ಚಂದ್ರನ ಮೇಲೆ ಭಾರತ: ಕೇಂದ್ರ ಸಚಿವ ಭಗವಂತ ಖೂಬಾ ಹರ್ಷ
ಚಂದ್ರಯಾನ -3 ಯಶಸ್ವಿ ಉಡಾವಣೆಯ ನಂತರ, ಇಂದು ಸಾಫ್ಟ್ ಲ್ಯಾಂಡಿಂಗ್ ಆಗಿರುವುದು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ, ಹಿಂದೆ ಗುರುವಿನ ಆರ್ಶೀವಾದವಿದ್ದು ಮುಂದೆ ಗುರಿ ಸ್ಪಷ್ಟವಾಗಿದ್ದರೆ, ಎಲ್ಲವನ್ನು ಸಾಧಿಸಬಹುದು ಎಂದು ನಮ್ಮ ಇಸ್ರೋದ ವಿಜ್ಞಾನಿಗಳು ಸಾಧಿಸಿ ತೊರಿಸಿದ್ದಾರೆ, ಈ ಐತಿಹಾಸಿಕ ಕಾರ್ಯಕ್ಕಾಗಿ ಹಗಲಿರುಳು ಶ್ರಮಿಸಿದ, ಎಲ್ಲಾ ವಿಜ್ಞಾನಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಮತ್ತು ಚಂದ್ರಯಾನದ ದಕ್ಷೀಣ ಧ್ರೂವಕ್ಕೆ ತೆರಳಿದ ಮೊದಲ ದೇಶ ನಮ್ಮದಾಗಿದೆ ಎಂದು ತಿಳಿಸಿ ಕೇಂದ್ರ ಸಚಿವ ಭಗವಂತ ಖೂಬಾ ಹರ್ಷ ವ್ಯಕ್ತಪಡಿಸಿದ್ದಾರೆ.
ಇಡಿ ದೇಶಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದೆ, ಭಾರತವು ಎಲ್ಲಾ ರಂಗಗಳಲ್ಲಿ ಸಾಧನೆಗೈದು, ವಿಶ್ವಗುರುವಾಗಿದೆ ಎಂದು ಎಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ದೇಶದ ಉಜ್ವಲ್ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಅತಿ ಅವಶ್ಯಕವಾಗಿದೆ, ನಮ್ಮ ವಿಜ್ಞಾನ ತಂತ್ರಜ್ಞಾನದ ಮೇಲೆ ವಿಶ್ವವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ ನಮ್ಮ ತಂಡ ಎಂದು ತಿಳಿಸಿದ್ದಾರೆ.
ಚಂದ್ರಯಾನ-3 ರಿಂದ ಬಾಹ್ಯಾಕಾಶದ ಸಂಶೋಧನೆ ಹಾಗೂ ನಾವಿನ್ಯತೆಗಳ ಗಡಿಗಳನ್ನು ತಿಳಿಯಲು ಉಪಯುಕ್ತವಾಗಿದೆ, ಚಂದ್ರನ ಮೈಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಇಳುವಿಕೆಯನ್ನು ಪ್ರದರ್ಶಿಸಿ, ಚಂದ್ರನ ಮೇಲೆ ರೋವರ್ ಕಾರ್ಯಾಚರಣೆಗಳನ್ನು ನಡೆಸುವುದು ಮತ್ತು ಚಂದ್ರನ ಮೈಲ್ಮೈಯಲ್ಲಿ ಆನ್-ಸೈಟ್ ಪ್ರಯೋಗಗಳನ್ನು ನಡೆಸುವುದು ಇದರ ಉದ್ದೇಶವಾಗಿರುತ್ತದೆ.
ಚಂದ್ರಯಾನ-2 ವಿಫಲಗೊಂಡಾಗ, ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು, ಇಸ್ರೋ ಮುಖ್ಯಸ್ಥರಿಗೆ ಹಾಗೂ ಎಲ್ಲಾ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪರಿಯಿಂದ, ಹೆಚ್ಚಿನ ಸ್ಪೂರ್ತಿ ಹಾಗೂ ಉತ್ಸಾಹದಿಂದ ನಮ್ಮ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ, ವಿಶ್ವಸ್ಥರದಲ್ಲಿ ಇಂದು ಭಾರತ ದೇಶಕ್ಕೆ ಹೆಮ್ಮೆ ಹಾಗೂ ಗೌರವ ತಂದು ಕೊಟ್ಟಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲಾ ಪ್ರಕ್ರಿಯೆಗಳು ಯಶಸ್ವಿಯಾಗಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಚಂದ್ರಯಾನ ಹಾಗೂ ಬಾಹ್ಯಾಕಾಶ ಸಂಶೋಧನೆಯಲ್ಲಿ ನಾವು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇರಲಿದ್ದೇವೆ, ಇಂತಹ ಸಾಧನೆ ಇಂದು ನಮ್ಮ ವಿಜ್ಞಾನಿಗಳಿಂದಾಗಿದೆ, ಈ ಐತಿಹಾಸಿಕ ಸಾಧನೆ ನಮ್ಮ ಮೋದಿ ಸರ್ಕಾರದಲ್ಲಿ ಸಾದ್ಯವಾಗಿದ್ದು ನಮ್ಮ ಪುಣ್ಯ ಹಾಗೂ ನಮಗೆಲ್ಲಾ ಹೆಮ್ಮೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ.
ಸಮಸ್ತ ಭಾರತಿಯರ ಪರವಾಗಿ ಚಂದ್ರಯಾನ-3ಗಾಗಿ ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ, ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಮತ್ತು ಯಶಸ್ವಿ ಲ್ಯಾಂಡಿಂಗ್‍ಗಾಗಿ ಹರಸಿದ ಕೋಟ್ಯಾಂತರ ಭಾರತಿಯರಿಗೆ ಮತ್ತೊಮ್ಮೆ ನನ್ನ ಧನ್ಯವಾದಗಳು ಹಾಗೂ ಅಭಿನಂದನೆಗಳೆಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.