ಬೀದರ್

ಗ್ರಾಮೀಣ ಮಹಿಳಾ ಹಾಗೂ ವೃತ್ತಿಪರ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಬೀದರ. ಆಗಸ್ಟ್ 27:- 2024-25ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿಯಲ್ಲಿ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸಲಕರಣೆ ಸರಬರಾಜು ಯೋಜನೆಯಡಿಯಲ್ಲಿ ಸುಧಾರಿತ ಸಲಕರಣೆ ಹಂಚಿಕೆಗಾಗಿ ಗ್ರಾಮೀಣ ಭಾಗದ ಕ್ಷೌರಿಕ ಮತ್ತು ಚಮ್ಮಾರಿಕೆ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು https://bidar.nic.in ವೆಬ್‌ಸೈಟ್‌ನಲ್ಲಿ ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಿ ಸಂಬAಧಿಸಿದ ಪೂರಕ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಅಪಲೋಡ್ ಮಾಡಿ ಅರ್ಜಿಗಳನ್ನು 25-09-2024 ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಗ್ರಾಮೀಣ ಪ್ರದೇಶದ ಕಸಬುದಾರರು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೈಗಾರಿಕ ವಿಸ್ತರಣಾಧಿಕಾರಿ ಅಥವಾ ಮೊ.ಸಂ:8217455966, 8722243822, ಉಪನಿರ್ದೇಶಕರು 9342019169 ಅಥವಾ ದೂ.ಸಂ: 08482-233143ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!