ಗೀತಾ ಶಿವರಾಜ ಹೊಕ್ರಾಣಿ ಅವರಿಗೆ ಪಿ.ಎಚ್.ಡಿ. ಪ್ರದಾನ
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನವರಾದ ಗೀತಾ ಶಿವರಾಜ ಹೊಕ್ರಾಣಿ ಅವರು ಹಿಂದಿ ವಿಭಾಗದಲ್ಲಿ ಸಂಶೋಧನೆ ಕೈಗೊಂಡು, ಅವರು ಮಂಡಿಸಿದ ‘“ಅಂತಿಮ ದಶಕ ಕೆ ಹಿಂದಿ ಉಪನ್ಯಾಸೋ ಮೆ ನಾರಿ ಕೆ ವಿವಿಧ ರೂಪ್ (ಮಹಿಳಾ ಉಪನ್ಯಾಸಕಾರೋ ಕೆ ಸಂದರ್ಭ ಮೇ)” ಕುರಿತು ಒಂದು ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಅವರಿಗೆ ಮಹಾರಾಷ್ಟ್ರದ ಔರಂಗಾಬಾದನ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಮರಾಠವಾಡ ವಿಶ್ವವಿದ್ಯಾಲಯವು ಡಾಕ್ಟರೇಟ್ (ಪಿ.ಎಚ್.ಡಿ.) ಪದವಿ ಪ್ರದಾನ ಮಾಡಿದೆ. ಡಾ.ಎಸ್.ಎನ್.ಮುಚ್ಚಟೆ ಮುಖ್ಯಸ್ಥರು, ಹಿಂದಿ ವಿಭಾಗ ಛತ್ರಪತಿ ಶಿವಾಜಿ ಪದವಿ ಮಹಾವಿದ್ಯಾಲಯ, ಉಮರ್ಗಾ ಇವರು ಮಾರ್ಗದರ್ಶನ ನೀಡಿದರು. ಗೀತಾ ಶಿವರಾಜ ಹೊಕ್ರಾಣಿ ಅವರು ಡಾಕ್ಟರೇಟ್ (ಪಿ.ಎಚ್.ಡಿ.) ಪದವಿ ಪಡೆದಿದ್ದಕ್ಕಾಗಿ ಕುಟುಂಬದವರು, ಸ್ನೇಹಿತರು ಮತ್ತು ಸಂಬಂಧಿಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.