ಗ್ರಾಮಸ್ಥರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕಾರದ ಡಾ. ಶೈಲೇಂದ್ರ ಬೆಲ್ದಾಳೆ
ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ನೆಲವಾಡ ಗ್ರಾಮದ ಜಮೀನಿನ ಕೃಷಿ ಹೊಂಡಾದಲ್ಲಿ ಹಾಕಲಾದ ಕಾರ್ಖಾನೆ ತ್ಯಾಜ್ಯದಿಂದ ಅಂತರ್ಜಲ ಮಲೀನಗೊಂಡು ಬೋರವೆಲ್ ನೀರು ಕಲುಷಿತವಾದ ಹಿನ್ನೆಲೆ ಪರಿಸರ ಇಲಾಖೆ ಹಾಗೂ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೀರು ಕಲುಷಿತಗೊಂಡ ಸುದ್ದಿ ಗ್ರಾಮಸ್ಥರು ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರ ಗಮನಕ್ಕೆ ತಂದ ಬಳಿಕ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಪರಿಸರ ಇಲಾಖೆ ಅಧಿಕಾರಿಗಳು ಹಾಗೂ ನೀರು ನೈರ್ಮಲ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಿದರು.
ಸಹಾಯಕ ಪರಿಸರ ಅಧಿಕಾರಿ ಸಂತೋಷ್ ಕುಮಾರ್ ನಾಟಿಕರ್, ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಂಜುಕುಮಾರ್, ಎಇ ಮಲ್ಲಿಕಾರ್ಜುನ್ ಪಾಟೀಲ್ , ಗ್ರಾಮ ಪಂಚಾಯತ್ ಪಿಡಿಒ ಸಂತೋಷ್ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದರು. ಪರೀಕ್ಷೆಗೆ ನೀರು ತೆಗೆದುಕೊಂಡು ಹೋಗಿದ್ದು, ವರದಿ ಬಂದ ಬಳಿಕೆ ನೀರು ಕುಡಿಯಲು ಯೋಗ್ಯವೋ ಅಲ್ಲವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದು ನೀರು ಮತ್ತು ನೈರ್ಮಲ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಖಸುಧ, ಅಶೋಕ ಉದಗೀರೆ ಮತ್ತಿತರರು ಉಪಸ್ಥಿತರಿದ್ದರು.