ಬೀದರ್

ಜಗಪಾಲ್ ಸಿಂಗ್ ಪವಾರ್ ಅವರ 23ನೇ ಪುಣ್ಯತಿಥಿ ಹಾಗೂ ಸಂಗೀತ ಕಾರ್ಯಕ್ರಮ

ಹಾರ್ಮೋನಿಯಂ, ಸಿತಾರ್ ಗಿಟಾರ್, ತಬಲಾ ಮುಂತಾದ ಸಂಗೀತ ಪರಿಕರಗಳಾಗಲಿ ಅಥವಾ ಶಾಸ್ತ್ರೀಯ/ಹಿಂದುಸ್ತಾನಿ ಗಾಯನವನ್ನಾಗಲಿ ಆಲಿಸುವುದರಿಂದ ಮನಸ್ಸು ಏಕಾಗ್ರವಾಗಿ,  ಶರೀರದಲ್ಲಿ ಚೈತನ್ಯದ ಚಿಲುಮೆ ಉಂಟಾಗುತ್ತದೆ  ಎಂದು ಗುರುರಾಜ್ ಸೇವಾ ಸಂಘ ರಾಘವೇಂದ್ರ ಮಠದ ಅಧ್ಯಕ್ಷರಾದ  ಸುಧಾಕರ್ ಪಾಟೀಲ್ ರವರು ಅಭಿಪ್ರಾಯಪಟ್ಟರು. ಅವರು  ಇಂದು  ರಾಘವೇಂದ್ರ ಮಠದ ಸಭಾಂಗಣದಲ್ಲಿ ಸಂಗೀತ ಕಲಾಮಂಡಲದಿAದ ಆಚರಿಸಲಾದ ದಿವಂಗತ ಜಗಪಾಲ್ ಸಿಂಗ್ ಪವಾರ್ ಅವರ 23ನೇ  ಪುಣ್ಯತಿಥಿ ಅಂಗವಾಗಿ ಜಿಎಸ್‌ಪಿ ಪ್ರಶಸ್ತಿ ಪ್ರಧಾನ ಹಾಗೂ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಯುವ ಪೀಳಿಗಯು ಹೆಚ್ಚಾಗಿ ಪಾಶ್ಜಾತ್ಯ ಸಂಗೀತದ ಕಡೆಗೆ ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಶಾಸ್ತ್ರೀಯ ಸಂಗೀತದಲ್ಲಿ ಶಕ್ತಿ ಇದೆ ಹಾಗೂ ಹಳೆಯ ಚಿತ್ರಗೀತೆಗಳಲ್ಲಿ ನೈತಿಕತೆಯ ಪಾಠ ಇದೆ. ಆದ್ದರಿಂದ ಇಂತಹ ಸಂಗೀತವನ್ನು ಹೆಚ್ಚಾಗಿ ಆಲಿಸಬೇಕೆಂದು ಜನರಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ನಿರ್ದೇಶಕರಾದ ಡಾ. ಜಗನ್ನಾಥ್ ಹೆಬ್ಬಾಳೆ ಅವರು ಮಾತನಾಡಿ, ಬಹುಷ್ಯ ದಿವಂಗತ ಜಗಪಾಲಸಿಂಗ್ ಪವಾರ್ ರವರು ಬೀದರಿನಲ್ಲಿ ಸಂಗೀತವನ್ನು ಪರಿಚಯಿಸಿದ ಪ್ರಥಮ ವ್ಯಕ್ತಿಗಳಾಗಿದ್ದರು ಎಂದು  ಕೊಂಡಾಡಿದರು. ಕಳೆದ 25 ವರ್ಷಗಳಿಂದ ಸಂಗೀತದಲ್ಲಿ ಸತತ ಸೇವೆ ಸಲ್ಲಿಸುತ್ತಿರುವ ಶ್ರೀ ಮಡಿವಾಳಯ್ಯ ಸಾಲಿಯವರಿಗೆ  2022ನೇ ಸಾಲಿನ ಜೆ.ಎಸ್.ಪಿ. ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅದೇ ರೀತಿ ಮುಂಬೈನಲ್ಲಿ, ರಾಷ್ಟ್ರಮಟ್ಟದ ಇಂಡಿಯನ್ ಐಡಲ್ 14  ಸ್ಪರ್ಧೆಗೆ  ಆಯ್ಕೆಯಾಗಿರುವ ಕುಮಾರಿ ಶಿವಾನಿ ಶಿವದಾಸ  ಸ್ವಾಮಿ ಅವರನ್ನು ಕೂಡ ಸನ್ಮಾನಿಸಲಾಯಿತು. ಹೈದರಾಬಾದಿನ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರದ ಸಿತಾರ್ ಕಲಾವಿದರಾದ  ಸಂಜಯ್ ಕಿನಗಿ ಮತ್ತು ತಬಲಾ ಸಾತ್ ನೀಡಿರುವ ಸಂಜಯ್ ಕುಲಕರ್ಣಿಯವರು ಸಿತಾರ್ ಹಾಗೂ ತಬಲ ಜುಗಲ್ಬಂದಿ ಯನ್ನು ಶೋತ್ರಗಳ ಮನ ತಣಿಸುವಂತೆ ನುಡಿಸಿದರು. ಕೊಲ್ಕತ್ತಾ ಐಟಿಸಿ ಸ್ಕಾಲರ್ ಶ್ರೀಕೃಷ್ಣ ಮುಖೇಡ್ಕರ್ ಹಿಂದುಸ್ತಾನಿ ಗಾಯನ ಮಾಡಿದರು ,  ವಿನಾಯಕ್ ಚೌದ್ರಿ ಹಾರ್ಮೋನಿಯಂ ಹಾಗೂ ಮಹೇಶ್ ಪಾಂಚಾಳ್ ರವರು ತಬಲಾಸಾಥ್ ನೀಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಹಿರಿಯ ಕಲಾವಿದರಾದ ಪಂಡಿತ್ ವೀರಭದ್ರಪ್ಪ ಗಾದಗಿಯವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷರಾದ ಪಂಡಿತ್ ರಾಜೇಂದ್ರ ಸಿಂಗ್ ಪವಾರ್ ರವರು ಮಾತನಾಡಿ, ಕಳೆದ 22 ವರ್ಷಗಳಿಂದ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿ ಖ್ಯಾತ ನಾಮರಾದ ಕಲಾವಿದರನ್ನು ಆಹ್ವಾನಿಸಿ ಪ್ರತಿ ವರ್ಷ ಸಂಗೀತ ಕಾರ್ಯಕ್ರಮವನ್ನು ನಡೆಸಿ ಕೊಂಡು ಬರಲಾಗುತ್ತಿದೆ ಎಂದು ನುಡಿದರು.   ವೀರಭದ್ರಪ್ಪ ಉಪ್ಪಿನ್ ರವರು ಸಂಚಾಲನೆ ಮಾಡಿದರು. ಸಂಘದ ಉಪಾಧ್ಯಕ್ಷರಾದ ರಮೇಶ್ ಗೋಯಲ್  ಸ್ವಾಗತಿಸಿದರು ಕಾರ್ಯದರ್ಶಿ ಎಸ್.ಆರ್. ಸಂಗಮಕರ್ ರವರು ಕೊನೆಯಲ್ಲಿ ವಂದಿಸಿದರು.  ಆರ್. ಆರ್. ಮುನಿಗ್ಯಾಲ್ , ಗಂಗಪ್ಪ ಸಾವಳೇ, ಪ್ರಕಾಶ್ ಕುಲಕರ್ಣಿ, ರಾಮಕೃಷ್ಣ ಸಾಳೆ,  ನಾರಾಯಣರಾವ್ ಕಾಂಬಳೆ, ಅರವಿಂದ ಕುಲಕರ್ಣಿ,  ರಾಮುಲು ಗಾದಗಿ,  ಜಗನ್ನಾಥ್ ನಾನ್ಕೆರೆ, ಗುರುಸ್ವಾಮಿ, ಕೃಷ್ಣ ಕುಲಕರ್ಣಿ  ಯವರು ಸೇರಿದಂತೆ ನೂರಾರು ಜನರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಸಾಮೂಹಿಕ ರಾಷ್ಟ್ರಗೀತೆಯ ನಂತರ ಕಾರ್ಯಕ್ರಮವು ಮುಕ್ತಾಯವಾಯಿತು.

Ghantepatrike kannada daily news Paper

Leave a Reply

error: Content is protected !!