ಬೀದರ್

ಜನಪ್ರಿಯ ಸ್ವಾಮಿ ನಾರಾಯಣ ಗುರುಕುಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ.

ಕಲ್ಬುರ್ಗಿ: 21 ಜೂನ್: ಕಲ್ಬುರ್ಗಿಯ ಹೊರವಲಯದಲ್ಲಿರುವ ಪ್ರತಿಷ್ಠಿತ ಸ್ವಾಮಿ ನಾರಾಯಣ ಗುರುಕುಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ಇಂದು ಪರಮಪೂಜ್ಯ ನಯನಪ್ರಿಯದಾಸ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಪತಂಜಲಿ ಯೋಗ ಗುರುಗಳಾದ ಶ್ರೀಯುತ ವೀರೇಶ್ ಕುಲಕುರ್ಣಿ ಇವರು ಯೋಗದ ಮಹತ್ವದೊಂದಿಗೆ ವಿವಿಧ ಆಸನಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಪರಮಪೂಜ್ಯರು ಯೋಗದಿಂದ ಮಾನಸಿಕ ಮತ್ತು ದೈಹಿಕ ಕ್ಷಮತೆ ವೃದ್ಧಿಯಾಗುತ್ತದೆ ಯೋಗಕ್ಕೆ ರೋಗವನ್ನು ಹೊಡೆದೋಡಿಸುವ ಶಕ್ತಿ ಇದೆ.

ಎಂದು ತಿಳಿಸಿ ನಾವುಗಳು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಂಡು ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಶಾಲೆಯ ಮಕ್ಕಳು, ಪ್ರಾಚಾರ್ಯದ್ವಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸಂತಸಗೊಂಡರು. ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಯುತ ಶಿವಾಜಿ ಸರ್ ಅವರು ನಿರೂಪಿಸಿದರು.

Ghantepatrike kannada daily news Paper

Leave a Reply

error: Content is protected !!