ಕೃಷಿ ಡಿಪ್ಲೋಮಾ ಕೋರ್ಸನ್ನು ರದ್ದುಪಡಿಸಿರುವುದನ್ನು ಖಂಡಿಸಿ ಪ್ರತಿಭಟನೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬೀದರ ತಾಲೂಕಿನ ಜನವಾಡಾ ಸಮೀಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರ/ಕೃಷಿ ಸಂಶೋಧನಾ ಕೇಂದ್ರ ಬೀದರ ಆವರಣದಲ್ಲಿ ನಡೆಸಲಾಗುತ್ತಿದ್ದ ಈ ಭಾಗದ ರೈತರ ಮಕ್ಕಳ ಅನುಕೂಲಕ್ಕಾಗಿ 2012 ರಲ್ಲಿ ಎರಡು ವರ್ಷದ ಕೃಷಿ ಡಿಪ್ಲೋಮಾ ಕೋರ್ಸ ಆರಂಭವಾಗಿತ್ತು. ಸುಸಜ್ಜಿತವಾದ ವಿದ್ಯಾಲಯ ಕಟ್ಟಡ, ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತದೆ. ಆದರೆ ಪ್ರಸ್ತುತ ಶೈಕ್ಷಣಿಕ ವರ್ಷ 2023-24 ನೇ ಸಾಲಿನಲ್ಲಿ ಸದರಿ ಕೋರ್ಸನ್ನು ಸ್ಥಗಿತಗೊಳಿಸಲು ವಿಶ್ವವಿದ್ಯಾಲಯಕ್ಕೆ ಸರ್ಕಾರ ಆದೇಶ ನೀಡಿರುತ್ತದೆ. ಆದರೆ ಕಳೆದ 10 ವರ್ಷಗಳಿಂದ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಕೃಷಿ ಡಿಪ್ಲೋಮಾ ಕೋರ್ಸನ್ನು ಪಡೆದು ಕೃಷಿ ಕೈಗಾರಿಕೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಅಲ್ಲದೇ ಕೆಲವರು ಕಲಿತ ವಿಷಯವನ್ನು ಕೃಷಿ ವಲಯದಲ್ಲಿ ಅಳವಡಿಸಿಕೊಂಡಿದ್ದರು. ಆದರೆ ಧೀಡಿರನೆ ಸರಕಾರವು ಈ ವರ್ಷದಿಂದ ಕೃಷಿ ಡಿಪ್ಲೋಮಾ ಕೋರ್ಸನ್ನು ಸ್ಥಗಿತಗೊಳಿಸಿರುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೃಷಿ ಶಿಕ್ಷಣ ಪಡೆಯಲು ವಂಚಿತರಾಗುತ್ತಾರೆ. ಇದನ್ನು S.ಈ.I. ತೀವ್ರವಾಗಿ ಖಂಡಿಸುತ್ತದೆ.
ರಾಜ್ಯದ ಬಡ ರೈತರ ಮಕ್ಕಳು ಈ ಕೋರ್ಸಿಗೆ ಕೇವಲ ರೂ. 5000/- ಶುಲ್ಕದಲ್ಲಿ ಪ್ರವೇಶ ಪಡೆಯಬಹುದಿತ್ತು. ಆದರೆ ಕಳೆದ 10 ವರ್ಷಗಳಿಂದ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಕೃಷಿ ಡಿಪ್ಲೋಮಾ ಕೋರ್ಸನ್ನು ಪಡೆದ ಅನೇಕ ವಿದ್ಯಾರ್ಥಿಗಳು ಅನೇಕ ಕ್ಷೇತ್ರಗಳಲ್ಲಿ “ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಕ್ಷೇತ್ರ
ಸಹಾಯಕ್ಕೆ, ಖಾಸಗಿ ರಸಗೊಬ್ಬರ, ಬೀಜ ಔಷಧಿ ಕಂಪನಿಗಳಲ್ಲಿ ಉದ್ಯೋಗಗಳು ಬೇಗ ಲಭ್ಯಸುತ್ತಿದ್ದವು. ಕೃಷಿ ಇಲಾಖೆ ಬೀಜ ವಿತರಣಾ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೂ ಅವಕಾಶಗಳಿದ್ದವು. ರಸಗೊಬ್ಬರ ಔಷಧಿ ಅಂಗಡಿಗಳಿಗೆ ಪರವಾನಿಗೆ ಅವಕಾಶ ದೊರಕುತ್ತಿತ್ತು.” ಹಾಗೂ ಅನೇಕ ಕೃಷಿ ಸಂಬAಧಿತ ಖಾಸಗಿ ಕಂಪನಿಗಳಲ್ಲಿ ಕೃಷಿ ಡಿಪ್ಲೋಮಾ ಕೋರ್ಸ ಪೂರೈಸಿದವರಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರು. ಕೃಷಿ ಡಿಪ್ಲೋಮಾ ಕೋರ್ಸ ಮುಗಿಸಿದವರಿಗೆ ಬಿ.ಎಸ್ಸಿ. ಪದವಿ ಪಡೆಯಲು ಶೇ 5% ರಷ್ಟು ಮೀಸಲಾತಿ ಇತ್ತು. ಕನ್ನಡ ಮಾಧ್ಯಮದಲ್ಲಿ ವಿಷಯಗಳು ಇರುವುದರಿಂದ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಈ ಕೃಷಿ ಡಿಪ್ಲೋಮಾ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಆದರೆ ಧೀಡಿರನೆ ರಾಜ್ಯ ಸರ್ಕಾರವು ಪ್ರಸ್ತುತ ವರ್ಷದಿಂದ ಕೃಷಿ ಡಿಪ್ಲೋಮಾ ಕೋರ್ಸನ್ನು ಸೈಗಿತಗೊಳಿಸಿರುವುದರಿಂದ ಕೃಷಿಯಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಷ್ಟವಾಗಿದೆ.
ಆದಕಾರಣ ಬೀದರ ಜಿಲ್ಲೆಯ ಕೃಷಿ ಡಿಪ್ಲೋಮಾ ಕೋರ್ಸನ್ನು ಯಥಾಪ್ರಕಾರ ಮುಂದುವರೆಸಲು ರಾಜ್ಯ ಸರ್ಕಾರ ಅನುಮತಿ ನೀಡಬೇಕೆಂದು S.ಈ.I. ಆಗ್ರಹಿಸುತ್ತದೆ. ಒಂದು ವೇಳೆ ಸದರಿ ಕೋರ್ಸನ್ನು ಮುಂದುವರೆಸಿದ್ದಲ್ಲಿ ರಾಜಾದ್ಯಾಂತ ಉಗ್ರ ಹೋರಾಟ ಮಾಡಲಾಗುವುದೆಂದು ಪ್ರತಿಭಟನೆ ಮುಖಾಂತರ ಎಚ್ಚರಿಸಿ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ ಐ ಜಿಲ್ಲಾಧ್ಯಕ್ಷರಾದ ಅರುಣ ಕೋಡಗೆ, ಉಪಾಧ್ಯಕ್ಷರಾದ ಅಮರ ಗಾದಗಿ, ಜಿಲ್ಲಾಕಾರ್ಯದರ್ಶಿ ರೋಷನ್ ಮಲ್ಕಾಪೂರೆ, ರಾಕೇಶ ಶರ್ಮಾ, ಭೀಮ ಹೊನ್ನ, ರಾಮದಾಸ ಕಾಂಬಳೆ ಸೇರಿದಂತೆ ಕಾಲೇಜ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.