ಕುಟುಂಬದ ಸದಸ್ಯರಿಗೆ ಭೇಟಿಯಾಗಿ ಸಾಂತ್ವನ : ಈಶ್ವರಸಿಂಗ್ ಠಾಕೂರ ಭೇಟಿ
ಬೀದರ:ಜೂ.23: ತಾಲೂಕಿನ ಹಳೆಂಬುರ ಸಮೀಪದ ಕೂಮಾ ತಾಂಡಾದ ನಿವಾಸಿ, ಸಾಮಾಜಿಕ ಕಾರ್ಯಕರ್ತ, ಕಟ್ಟಡ ಕಾರ್ಮಿಕರಾಗಿ ಸೇವೆ ಸಲ್ಲಿಸುತಿದ್ದ ಲಮಾಣಿ ಸಮಾಜದ ನಾಮದೇವ ಆಕಸ್ಮಿಕವಾಗಿ ನಿಧನ ಹೊಂದಿದ್ದರಿಂದ ಅವರ ಕುಟುಂಬಕ್ಕೆ ಭಾರತೀಯ ಜನತಾ ಪಕ್ಷದ ವಿಭಾಗೀಯ ಪ್ರಭಾರಿ ಹಾಗೂ ಬೀದರ ಉತ್ತರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಕುರಿತು ಪ್ರಕಟಣೆ ಹೊರಡಿಸಿರುವ ಠಾಕೂರ ಅವರು ನಾಮದೇವ ಎಂಬುವವರು ಗ್ರಾಮಕ್ಕೆ ಬೇಕಾದ ಒಬ್ಬ ಸಾಮಾಜಿಕ ಕಾರ್ಯಕರ್ತ. ಕುಟುಂಬಕ್ಕೆ ಅವರೇ ಆಶ್ರಯದಾತರಾಗಿದ್ದರು. ಹೀಗಾಗಿ ಅವರ ನಿಧನದಿಂದ ಪರಿವಾರ ಬಹಳ ಕಷ್ಟದಲ್ಲಿತ್ತು. ವಿಷಯ ತಿಳಿದ ಕೂಡಲೆ ಅವರ ಕುಟುಂಬದ ಸದಸ್ಯರಿಗೆ ಭೇಟಿಯಾಗಿ ಸಾಂತ್ವನ ಹೇಳಲಾಯಿತು. ಸ್ಥಳದಲ್ಲೇ ವೈಯಕ್ತಿಕ ಧನಸಹಾಯ ನೀಡಿ ಸಹಕರಿಸಲಾಯಿತು. ಜೊತೆಗೆ ಕಾರ್ಮಿಕ ಅಧಿಕಾರಿಗಳಿಗೆ ಅವರ ಮನೆಯಿಂದಲೇ ಕರೆ ಮಾಡಿ ನಾಮದೇವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ತಿಳಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ದೀಪಕ ಗಾದಗಿ, ಗ್ರಾಮ ಪಂಚಾಯತ್ ಸದಸ್ಯ ರವಿ, ಮಾಜಿ ಗ್ರಾ.ಪಂ. ಸದಸ್ಯ ರಾಜಕುಮಾರ, ಪ್ರಮುಖರಾದ ಮೋತಿಲಾಲ, ಪರಶುರಾಮ, ಗೋವಿಂದರಾವ ಸೇರಿದಂತೆ ತಾಂಡಾದ ನಿವಾಸಿಗಳು ಉಪಸ್ಥಿತರಿದ್ದರು.