ಗ್ರಾಮೀಣ ಜನರಿಗೆ ಡೆಂಗ್ಯು ಜಾಗೃತಿ ಮತ್ತು ಅರಿವು ಕಾರ್ಯಕ್ರಮ
ಬೀದರ ನಗರದ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ಹಾಗು ಬ್ರೇಡ್ಸ ಬೆಂಗಳೂರು ಸಮ್ಮುಖದಲ್ಲಿ ರಾಜನಾಳ, ಸಾಂಗವಿ ಗ್ರಾಮದಲ್ಲಿ ಮೊಬೈಲ್ ಕ್ಲೀನಿಕ್ ವತಿಯಿಂದ ಡೆಂಗ್ಯು ಅರಿವು ಕಾರ್ಯಕ್ರಮ ಹಮ್ಮಿಕೊಳಲಾಯಿತು.
ಈ ಕಾರ್ಯಕ್ರಮದಲ್ಲಿ ಜನರಿಗೆ, ಚರಂಡಿಗಳು ಸ್ವಚ್ಛಗೋಳಿಸುವುದು , ಮನೆ ಸುತ್ತ ಮುತ್ತ ವಾತವರಣ ಚನ್ನಾಗಿಟ್ಟುಕೋಳುವದು , ಸೋಳ್ಳೆ ಪರದೆ ಬಳಸುವುದು, ಜ್ವರ ಕಂಡು ಬಂದಲ್ಲಿ ತಕ್ಷಣವೆ ಆಸ್ಪತ್ರೆಗೆ ಹೊಗಿ ಆರೋಗ್ಯ ತಪಸಣೆ ಮಾಡಿಸಿಕೋಳ್ಳುವದಾಗಿ ಜಾಗೃತಿ ಮೂಡಿಸಲಾಯಿತ್ತು,
ಶ್ರೀಮತಿ ಸಂತೋಷಿ ಅಂಗನವಾಡಿಯ ಶಿಕ್ಷಕಿ, ಶ್ರೀಮತಿ ಜಗದೇವಿ, ಪಂಚಾಯತ ಸದಸ್ಯರಾದ ಶಿವಕುಮಾರ, ಮಂಗಳ ಪ್ರಕಾಶ ಮತ್ತು ಆಶಾ ಕಾರ್ಯ ಕರ್ತೆಯರಾದ ಮಲ್ಲಮ್ಮ, ಮಹಾದೇವಿ ಇವರ ನೇತೃತ್ವದಲ್ಲಿ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ನಿರ್ಧೆಶಕರಾದ ಫಾ|| ಸ್ಟೀವನ್ ಮತ್ತು ಮೊಬೈಲ್ ಕ್ಲೀನಿಕ್ ಸಿಬ್ಬಂಧಿಗಳಾದ ಥಾಮಸ್, ಸೀಮನ್, ರಾಜಶ್ರೀ, ಶರ್ಲೀನ್ ಇವರು ಗ್ರಾಮದಲ್ಲಿ ಜನರಿಗೆ ಡೆಂಗ್ಯು ಕುರಿತು ಅರಿವು ಕಾರ್ಯಕ್ರಮ ಮಾಡಲಾಯಿತ್ತು ಅದಕ್ಕೆ ಗ್ರಾಮದ ಜನರು ಉತ್ತುಮ ಅಭಿಪ್ರಾಯ ವ್ಯಕ್ತಪಡಿಸಿದರು