ಖಾಸಗಿ ಆಸ್ಪತ್ರೆ ನಡೆಸಲು ಕೆಪಿಎಂಇ ಅಡಿಯಲ್ಲಿ ನೋಂದಣಿ ಕಡ್ಡಾಯ-ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ, ಆಗಸ್ಟ್ 3 – ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ನಡೆಸಲು ಕೆಪಿಎಂಇ ಅಡಿಯಲ್ಲಿ ನೋಂದಣಿ ಕಡ್ಡಾಯವಾಗಿದ್ದು, ನೋಂದಣಿ ಮಾಡಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಿಷನ್ ಇಂಧ್ರ ಧನುಷ್ 5.0, ಸಾಮೂಹಿಕ ಔಷದ ಸೇವನೆ ಕಾರ್ಯಕ್ರಮ, ವಿಶ್ವ ಮಲೇರಿಯಾ ದಿನ, ವಿಶ್ವ ಡೆಂಗೂ ದಿನದ ಅಂತರ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚಿಗೆ ಕೆಪಿಎಂಇ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳದೇ ಆಸ್ಪತ್ರೆ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈಗಾಗಲೇ ಕೆಲವು ಆಸ್ಪತ್ರೆಗಳಿಗೆ ಎಚ್ಚರಿಕೆ ಸಹ ನೀಡಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಎಚ್ಚೆತ್ತುಕೊಳ್ಳದ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ದಂಡಾರ, ರುಬೇಲಾ ಲಸಿಕಾಕರಣವು ಹೆಚ್ಚಾಗಿದೆ ಆದರೆ ನಗರ ಪ್ರದೇಶದಲ್ಲಿ ಕಡಿಮೆ ಲಸಿಕಾರಣವಾಗಿದ್ದು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇಂದ್ರ ಧನುಷ್ 5.0 ಅಭಿಯಾನದಲ್ಲಿ ಇನ್ನು ಹೆಚ್ಚಿನ ಲಸಿಕಾರಣ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಲಸಿಕಾಕರಣ ವೇಗ ಹೆಚ್ಚಿಸಬೇಕು ಹಾಗೂ ಮುಂಜಾಗೃತವಾಗಿ ಆರೋಗ್ಯ ಇಲಾಖೆಯಡಿಯಲ್ಲಿ ನೀಡಲಾಗುವ ಆನೆಕಾಲು, ಡೆಂಗ್ಯೂ ಸೇರಿದಂತೆ ಇತರೆ ರೋಗಗಳ ರೋಗ ನಿರೋಧಕ ಮಾತ್ರೆಗಳನ್ನು ನೀಡಿಕೆ ಪ್ರಮಾಣ ಹೆಚ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚಿಗೆ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ನಗರ ಹಾಗೂ ಗ್ರಮೀಣ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹವಾಗಿ ಸರಿಯಾದ ಸಮಯಕ್ಕೆ ಈ ತ್ಯಾಜ್ಯ ವಿಲೇವಾರಿ ಆಗದೇ ಇರುವುದರಿಂದ ಈ ತ್ಯಾಜ್ಯವು ಜನರು ಕುಡಿಯುವ ನೀರಿಗಾಗಿ ಬಳಸುವ ಕೆರೆ, ಬಾವಿ, ಕೊಳವೆಬಾವಿಗಳ ನೀರಿನಲ್ಲಿ ಸೇರಿ ಈ ನೀರು ಸಾರ್ವಜನಿಕರು ಸೇವಿಸಿ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಇತ್ತೀಚಿಗೆ ಬೆಳಕಿಗೆ ಬಂದಿರುವುದರಿAದ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಇಂತಹ ಸಮಸ್ಯೆಗಳು ಕಂಡುಬAದಲ್ಲಿ ತಕ್ಷಣವೇ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ಅಥವಾ ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಇದರಿಂದ ದೊಡ್ಡ ಅನಾಹುತವಾಗುವುದನ್ನು ತಪ್ಪಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಕಲಬುರಗಿ ವಿಭಾಗ ಮಟ್ಟದ ಎಸ್.ಎಂ.ಓ.ಡಾ.ಅನೀಲಕುಮಾರ ತಾಳಿಕೋಟೆ ಮಾತನಾಡಿ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ನಿಯಮಿತವಾಗಿ ನೀಡಲಾಗುವ ಲಸಿಕೆಗಳಿಂದ ಮಧ್ಯೆದಲ್ಲಿಯೇ ಬಿಟ್ಟುಹೋದ ಹಾಗೂ ಲಸಿಕೆ ಪಡೆಯದೇ ಹೊರಗುಳಿದ 0-5 ವರ್ಷದ ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ “ತೀವ್ರತರವಾದ ಮಿಷನ್ ಇಂದ್ರಧನುಷ್ 5.0” ಅಭಿಯಾನದ ಮೂಲಕ ಲಸಿಕೆಗಳನ್ನು ನೀಡಲು, 2023ನೇ ಆಗಸ್ಟ್ 7 ರಿಂದ 12 ರವರೆಗೆ, ಸೆಪ್ಟೆಂಬರ್ 11 ರಿಂದ 16 ರವರೆಗೆ ಮತ್ತು ಅಕ್ಟೋಬರ್ 9 ರಿಂದ 14 ರವರೆಗೆ ಈ ಮೂರು ತಿಂಗಳುಗಳಲ್ಲಿ ನಿರ್ದಿಷ್ಟ 06 ದಿನಗಳಂದು ಜಿಲ್ಲೆಯ ಐದು ತಾಲೂಕಾಗಳಲ್ಲಿ 03 ಸುತ್ತುಗಳಂತೆ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನವನ್ನು ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು ನಗರ ಪ್ರದೇಶ ಒಳಗೊಂಡAತೆ ಉಪಕೇಂದ್ರಗಳಲ್ಲಿ ಚುಚ್ಚುಮದ್ದು ನೀಡುವ ಸಿಬ್ಬಂದಿಗಳ ಸಂಖ್ಯೆ 318, ಲಸಿಕೆ ಪಡೆಯುವ ಒಟ್ಟು 0-2 ವರ್ಷದ ಮಕ್ಕಳ ಸಂಖ್ಯೆ 5067, 2-5 ವರ್ಷದ ಮಕ್ಕಳ ಸಂಖ್ಯೆ 1062, ಒಟ್ಟು ಗರ್ಭಿಣಿಯರ ಸಂಖ್ಯೆ 1010 ಹಾಗೂ ಜಿಲ್ಲೆಯಲ್ಲಿ ಅಧಿವೇಶನಗಳ ಸಂಖ್ಯೆ 779, ಮೊಬೈಲ್ ತಂಡಗಳು 139 ಗಂಡಾAತರ ಪ್ರದೇಶಗಳ ಸಂಖ್ಯೆ 197 ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಇಂದ್ರಧನುಷ್ 5.0 ಹಾಗೂ ಆನೆಕಾಲು ರೋಗ ನಿರ್ಮೂಲನೆಗಾಗಿ ಸಾಮೂಹಿಕ ಮಾತ್ರೆ ವಿತರಣಾ ಅಭಿಯಾನದ ಪೋಸ್ಟರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ, ಕಲಬುರಗಿ ವಿಭಾಗೀಯ ಆರೋಗ್ಯ ಇಲಾಖೆ ಕಚೇರಿಯ ಉಪ ನಿರ್ದೇಶಕ ಶರಣಬಸಪ್ಪಾ ಗಣಜಲಖೇಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ, ಜಿಲ್ಲಾ ಆರ್.ಸಿ.ಹೆಚ್. ಡಾ.ರಾಜಶೇಖರ ಪಾಟೀಲ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಂತರ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.