ಬೀದರ್

ಗುರು ನಾನಕ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಶ್ರೀ ನಾನಕ ಝಿರಾ ಸಾಹೇಬ್ ಕಾಲೇಜ್ ಆಫ್ ನರ್ಸಿಂಗ್‍ನ 2023-2024 ನೇ ಶೈಕ್ಷಣಿಕ ಸಾಲಿನ ಬಿ.ಎಸ್ಸಿ. ನರ್ಸಿಂಗ್ ಪ್ರಥಮ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ಕಾಲೇಜಿಗೆ 100 ಕ್ಕೆ 100 ಫಲಿತಾಂಶ ಪಡೆದುಕೊಂಡಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಅಗ್ರಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು, 28 ವಿದ್ಯಾರ್ಥಿಗಳು ಪ್ರಥಮ ದರ್ಜೇಯಲ್ಲಿ, 1 ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಅಗ್ರಶ್ರೇಣಿ ವಿದ್ಯಾರ್ಥಿಗಳು:
ತನುಜಾ 79.50%, ದೀನಾ 77.00%, ಶೃತಿ 77.00%, ಐಶ್ವರ್ಯಾ 76.00%, ಯಾಸೀನ ಹುಮೇರಾ 76.00%, ಮನೀಶ್ 76.00%, ಸಂಜನಾ 75.50%, ಸೌಂದರ್ಯಾ 75.50%, ಅಭಿಶೇಕ್ 75.00% ಮತ್ತು ಜೀವಿಕಾ 75.00% ಪಡೆದಿರುತ್ತಾರೆ.

ಈ ಮಕ್ಕಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಡಾ|| ಎಸ್. ಬಲಬೀರ ಸಿಂಗ್ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್, ಪ್ರಾಂಶುಪಾಲರಾದ ಶ್ರೀ ಮಹಾಂತೇಶ್ ಮಿರ್ಜಿ ಮತ್ತು ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!