ಚಟ ಚಟ್ಟಕ್ಕೇರಿಸುತ್ತದೆ_ .ಡಾ.ಶಿವಾನಂದ ಸ್ವಾಮಿಗಳು.
ಮಹಾಂತ ಜೋಳಿಗೆ ರಾಜ್ಯದ ಯುವ ಶಕ್ತಿಯ ಆರೋಗ್ಯ ಕಾಪಾಡಿದೆ. ಸ್ವಸ್ಥ ಸಮಾಜ ಕಟ್ಟುವ ಗುರಿ ನಮ್ಮದಾಗಬೇಕು. ನಮ್ಮ ಸಾಧನೆಗೆ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆಂದು ಹುಲಸೂರಿನ ಡಾ.ಶಿವಾನಂದ ಮಹಾಸ್ವಾಮಿಗಳು ನುಡಿದರು.
ಜಿಲ್ಲಾ ಬಸವ ಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡ ವ್ಯಸನ ಮುಕ್ತ ದಿನಾಚರಣೆ ಹಾಗೂ ಶರಣ ಸಂಗಮ ಕಾರ್ಯಕ್ರಮದಲ್ಲಿ ಪೂಜ್ಯರು ಸಾನಿಧ್ಯ ವಹಿಸಿ ಇಲ್ಲಕಲ್ಲಿನ ಡಾ. ಮಹಾಂತ ಅಪ್ಪಗಳು ತನ್ನ ಜೀವತಾವಧಿಯಲ್ಲಿ ಬಿಡಿ ಕಾಸು ಕೇಳಿದವರಿಲ್ಲ ಆದರೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ತನ್ನ ಮಹಾಂತ ಜೋಳಿಗೆಯಲ್ಲಿ ದುಶ್ಚಟ, ದುರ್ಗುಣ, ವ್ಯಸನಗಳನ್ನು ತಮ್ಮ ಜೋಳಿಗೆಗೆ ದಾನ ರೂಪದಲ್ಲಿ ಪಡೆದ ಮಹಾನ್ ಯೋಗಿಗಳು. ವ್ಯಸನ ಮುಕ್ತ ಸಮಾಜ ಕಟ್ಟಲು ಪೂಜ್ಯರು ಸಂಕಲ್ಪ ತೊಟ್ಟಿದರು. ಅನೇಕ ಚಟಗಳು ನಮ್ಮನ್ನು ಚಟ್ಟಕ್ಕೇರಿಸುತ್ತವೆ.
ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಮಹೇಶ ಮಾಶೆಟ್ಟಿ ಇಂದು ಯುವ ಜನಾಂಗ ಅನೇಕ ಚಟಗಳಿಂದ ತತ್ತರಿಸಿದೆ. ಅವರನ್ನೆಲ್ಲ ಸರಿ ದಾರಿಗೆ ತರಲು ಇಂದು ಎಲ್ಲರು ಪಣ ತೊಡಬೇಕಾಗಿದೆ. ಸದ್ಯ ಡ್ರಗ್, ಮೊಬೈಲ್, ಇಂಟರ್ನೆಟ್, ಇನ್ನಿತರ ಅವ್ಯವಹಾರಿಕೆ ಚಟುವಟಿಕೆಗಳಿಂದ ಸಾಂಸ್ಕøತಿಕ ಪರಂಪರೆ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಸಮಾಜ ಅಭಿವೃದ್ಧಿ ಪಡಿಸಲು ಇಂದು ಜಾಗೃತಿಯ ಅರಿವು ಮೂಡಿಸುವ ದಿಶೆಯಲ್ಲಿ ಎಲ್ಲರೂ ಚಿಂತನೆ ಮಾಡಬೇಕಾದ ಅನಿವಾರ್ಯ ಅಂದಿಗಿಂತ ಇಂದು ಅತ್ಯವಶ್ಯಕ ಎಂದರು.
ಹಿರಿಯ ಸಾಹಿತಿಗಳಾದ ಜಯಶ್ರೀ ಸುಕಾಲೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತ ಮನಸ್ಸು ಶಾಂತವಾಗ ಬೇಕಾದರೆ ಯಾವುದೆ ವ್ಯಸನಕ್ಕೆ ಅಂಟಿಕೊಳ್ಳಬಾರದು. ವ್ಯಸನವು ಕ್ಷಣಿಕ ಸುಖ ನೀಡಿದರೆ ಅದು ಮೈ ಉಂಡಮೇಲೆ ಆರೋಗ್ಯ ಜೊತೆಗೆ ಮಾನ ಕೂಡ ಹರಾಜಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಸಮೃದ್ಧ ಬೆಳೆಗೆ ಕಸ ತೊಂದರೆ, ಕಳೆ ತೆಗೆಯದ ಹೊರತು ಬೆಳೆ ಬಾರದು ಅದೇ ರೀತಿ ಮಾನವ ಮಾಹಾ ಮಾನವ ನಾಗಬೇಕಾದರೆ ಚಟಗಳನ್ನು ಬಿಟ್ಟು ತನ್ನ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಪ್ರಯತ್ನ ಮಾಡಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶರಣಪ್ಪ ಮಿಠಾರೆ ಅಧ್ಯಕ್ಷರಾಗಿ ವ್ಯಸನ ಮುಕ್ತ ಸಮಾಜದ ನಿರ್ಮಾಣದ ಪ್ರತಿಜ್ಞೆ ಮಾಡಿಸಿದರು. ಪ್ರಭುರಾವ ವಸ್ಮತೆ ವೇದಿಕೆ ಮೇಲೆ ಉಪಸ್ಥಿತಿ ರಾಗಿ ದಾಸೋಹಿ ಗಂಗಮ್ಮ ಪಾಟೀಲ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನಿಸಿದರು.
ರೋಟರಿ ಕ್ಲಬ್ ಬೀದರ ಅಧ್ಯಕ್ಷರಾದ ಚಂದ್ರಕಾಂತ ಕಾಡಾದಿ, ಕಾರ್ಯದರ್ಶಿ ಸೋಮಶೇಖರ್ ಪಾಟೀಲ, ಕೋಶಾಧ್ಯಕ್ಷರಾದ ಅನೀಲ ಮಸೂದಿ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂತೋಷ ಚಲುವಾ ಸ್ವಾಗತಿಸಿದರೆ, ವಿದ್ಯಾವತಿ ಬಲ್ಲೂರು ವಂದಿಸಿದರೆ ಶಿವಶಂಕರ ಟೋಕರೆ ನಿರೂಪಿಸಿದರು.
ರಾಜಮ್ಮ ಚಿಕ್ಕಪೇಟ ಪ್ರಾರ್ಥನೆ ನಡೆಸಿದರೆ ವಚನಶ್ರೀ ನೌಬಾದೆ ಹಾಗೂ ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿ ಕೊಟ್ಟರು.