ಜನರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ : ಅಂಚೆ ಅಧೀಕ್ಷಕ ವಿ.ಎ. ಚಿತಕೋಟೆ
ಬೀದರ್: ಸೆ.30:ಸ್ವಚ್ಛತೆಯೇ ಸೇವೆ ಅಭಿಯಾನದ ಪ್ರಯುಕ್ತ ಅಂಚೆ ಇಲಾಖೆಯ ಸಿಬ್ಬಂದಿ ನಗರದಲ್ಲಿ ಬುಧವಾರ ಸ್ವಚ್ಛತೆ ಜಾಗೃತಿ ಜಾಗೃತಿ ಜಾಥಾ ನಡೆಸಿದರು.
ಅಂಚೆ ಕೇಂದ್ರ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು.
ಮನೆ, ಓಣಿ, ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ದಿಸೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ ಎಂದು ಜಾಥಾಕ್ಕೆ ಚಾಲನೆ ನೀಡಿದ ಬೀದರ್ ಅಂಚೆ ಅಧೀಕ್ಷಕ ವಿ.ಎ. ಚಿತಕೋಟೆ ಹೇಳಿದರು.
ಅಂಚೆ ಇಲಾಖೆಯ ಬೀದರ್ ವಿಭಾಗದ ವತಿಯಿಂದ ಅಕ್ಟೋಬರ್ 2 ರ ವರೆಗೆ ಅಂಚೆ ಕಚೇರಿಗಳ ಒಳ, ಹೊರಗೆ ಸ್ವಚ್ಛತೆ, ಸಸಿ ನೆಡುವಿಕೆ, ಶಾಲೆಗಳ ಆವರಣದಲ್ಲಿ ಸಸಿ ನೆಡುವಿಕೆ, ಮಕ್ಕಳಲ್ಲಿ ಪರಿಸರ ಜಾಗೃತಿ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಚೆ ಪಾಲಕ ರಾಜೇಂದ್ರ ವಗ್ಗೆ, ಮಂಗಲಾ ಭಾಗವತ್, ದತ್ತಾತ್ರಿ, ಕಲ್ಲಪ್ಪ ಕೋಣಿ, ಚಿದಾನಂದ ಕಟ್ಟಿ ಹಾಗೂ ಅಂಚೆ ಸಿಬ್ಬಂದಿ ಪಾಲ್ಗೊಂಡಿದ್ದರು.