ಜನರಿಗೆ ಕಾಸ ಸಂಸ್ಥೆ ಬಗ್ಗೆ ಆಳವಾಗಿ ಮಾಹಿತಿ ಕೊಟ್ಟ : ಸಂಯೋಜಕರಾದ D. ಶ್ರೀನಿವಾಸ್
ಉಜನಿ ಗ್ರಾಮದಲ್ಲಿ ಕಾಸ ಸಂಸ್ಥೆಯಿಂದ ಅಯೋಜಿಸಿದ ಸ್ಥಳೀಯ ಸಂಪನ್ಮೂಲ ಕ್ರೋಢೀ ಕರಣ, ಕಾರ್ಪಸ್ ಬಿಲ್ಡಿಂಗ್ PO’S ಸಾಮರ್ಥ್ಯಗಳ ನಿರ್ಮಾಣದ ಬಗ್ಗೆ, ನಮ್ಮ ಕಾಸ ಸಂಸ್ಥೆಯ ಮುಖ್ಯ ಸಂಯೋಜಕರಾದ D. ಶ್ರೀನಿವಾಸ್ ಸರ್ ಅವರು ಜನರಿಗೆ ಸಂಘಟನೆ ಬಗ್ಗೆ ಆಳವಾಗಿ ಮಾಹಿತಿ ಕೊಟ್ಟಿದ್ದರು ಯುವಕರ ಸಂಘಟನೆ ಮಹಿಳಾ ಸಂಘಟನೆ ಹಾಗೂ ರೈತರ ಸಂಘಟನೆ ಬಗ್ಗೆ ಸಂಘಗಳ ಅಭಿವೃದ್ಧಿಗೋಸ್ಕರ ಸರಳ ರೀತಿಯಲ್ಲಿ ಸ್ಪಷ್ಟವಾಗಿ ನಿಖರವಾಗಿ ಕ್ರಮಬದ್ಧವಾಗಿ ಎಲ್ಲಾ ರೀತಿಯ ಪ್ರಯೋಜನ ಸರ್ಕಾರದಿಂದ ಬರುವುದನ್ನು ತೆಗೆದುಕೊಳ್ಳಬೇಕೆಂದು ಅಲ್ಲಿನ ಜನರಿಗೆ ತಿಳಿಸಿದರು ಔರಾದ ತಾಲೂಕಿನ ಪ್ರತಿಯೊಂದು ಗ್ರಾಮದ ಜನಗಳ ಸಂಘಟನೆಗಳ ಬಗ್ಗೆ ಬೋಧನೆ ಶ್ರೀನಿವಾಸ್ ಸರ್ ಹೇಳಿದರು, ದಿಲೀಪ್ ಸರ್ ಅಲ್ಲಿನ ಜನರಿಗೆ ಕೂಡಿಸಿ ಗುಂಪುಗಳ ಮಾಡಿ ವಿವರಣೆ ಮಾಡಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಫಾಸ್ಟರ್ ಸುಮಂತ್ , ಕಾಸ ಸಂಸ್ಥೆಯಿಂದ ಬಂದ ಶ್ರೀನಿವಾಸ್ ಸರ್ ಸಂಯೋಜಕರು, ಹಾಗೂ ಸ್ವಯಂಸೇವಕರದ ನವನಾಥ್ ಮತ್ತು ದಿಲೀಪ್ ಕುಮಾರ್, ಉಜನಿ ಗ್ರಾಮದ ಜನರು ಉಪಸ್ಥಿತಿಯಲ್ಲಿದ್ದರು .