ಬೀದರ್

ಕಾರ್ಗಿಲ್ ವಿಜಯೋತ್ಸವ ಶೌರ್ಯ ತ್ಯಾಗ ಬಲಿದಾನ ಸಂಕೆತವಾಗಿದೆ : ರೇವಣಸಿದ್ದ ಜಾಡರ್

ಬೀದರ್:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೀದರ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು 25ನೇ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವ್ರತ್ತ ಸೈನಿಕ ಜಗದಿಶ ಸ್ವಾಮಿ ಮಾತನಾಡಿ ಸೈನ್ಯದಲ್ಲಿ ಸೇರಿ 18 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಲು ಅವಕಾಶ ದೊರೆತಿತ್ತು ನನ್ನ ಭಾಗ್ಯವೆಂದು ನುಡಿದರು. ಆದೆರಿತಿ ಎಬಿವಿಪಿ ಹಿರಿಯ ಮುಖಂಡರಾದ ರೇವಣಸಿದ್ದ ಜಾಡರ್ ಮಾತನಾಡಿ ಕಾರ್ಗಿಲ್ ವಿಜಯೋತ್ಸವ ಶೌರ್ಯ ತ್ಯಾಗ ಬಲಿದಾನ ಸಂಕೆತವಾಗಿದೆ, ತಾರುಣ್ಯದಲ್ಲಿಯೆ ತಮ್ಮ ವೈಯಕ್ತಿಕ ಸುಖ ಭೋಗ ತ್ಯಜಿಸಿ ದೇಶಕ್ಕಾಗಿ ಕಾರ್ಗಿಲ್ ಯುದ್ದದಲ್ಲಿ 527 ಜನ ವೀರಯೊಧರ ಹುತಾತ್ಮರಾಗಿದ್ದರು , ಅವರ ತ್ಯಾಗ ಬಲಿದಾನ ಇಂದಿನ ಯುವಪೀಳಿಗೆಗೆ ಪ್ರೆರಣೆಯಾಗಬೇಕು, ಇತ್ತಿಚಿನ ದಿನಗಳಲ್ಲಿ ಭಾಷೆ , ಜಾತಿಯ ಹೆಸರಿನಲ್ಲಿ ಸಮಾಜ ವಡೆಯುವ ,ಮಾದಕ ವಸ್ತುಗಳ ಮೂಲಕ ಯುವಶಕ್ತಿ ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದ್ದು ಯುವಶಕ್ತಿ ದೇಶದ ಸಂಪತ್ತಾಗಿದ್ದು ಅದನ್ನು ಅರಿತು ಜಾಗೃತರಾಬೆಕು , ಶಿಕ್ಷಣದ ಜೋತೆ ಜೋತೆಗೆ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು , ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಮಂತ್ ಮಾತನಾಡಿ ಎಬಿವಿಪಿ ವತಿಯಿಂದ ನಿರಂತರವಾಗಿ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ಧ ದ್ವನಿಯಾಗಿ ನಿಲ್ಲುವುದುರೊಂದಿಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಅಭಿಷೇಕ್ ಶಂಬೋ ನಿರುಪಿಸಿದರು ಸ್ವಾಗತಿಸಿ ಶಿವಶರಣ ಚಂಬಾಳ ಜಿಲ್ಲಾ ಸಂಯೋಜಕರು ವಂದಿಸಿದರು ಈ ಸಂದರ್ಭದಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಆನಂದ್ ಅಮವಾದೆ ಸಹ ಕಾರ್ಯದರ್ಶಿ ಪವನ್ ಕುಂಬಾರ್ ನಾಗರಾಜ್ ಸುಲ್ತಾನ್ ಪುರ ಸಾಯಿ ಭೋಸ್ಲೆ ರಾಜ್ಯ ಕಾರ್ಯ ಕಾರ್ಯಕಾರಣಿ ಸದಸ್ಯ, ಪ್ರಾರ್ಥನಾ, ಮಮತಾ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!