ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ
ಹಚ್ಚ ಹಸಿರಿನಿಂದ ಕಂಗೊಳಿಸುವ ಚಾಂಗಲೇರಾ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಬಳಿಯ ಕೆರೆ ಸುತ್ತಲಿನ ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರಿನ ಮೂಲವಾಗಿದ್ದು,ಪ್ರತಿನಿತ್ಯ ಸಾವಿರಾರು ಪಕ್ಷಿಗಳು ಕೆರೆಗೆ ಬಂದು ಹೋಗುತ್ತವೆ ಹೀಗಾಗಿ ಈ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿಗ ತಾಣವನ್ನಾಗಿ ಮಾಡಲಾಗುವುದು ಮತ್ತು ರೈತರ ಜಮೀನಿಗೆ ನೀರು ಹರಿಸುವ ಮೂಲಕ ಈ ಭಾಗದ ರೈತರಿಗೆ ನೆರವಾಗುವಂತೆ ಮಾಡಲಾಗುವುದು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ ಗ್ರಾಮದಲ್ಲಿರುವ ಸಣ್ಣ ನೀರಾವರಿ ಕೆರೆಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಕೆರೆ ವಿಕ್ಷಣೆ ಮಾಡಿ ಮಾತನಾಡಿದರು.ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ ಗ್ರಾಮದ ಕೆರೆಈ ಕೆರೆಯನ್ನು ಪ್ರವಾಸಿಗ ತಾಣವನ್ನಾಗಿ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿವುದು ಮತ್ತು ಬೆಸಿಗೆಯಲ್ಲಿ ರೈತರ ಜಮೀನಿಗೆ ನೀರು ಹರಿಸುವ ಮೂಲಕ ಈ ಭಾಗದ ರೈತರಿಗೆ ಕೆರೆ ನೆರವಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಕೆರೆ ಅಭಿವೃದ್ಧಿಗೊಳಿಸಿ ಕೆರೆಯ ಸುತ್ತ ಬೇಲಿ ನಿರ್ಮಿಸಬೇಕು ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಕೆರೆಗೆ ತ್ಯಾಜ್ಯ ವಿಲೇವಾರಿ, ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದೆ. ಸೂಕ್ತ ನಿರ್ವಹಣೆ ವ್ಯವಸ್ಥೆ ಕಲ್ಪಿಸಿದರೆ ಕೆರೆಗೆ ಮರು ಜೀವ ನೀಡಿದಂತಾಗುವುದರಲ್ಲಿ ಸಂದೇಹವಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.ಹಲವು ಸಮಸ್ಯೆಗಳಿಂದ ಕೆರೆ ನಲುಗಿದೆ. ಪರಿಸರದ ದೃಷ್ಟಿಯಿಂದ ಕೆರೆಯನ್ನು ಉಳಿಸಿಕೊಳ್ಳುವ ತುರ್ತು ಅಗತ್ಯವಿದೆ. ಮಳೆಗಾಲದಲ್ಲಿ ಕೆರೆಗೆ ದೊಡ್ಡ ಕಾಲುವೆಗಳಿಂದ ನೀರು ಹರಿದು ಬರುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ನೀರು ಸೋರಿಕೆಯಾಗಿ ನೀರಿನ ಕೊರತೆ ಉಂಟಾಗದAತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಈ ಕೆರೆಯು ಒಟ್ಟು ೩೫ ಹೆಕ್ಟೇರ್ ಪ್ರದೇಶ ವಿಸ್ತೀರ್ಣ ಮತ್ತು ಇದರಲ್ಲಿ ಒಟ್ಟು ೫೮ ಎಂಸಿಎಪ್ ಟಿ ನೀರು ಶೇಖರಣೆ ಇದ್ದು ಎರಡು ಎಡದಂಡೆ ಬಲ ದಂಡೆ ಕಾಲುವೆ ಹೊಂದಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸಣ್ಣ ನೀರಾವರಿ ಸಹಾಯಕ ಅಭಿಯಂತರ ಎಇ ಸಿದ್ಧಾರೂಢ, ಎಇ ವೈಭವ ಮತ್ತು ಪಕ್ಷದ ಮುಖಂಡರು ಗ್ರಾಮದ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಲಹೆಗಾರ ನಾಗೇಶ ಸಿದ್ದಾ.