತಿದ್ದಾರೆ ಎಂದು ತಿಳಿಸಿದರು.
ಉದಾಹರಣೆಗೆ ಹೊರಗಡೆ ಮೇಡಿಕಲ್‍ಗಳಲ್ಲಿ ರೆಬಿಜ್ ಡಿ.ಎಸ್.ಆರ್. 1 ಸ್ಟ್ರೀಪ್ ಗುಳಿಗೆಗೆ 180 ರೂಪಾಯಿ ಇದ್ದರೆ, ಜನೌಷಧಿಯಲ್ಲಿ ಕೇವಲ 22 ರೂಪಾಯಿಗೆ ಸಿಗಲಿದೆ, ಪೆಂಟಾಪ್-40, 1 ಸ್ಟ್ರಿಪ್ 180 ರೂಪಾಯಿಗೆ ಸಿಕ್ಕಿದರೆ ಜನೌಷಧಿಯಲ್ಲಿ 12 ರೂಪಾಯಿಗೆ ಸಿಗಲಿದೆ, ಆಟೋರವಾಸ್ಟಾಟಿನ್ 1 ಸ್ಟ್ರೀಪ್ ಗುಳಿಗೆಗೆ 240 ರೂಪಾಯಿ, ಜನೌಷಧಿಯಲ್ಲಿ ಕೇವಲ 22 ರೂಪಾಯಿಗೆ ಸಿಗಲಿದೆ, ಮೆಟ್ ಫಾರಮಿನ್ ಹೈಡ್ರೋ ಕ್ಲೊರೈಡ್ ಗಿಲ್ಮಿ ಪ್ರೈಡ್ 1 ಎಮ್.ಜಿ 1 ಸ್ಟ್ರೀಪ್ ಗುಳಿಗೆ 97 ರೂಪಾಯಿಗೆ ಸಿಕ್ಕಿದರೆ ಜನೌಷಧಿಯಲ್ಲಿ ಕೇವಲ 18 ರೂಪಾಯಿಗೆ ಸಿಗಲಿದೆ. ಈ ಎಲ್ಲಾ ಗುಳಿಗೆಗಳು ಜನರು ದಿನನಿತ್ಯ ಬಳಸುವಂತಹ ಗುಳಿಗೆಗಳಾಗಿದ್ದು,
ಅತಿ ಕಡಿಮೆ ಬೆಲೆಯಲ್ಲಿ ಜನೌಷಧಿಗಳಲ್ಲಿ ಸಿಗುತ್ತಿವೆ. ಇಲ್ಲಿಯವರೆಗೆ ದೇಶದ ಜನತೆಗೆ ಜನೌಷಧಿಗಳಿಂದ ಖರಿದಿಸಿದ ಔಷಧಿಗಳಿಂದ ಒಟ್ಟು 19352 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಬಡವರಿಗಾಗಿ ಜನೌಷಧಿ ಕೇಂದ್ರಗಳು ಪ್ರಾರಂಭಿಸಲಾಗಿದ್ದು, ಸಮಸ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ತಮಗೆ ಬೇಕಾಗುವ ಔಷಧಿಗಳು ಜನೌಷಧಿಯಲ್ಲಿ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾರವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!