ಗುರುನಾನಕ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ 8 ಮತ್ತು 9ನೇ ರ್ಯಾಂಕ್
ಬೀದರ: ಗುರು ನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ನಿರ್ವಹಣಾ ವಿಭಾಗದ (ಃBಂ) ವಿದ್ಯಾರ್ಥಿಗಳಾದ ಪ್ರಹ್ಲಾದ್ ಪಾಟೀಲ್ ಹಾಗೂ ರಾಮ್ ಭಂಗೆ ಗುಲ್ಬರ್ಗ ವಿಶ್ವವಿದ್ಯಾಲಯ ದಿಂದ ಹೊರಡಿಸಲಾದ 2023 -24ನೇ ಸಾಲಿನ ರ್ಯಾಂಕ್ ಪಟ್ಟಿಯಲ್ಲಿ ಪ್ರಹ್ಲಾದ್ ಪಾಟೀಲ್ 8 ನೇ ರ್ಯಾಂಕ್ ಹಾಗೂ ರಾಮ್ ಭಂಗೆ 9ನೇ ರ್ಯಾಂಕ್ ಪಡೆಯುವ ಮೂಲಕ ಬೀದರ್ ಜಿಲ್ಲೆಯ ಹೆಸರು ಬೆಳಗಿಸಿದ್ದಾರೆ .
ಗುರು ನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ಕೀರ್ತಿ ಬೆಳಗಿಸುವಲ್ಲಿ ಶ್ರಮಿಸಿದ ವಿದ್ಯಾರ್ಥಿಗಳ ಶ್ರಮಕ್ಕೆ ಶ್ಲಾಘಿಸುತ್ತಾ . ಶ್ರೀ ನಾನಕ ಝೀರಾ ಸಾಹೇಬ್ ಫೌಂಡೇಶನ್ನ ಅಧ್ಯಕ್ಷರಾದ ಡಾ. ಸರ್ದಾರ್ ಬಲ್ಬೀರ್ ಸಿಂಗ್ ಜಿ . ಹಾಗೂ ಗುರುನಾನಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ರೇಷ್ಮಾ ಕೌರ್ ಅವರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಮಲಾ. ವಿ .ದತ್ತ ಹಾಗೂ ನಿರ್ವಹಣ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕವೃಂದ,ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.