ಗುಲಬರ್ಗಾದಲ್ಲಿ ಏರ್‍ಟೆಲ್ ಗ್ರಾಹಕರ ಜಾಗೃತಿ ಕಾರ್ಯಕ್ರಮ
ಗುಲಬರ್ಗಾ (31) ಗುಲಬರ್ಗಾದ ವಸಂತನಗರದಲ್ಲಿನ ಶ್ರೀ ರಾಜರಾಜೇಶ್ವರಿ ಹೊಟೇಲ್‍ನಲ್ಲಿ ಗುಲಬರ್ಗಾ ಜಿಲ್ಲೆಯಲ್ಲಿನ ಎರ್‍ಟೆಲ್ ಗ್ರಾಹಕರಿಗಾಗಿ ಜಾಗೃತಿ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರನಿಂದ ಏರ್‍ಟೆಲ್ ಕಂಪನಿಯಿಂದ ಆಗಮಿಸಿದ್ದ ಶ್ರೀಮತಿ ಅರತಿ ಖನ್ನಾ ಇವರು ಏರಲಟೆಲ್‍ನಿಂದ ಗ್ರಾಹಕರಿಗೆ ಸಿಗುವ ಸೌಲಭ್ಯಗಳು ಹಾಗೂ ಮೊಬೈಲ್‍ನಿಂದ ಗ್ರಾಹಕರಿಗೆ ಆಗುವ ಮೋಸಗಳು ಮತ್ತು ಇನ್ನಿತರ ತೊಂದರೆಗಳು ಹಾಗೂ ಅವುಗಳ ಪರಿಹಾರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ವಿಡಿಯೋ ಹಾಗೂ ಮೌಖಿಕವಾಗಿ ತಿಳಿಸಿಕೊಟ್ಟರು. ಗ್ರಾಹಕರ ಅನೇಕ ಸಮಸ್ಯೆಗಳ ಕುರಿತು ಸಮರ್ಪಕವಾಗಿ ಉತ್ತರಿಸಿದರು. ಈ ಸಮಾರಂಭದಲ್ಲಿ ಟ್ರಾಯ್ ಮತ್ತು ಸಿ.ಎ.ಓ.ಸಿ.ವಿ.ಓ.ನ ಪರವಾಗಿ ಚಿದಂಬರ ಪಿ. ನಿಂಬರಗಿ ಭಾಗವಹಿಸಿ ಮಾತನಾಡಿದರು. ಶ್ರೀ ಗೌತಮ ಗೋಪಿನಾಥ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗುಲಬರ್ಗಾ ಜಿಲ್ಲೆಯ ಹಲವಾರು ಏರ್‍ಟೆಲ್ ಗ್ರಾಹಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.