ಬೀದರ್

ಗಾದಗಿ ಗ್ರಾ.ಪಂದಲ್ಲಿ ಕೋಟಿ ಗಟ್ಟಲೆ ಅವ್ಯವಹಾರ ಗ್ರಾಮ ಪಂಚಾಯತ ಸದಸ್ಯರುಗಳಿಂದ ಮನವಿ.

ಬೀದರ ತಾಲೂಕಿನ ಗಾದಗಿ ಗ್ರಾಮ ಪಂಚಾಯತನಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಅನೀಲಕುಮಾರ ಚಿಟ್ಟಾ ಹಾಗೂ ಅಧ್ಯಕ್ಷರು ಸೇರಿಕೊಂಡು ಪಂಚಾಯತನಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಭಾರಿ ಅವ್ಯವಹಾರ ನಡೆಸಿ ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ. ಗ್ರಾಮ ಪಂಚಾಯತ ಸದಸ್ಯರುಗಳಾದ ನಾವುಗಳೂ ಯಾವುದೇ ಮಾಹಿತಿ ಕೇಳಿದರೂ ಸಹ ನಮಗೆ ಯಾವುದೇ ಮಾಹಿತಿಯನ್ನು ನೀಡದೇ ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ. ಹಾಗೂ ಸರ್ಕಾರದ ಹಣ ಲೆಕ್ಕವಿಲ್ಲದೇ ದುರುಪಯೋಗ ಮಾಡಿರುವ ಈ ಕೆಳಕಂಡ ಮಾಹಿತಿಯನ್ನು ತಮ್ಮ ಗಮನಕ್ಕೆ ತರಬಯಸುತ್ತಿದ್ದೇವೆ. ಸರ್ಕಾರದ ಆದೇಶದಂತೆ ಗಾದಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆ ಮತ್ತು ಇತರೆ ಕರ ವಸೂಲಿ ಮಾಡಿರುವ ಲಕ್ಷಾಂತರ ರೂಪಾಯಿಗಳ ಮಾಹಿತಿಯನ್ನು ಪಡೆದುಕೊಳ್ಳಲು ಹೋದರೆ ನಮಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಮತ್ತು ಕರ ವಸೂಲಿ ಮಾಡಿರುವ ಹಣವನ್ನು ಸರ್ಕಾರಕ್ಕೆ ಜಮಾ ಮಾಡಿರುವುದಿಲ್ಲ. ಹಾಗೂ ಕರ ವೂಲಿ ಅಭಿಯಾನ-1 ಮತ್ತು 2ನ್ನು ನಡೆಸಿ ಇದರಿಂದ ಸರ್ಕಾರಕ್ಕೆ ಅಂದಾಜು 49 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ ಹಣದಲ್ಲಿ ಬ್ಯಾಂಕಿಗೆ ಕೇವಲ ರೂ. 20 ಲಕ್ಷ ಮಾತ್ರ ಜಮಾ ಮಾಡಿರುತ್ತಾರೆ. ಮತ್ತೆ ಈ ಹಣವನ್ನು ಕೂಡ ತೆಗೆದುಕೊಂಡು ದುರುಪಯೋಗ ಮಾಡಿಕೊಂಡಿರುತ್ತಾರೆ. 15ನೇ ಹಣಕಾಸಿನಲ್ಲಿ 2021 & 2022ನೇ ಸಾಲಿನ ರೂ. 24 ಲಕ್ಷ ಹಾಗೂ 2023-24ನೇ ಸಾಲಿನಲ್ಲಿ ರೂ. 42 ಲಕ್ಷ ಈ ಎರಡು ಸಾಲಿನಲ್ಲಿ ಬಂದಿರುವ ಹಣದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡದೇ ಅದಕ್ಕೆ ಸಂಬAಧಪಟ್ಟ ಬಿಲ್ಲುಗಳನ್ನು ಸೃಷ್ಠಿಸಿ ರೂ. 20 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿರುತ್ತಾರೆ. ಇದರ ಬಗ್ಗೆ ಮಾಹಿತಿ ಕೇಳಿದರೆ ಯಾವುದೇ ಉತ್ತರ ನೀಡುತ್ತಿಲ್ಲ. ಗಾದಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಸೇರಿ ಸುಮಾರು 2600 ಡಿಜಿಟಲ್ ಖಾತಾಗಳನ್ನು ಮಾಡಿ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡದೇ ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ. ಮತ್ತು 11ಬಿ ಖಾತೆಗಳನ್ನು ಸಹ ನೀಡಿರುತ್ತಾರೆ. ಅದರಂತೆ ಸರಕಾರಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮೋಸ ಮಾಡಿರುತ್ತಾರೆ. ಮತ್ತು ಖಾತೆಯಿಂದ ಬಂದಿರುವ ಸರಕಾರಕ್ಕೆ ಪಾವತಿ ಮಡಬೇಕಾದ ಕರ ಸಹ ಪಾವತಿ ಮಾಡಿರುವುದಿಲ್ಲ ಮತ್ತು ಅದನ್ನು ಬ್ಯಾಂಕಿಗೆ ಸಹ ಜಮಾ ಮಾಡಿರುವುದಿಲ್ಲ.ಗ್ರಾಮ ಪಂಚಾಯತ ಗಾದಗಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಸುಮಾರು ಎಲ್ಲಾ ಲೇ-ಔಟ್ ಮಾಡಿರುತ್ತಾರೆ. ಅದರ ಸಿ.ಎ. ಸೈಟ್ ಕೂಡ ಪಂಚಾಯತ ಅಭಿವೃದ್ಧಿ ಅಧಿಕಾರಿ ಲೂಟಿ ಮಾಡಿಕೊಂಡಿರುತ್ತಾರೆ. ಅದರ ಮಾಹಿತಿಯನ್ನು ಗ್ರಾಮ ಪಂಚಾಯತ ಸದಸ್ಯರಿಗೆ ನೀಡುತ್ತಿಲ್ಲ.
ಆದಕಾರಣ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸರಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ಮೋಸ ಮಾಡಿರುವ ಇವರಿಗೆ ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ಇವರು ಮಾಡಿರುವ ಅವ್ಯವಹಾರಗಳ ತನಿಖೆಗಳನ್ನು ಮಾಡಿ ಮತ್ತು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ಮೋಸ ಮಾಡಿರುವ ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಇವರಿಂದ ಸರಕಾರದ ಹಣ ವಸೂಲಿ ಮಾಡಬೇಕೆಂದು ಗಾದಗಿ ಗ್ರಾಮ ಪಂಚಾಯತ ಸದಸ್ಯರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇಂದು ದೂರಿನ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಶ್ರೀದೇವಿ ತುಕಾರಾಮ, ಅರುಣಾದೇವಿ, ಲಕ್ಷಿö್ಮÃ ವೈಜಿನಾಥ, ವಿನೋದ ಭೀಮಣ್ಣಾ , ರಾಜಪ್ಪಾ ಘಾಳೆಪ್ಪಾ, ಸೈಯದ್ ಮಸಿ ಅಹ್ಮದ, ಫಹಮೀದ ಬೇಗಂ, ಪ್ಯಾರಿಬೇಗಂ, ವೀರಶೆಟ್ಟಿ, ಮಂಜುನಾಥ, ದೇವೆಂದ್ರಗೊAಡ, ಲಕ್ಷಿö್ಮÃ ವೈಜಿನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!