ಗುನ್ನಳ್ಳಿ ಗ್ರಾಮಕ್ಕೆ ಶಾಸಕರ ಭೇಟಿ ಪರಿಶೀಲನೆ
ಗ್ರಾಮದಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು ಗ್ರಾಮದಲ್ಲಿ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಸಂಪರ್ಕಿಸಿ ನಾನು ಸ್ಪಂದಿಸುವೆ ಅಧಿಕಾರಿಗಳು ಸಹ ಜನರಿಗೆ ಉತ್ತಮ ಸ್ಪಂದನೆ ನೀಡಬೇಕು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಗುನ್ನಳ್ಳಿ ಗ್ರಾಮಕ್ಕೆ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮದಲ್ಲಿರುವ ಕುಡಿಯುವ ನೀರಿನ ಕೋಳವೆ ಬಾವಿ ಮತ್ತು ಕುಡಿಯುವ ನೀರು ಶೇಖರಣೆ ಟ್ಯಾಂಕ್ ಒಳಗೆ, ಸುತ್ತಲು ಸ್ವಚ್ಛತೆ ಕಾಪಾಡುವುದು ಅತ್ಯಂತ ಅವಶ್ಯಕವಾಗಿದೆ ನಿರ್ಲಕ್ಷ್ಯ ಸಹಿಸಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಗ್ರಾಮಪಂಚಾತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಯಾವುದೇ ನಿಷ್ಕಾಳಜಿ ಕಂಡುಬAದರೆ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಪಂಚಾತಿ ಅಧಿಕಾರಿಗಳು ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ರಸ್ತೆ, ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಗ್ರಾಮಪಂಚಾತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಬಳಿಕ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಅಹವಾಲು ಸ್ವೀಕರಿಸಿ ಜನರು ನೀಡಿರುವ ಅಹವಾಲುಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪಿಡಿಓ ಸಂಗಾರೆಡ್ಡಿ, ಗ್ರಾಮ ಆಡಳಿತ ಅಧಿಕಾರಿ ರವಿಕುಮಾರ, ಬಿಜೆಪಿ ಮುಖಂಡರಾದ ನಾಗಭುಷಣ ಕಮಠಾಣೆ, ಗ್ರಾಮದ ಮುಖಂಡರಾದ ನಾಗಶೆಟ್ಟಿ ಬಿರಾದರ, ಸುನಿಲ ಬಿರಾದರ, ಶಂಕರ ಮಲ್ಕಾಪುರೆ, ಕಂಟೆಪ್ಪ ಮನ್ನಳ್ಳಿ, ಅನೀಲ ಬಿರಾದರ್, ಲಕ್ಷö್ಮಣರಾವ ಸಿಂದೋಲ, ಶಿವರಾಜ ಬಿರಾದರ,