ಕ.ವಿ.ಪ್ರ.ನಿ.ನೌಕರರ ಪತ್ತಿನ ಸಹಕಾರ ಸಂಘದ 41ನೇ ವಾರ್ಷಿಕ ಮಹಾಸಭೆ
ಬೀದರ: ಕ.ವಿ.ಪ್ರ.ನಿ./ಜೇಸ್ಕಂ ನೌಕರರ ಪತ್ತಿನ ಸಹಕಾರ ಸಂಘ(ನಿ)., ಬೀದರ ಇದರ ಸಂಘದ 41ನೇ ವಾರ್ಷಿಕ ಮಹಾಸಭೆಯು ದಿನಾಂಕ 24-8-2024ರಂದು ಬೆಳಿಗ್ಗೆ 11.00 ಗಂಟೆಗೆ ಕ.ವಿ.ಪ್ರ.ನಿ ನೌಕರರ ಸಭಾ ಭವನದಲ್ಲಿ ಜರುಗಿತ್ತು ಸಭೆಯ ಅಧ್ಯಕ್ಷತೆ ಕ.ವಿ.ಪ್ರ.ನಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಮಹೇಶ ಘಾಳೆ ಅಧ್ಯಕ್ಷತೆ ವಹಿಸಿದರು.
ಅಧ್ಯಕ್ಷರಾದ ಶ್ರೀ ಮಹೇಶ ಘಾಳೆ, ಉಪಾಧ್ಯಕ್ಷರಾದ ರಾಜಕುಮಾರ ಕರಣೆ, ಮತ್ತು ಸಂಘದ ನಿರ್ದೇಶಕರು ಹಾಗೂ ಅಧಿಕಾರಿಗಳು ಜ್ಯೋತಿ ಬೆಳಗಿಸುವ ಮುಖಾಂತರ ಸಭೆಯು ಉದ್ಘಾಟಿಸಲಾಯಿತು.
ಅಧ್ಯಕ್ಷರಾದ ಮಹೇಶ ಘಾಳೆ ಅವರು 41ನೇ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ಮತ್ತು ಸಂಘಕ್ಕೆ 2023-24ನೇ ಸಾಲಿನ ನಿವ್ವಳ ಲಾಭ ರೂ.3,08,84,063.47 ಆಗಿದೆ ಮತ್ತು ಶೇ12%ಪ್ರತಿಶತ ಲಾಭಾಂಶ ವಿತರಿಸಲಾಗುವದು ಎಂದು ತಿಳಿಸಿದರು. ವರದಿ ಮೇಲೆ ದೀರ್ಘವಾಗಿ ಚರ್ಚಿಸಿ ಸದಸ್ಯರು ಸಭೆಗೆ ಒಪ್ಪಿಗೆ ನೀಡಿದರು. ಭರತ ಭೂಷಣ, ಕವಿರಾಜ, ರಾಜಕುಮಾರ ರಟಕಲೆ, ರಾಜೇಂದ್ರ, ವಿಠಲ, ಪರಮೇಶ, ಮಲ್ಲಿಕಾರ್ಜುನ ಕಟಗಿ, ಥಾಮಸ, ಧನಶೇಟ್ಟಿ, ಎಲ್ಲಾ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಿದರು ಹಾಗೂ ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.