ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್: ವಿಜ್ಞಾನ ಕೇಂದ್ರದಲ್ಲಿ ಸಂಭ್ರಮಾಚರಣೆ
ಬೀದರ್ ಬುಧವಾರ ಸಂಜೆ ನಗರದ ಹೊರವಲಯದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಚಂದ್ರಯಾನ್-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವುದನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಬೆಂಗಳೂರಿನ ಇಸ್ರೋದಿಂದ ಕಳಿಸಿದ ವೆಬ್ ಸೈಟ್ ಲಿಂಕ್ ಬಳಸಿಕೊಂಡು ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಯಶಸ್ವಿಗೆ ಭಾರತ ಮಾತೆಕಿ ಜೈ ,ವಂದೆ ಮಾತರಂ ಎಂಬ ಘೋಷಣೆಗಳು ಕೂಗಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕ ಸಲೀಂ ಪಾಷಾ, ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ ಬಿ. ಜಿ. ಮೂಲಿಮನಿ, ಸಮಗ್ರ ಶಿಕ್ಷಣ ಕರ್ನಾಟಕ ವಿಭಾಗದ ಎ. ಪಿ. ಸಿ ಹಾಗೂ ಕೇಂದ್ರದ ನೋಡಲ್ ಅಧಿಕಾರಿ ಹುಡಗೆ ಗುಂಡಪ್ಪಾ, ಪದವಿ ಪೂರ್ವ ಮಹಾವಿದ್ಯಾಲಯ ಮನಳ್ಳಿ ಉಪನ್ಯಾಸಕ ದತ್ತು ತುಪ್ಪದ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಗ್ರಹಾರ ಮಕ್ಕಳು, ಶಿಕ್ಷಕರು, ಸಾರ್ವಜನಿಕರು ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಸಾಯಿನಾಥ್ ನಿಟ್ಟೂರಕರ್, ಶಿವರಾಜ್ ಗೊರನಾಳ್ಕರ್, ಶಿವಮಂಗಲಾ, ಅಜಯ್ ಕುಲಕರ್ಣಿ ಪಾಲ್ಗೊಂಡಿದ್ದರು.