ಕೆ.ಆರ್ಮ್ ಸ್ಟಾçಂಗ್ ಅವರ ಹತ್ಯೆಯನ್ನು ಸಿಬಿಐ ತನಿಖೆಗೆ ಕೊಡುವಂತೆ ಕೋರಿ ಬಿ ಎಸ್ ಪಿ ಮನವಿ.
ಬೀದರ: ತಮಿಳುನಾಡು ರಾಜಧಾನಿ ಚೆನ್ನೆöÊನ ಪೆರಂಬೂರಿನ ಜನನಿಬಿಡ ವಸತಿ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮಾನ್ಯ ಕೆ.ಆರ್ಮ್ ಸ್ಟಾçಂಗ್ ಅವರನ್ನು ಭಿಕರವಾಗಿ ಹತ್ಯೆ ಮಾಡಲಾಗಿರುವುದು ಅತ್ಯಂತ ದುಃಖದ ಘಟನೆಯಾಗಿದೆ. ಮತ್ತು ಇದು ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಭಾರತದ ಸಂವಿಧಾನದ ಆಶಯಗಳಂತೆ ಸಮಾಜದಲ್ಲಿ ಜಾತಿ ದೌರ್ಜನ್ಯ, ಅಸಮಾನತೆ, ಅಸ್ಪೃಶ್ಯತೆಗೆ, ಅನ್ಯಾಯಕ್ಕೆ ನಲುಗಿ ಹೊಗಿದ್ದ ತಳ ಸಮುದಾಯಗಳಲ್ಲಿ ಆತ್ಮವಿಶ್ವಾಸ ಧೈರ್ಯ ತುಂಬಿ ಶೋಷಿತರಾದ ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ದಣಿವರಿಯದೆ ಶ್ರಮಿಸುತ್ತಿದ್ದ, ಮಾನ್ಯ ಕೆ.ಆರ್ಮ್ ಸ್ಟಾçಂಗ್ ಅವರನ್ನು ಹತ್ಯೆ ಮಾಡಿರುವುದರ ಹಿಂದೆ ಪ್ರಭಾವಿಗಳ ಕೈವಾಡವಿದೆ. ಹೀಗೆಂದರೆ, ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಹತ್ಯೆ ನಡೆಸಿದವರು ತಾವೆಂದು ತಪ್ಪೊಪ್ಪಿಕೊಂಡು ಎಂಟು ಜನರು ಪೊಲೀಸರಿಗೆ ಶರಣಾಗಿರುವುದಾಗಿ ವರದಿಯಾಗಿದೆ.
ರಾಷ್ಟಿçÃಯ ಪಕ್ಷದ ರಾಜ್ಯಾಧ್ಯಕ್ಷರಿಗೆ ರಕ್ಷಣೆ ಒದಗಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಲ್ಲದೇ ಸರ್ಕಾರಕ್ಕೆ ಜನಸಾಮಾನ್ಯರ ಮಾನ, ಪ್ರಾಣ, ಆಸ್ತಿ ರಕ್ಷಣೆ ಅಸಾಧ್ಯ ಎಂಬುವುದು ಇದರಿಂದ ಸಾಬೀತಾಗುತ್ತದೆ. ಈ ಹತ್ಯೆಯು ತಮಿಳನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದು ಸಂಕೇತವಾಗಿದೆ. ಈ ಹಿಂದೆ ಮಾನ್ಯ ಕೆ. ಅರ್ಮಸ್ಟಾçಂಗ್ ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಹಜವಾಗಿಯೇ ಮುಖ್ಯಮಂತ್ರಿ ಆರ್ಮಸ್ಟಾçಂಗ್ ವಿರುದ್ಧ ಅಸಮಾಧಾನ ಹೊಂದಿರುವು ಸಾಧ್ಯತೆ ಇದೆ.
ಸಂಚು ರೂಪಿಸಿದವರನ್ನು ಮತ್ತು ಹಂತಕರನ್ನು ಉಗ್ರಶಿಕ್ಷೆಗೆ ಗುರಿಪಡಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಒತ್ತಾಯವಾಗಿದೆ ಎಂದು ಇಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟçಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ದತದತು ಸೂರ್ಯವಂಶಿ, ಜಿಲ್ಲಾಧ್ಯಕ್ಷರಾದ ಅಶೋಕ ಮಂಠಾಳಕರ್, ಸತ್ಯದೀಪ ಹಾವನೂರ್, ಶಕ್ತಿಕಾಂತ ಭಾವಿದೊಡ್ಡಿ, ದತ್ತಪ್ಪಾ ಭಂಡಾರಿ, ಯೋಹನ ಡಿ’ಸೋಜಾ, ರಜನೀಕಾಂತ, ಮಾರ್ಟಿನ್ ಮನ್ನಳ್ಳಿ, ನಾಗೇಶ ಭಂಗಾರೆ ಉಸ್ಥಿತರಿದ್ದರು.