ಬೀದರ್

ಕ್ರಿಡಾ ಮನೋಭಾವನೆ ಬಗ್ಗೆ ಕ್ರಿಡಾಪಟುಗಳಿಗೆ ಪ್ರೇರಣಾದಾಯಕ : ಶ್ರೀ ರಘುನಾಥರಾವ ಮಲ್ಕಾಪುರೆ

20 ಮತ್ತು 21ನೇ ಅಗಸ್ಟ್ 2023 ರಂದು ಬೀದರಿನ ಚಿಟ್ಟಾ ಗ್ರಾಮದ ನವೀನ ಪಬ್ಲಿಕ್ ಸ್ಕೂಲ್‍ನಲ್ಲಿ ವಿದ್ಯಾಭಾರತಿ ಶಾಲೆಗಳ ಪ್ರಾಂತ ಮಟ್ಟದ ವಾಲಿಬಾಲ್ ಪಂದ್ಯಾವಳಿಯು ಯಶಸ್ವಿಯಾಗಿ ಜರುಗಿತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಒಟ್ಟು 27 ಬಾಲಕ ಮತ್ತು ಬಾಲಕಿಯರ ತಂಡಗಳು ಭಾಗವಹಿಸಿದ್ದವು.
ಉದ್ಘಾಟಕರಾಗಿ ಆಗಮಿಸಿದ ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ರಘುನಾಥರಾವ ಮಲ್ಕಾಪುರೆ ಅವರು ಪಾರಿವಾಳಗಳನ್ನು ಹಾರಿಸುವುದರ ಮೂಲಕ ಪಂದ್ಯಾವಳಿಯ ಉದ್ಘಾಟನೆ ಮಾಡುತ್ತ ಕ್ರಿಡಾಕೂಟದ ಮಹತ್ವ ಹಾಗೂ ಕ್ರಿಡಾ ಮನೋಭಾವನೆ ಬಗ್ಗೆ ಕ್ರಿಡಾಪಟುಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ ಚಿಂದಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ|| ಹಾವಗಿರಾವ ಮೈಲಾರೆ ಅವರು ಆರೋಗ್ಯವೇ ಪರಮ ಭಾಗ್ಯ, ಆರೋಗ್ಯದ ಮಹತ್ವ ಮತ್ತು ಕ್ರಿಡೆಯ ಮಹತ್ವದ ಬಗ್ಗೆ ಉದ್ದೇಶಿಸಿ ಮಾತನಾಡಿದರು.
ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಭಗುಸಿಂಗ್ ಜಾಧವ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತ ವಿದ್ಯಾಭಾರತಿಯ ಕಾರ್ಯ ಪದ್ಧತಿ ಮತ್ತು ಉದ್ದೇಶಗಳ ಬಗ್ಗೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ಜಿಲ್ಲಾ ಅಧ್ಯಕ್ಷರಾದ ಪ್ರೊ|| ಎಸ್.ಬಿ. ಸಜ್ಜನಶೆಟ್ಟಿ ಅವರು ವಿದ್ಯಾಭಾರತಿಯ ಯೋಜನೆಯಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಸ್ಪರ್ಧೆಗಳು ನಡೆಯುತ್ತಲಿದ್ದು; ಬೀದರನಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ನುಡಿದರು.
ಪಂದ್ಯಾವಳಿಯಲ್ಲಿ ವಿಜೇತರಾದ ಕ್ರಿಡಾಪಟುಗಳಿಗೆ ಸಮಾರೋಪದ ಕಾರ್ಯಕ್ರಮದ ಮುಖ್ಯಅತಿಥಿಗಳಾದ ನಗರ ಸಭೆ ಸದಸ್ಯರಾದ ಶ್ರೀ ಶಶಿಧರ ಹೊಸಳ್ಳಿ ಅವರು ಹಾಗೂ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಶ್ರೀ ಬಸವರಾಜ ಸ್ವಾಮಿ ಅಗ್ರಹಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ವಿದ್ಯಾಭಾರತಿ ಕರ್ನಾಟಕ ಪ್ರಾಂತದ ಶಾರೀರಿಕ ಪ್ರಮುಖರಾದ ಶ್ರೀ ದೇವೇಂದ್ರನ್‍ಜಿ ಅವರು ಸಮಾರೋಪದ ನುಡಿಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ನವೀನ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಶ್ರೀ ಕಾಮಶೆಟ್ಟಿ ಚಿಕಬಸೆ, ಹಿರಿಯ ವಿದ್ಯಾರ್ಥಿಯಾದ ಶ್ರೀ ಸತಿಶ ಉದಗಿರೆ, ವಿದ್ಯಾಭಾರತಿ ಪ್ರಾಂತ ಶಿಶು ಶಿಕ್ಷಣ ಪ್ರಮುಖರಾದ ಭಗಿನಿ ಸ್ವರ್ಣಾ ಉಡುಪ, ಪ್ರಾಂತ ಸೇವಾ ಪ್ರಮುಖರಾದ ಶ್ರೀ ಮರುಳಾರಾಧ್ಯ ಸ್ವಾಮಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ರಾಜಶೇಖರ ಬೋಚರೆ ಅವರು ಸ್ವಾಗತ ಪರಿಚಯ ಮಾಡಿದರು. ಶ್ರೀ ನಾಮದೇವ ರಾಠೋಡ್ ಕಾರ್ಯಕ್ರಮ ವಂದಿಸಿದರೆ, ಶ್ರೀ ಬಸವರಾಜ ಕೌಟಗೆ ನಿರೂಪಿಸಿದರು.

Ghantepatrike kannada daily news Paper

Leave a Reply

error: Content is protected !!