ಖಾಶೆಂಪುರ್ ಪಿ: ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಚಾಲನೆ
ಬೀದರ್ (ಆ.29): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ಮಂಗಳವಾರ ಸಡಗರ ಸಂಭ್ರಮದೊಂದಿಗೆ ಅದ್ಧೂರಿಯಾಗಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಚಾಲನೆ ನೀಡಿದರು.
ಖಾಶೆಂಪುರ್ ಪಿ ಗ್ರಾಮದಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ರಾಯಣ್ಣ ಭಾವಚಿತ್ರ ಮೆರವಣಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಮಹಾತ್ಮರ ಜಯಂತಿಗಳನ್ನು ಸರ್ವ ಜನಾಂಗದವರು ಒಗ್ಗೂಡಿ ಆಚರಣೆ ಮಾಡಿಕೊಂಡು ಹೋಗುವ ಸಂಪ್ರದಾಯ ರೂಡಿಸಿಕೊಳ್ಳಬೇಕು. ಮಹಾತ್ಮರನ್ನು ಜಾತಿ, ಧರ್ಮಗಳಿಗೆ ಸೀಮಿತಗೊಳಿಸಬಾರದು. ಮಹಾತ್ಮರ ಆದರ್ಶಗಳನ್ನು, ತತ್ವ ಸಿದ್ದಾಂತಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸಾಗಬೇಕು ಎಂದರು.
ಸಂಗೊಳ್ಳಿ ರಾಯಣ್ಣರವರು ನಾಡಿನ ಒಳಿತಿಗಾಗಿ ಹೋರಾಡಿದ್ದಾರೆ. ಅವರಂತಹ ಮಹಾತ್ಮರ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಮಹಾತ್ಮರ ಜೀವನ ಚರಿತ್ರೆಯನ್ನು ಅರಿತುಕೊಂಡು ಸಾಗುವುದು ಅವಶ್ಯಕವಾಗಿದೆ ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದತ್ತು ಕಾಡವಾದ, ಭಜರಂಗ ತಮಗೊಂಡ, ರಾಜು ಮಾಳೆ, ಸಂಜುಕುಮಾರ್, ಶಿವಕುಮಾರ್, ಪ್ರಲ್ಹಾದ್, ಮಲ್ಲಪ್ಪ, ಆಕಾಶ್, ಸಂದೀಪ್, ಅಂಬು, ಸಿದ್ದು, ರಾಜು, ವಿಷ್ಣು, ರಾಹುಲ್, ರಾಜಕುಮಾರ್, ಅಖಿಲೇಶ್, ನವೀನ್, ಸಚಿನ್, ಧನರಾಜ್, ಶಿವರಾಜ್, ಭೀಮಣ್ಣ, ಆನಂದ್, ಯಲ್ಲಾಲಿಂಗ, ಚಿದಾನಂದ, ಹಣಮಂತ, ಅನಿಲ್, ಶಿವಲಿಂಗ, ಸತೀಶ್, ಭೀರಪ್ಪ, ಪವನ್, ಲೋಕೇಶ್, ಪ್ರಶಾಂತ್, ರಮೇಶ್, ಶ್ರೀಕಾಂತ್ ಸೇರಿದಂತೆ ಅನೇಕರಿದ್ದರು.