ಕಾನೂನು ಪದವಿಧರರಿಗೆ ತರಬೇತಿಗಾಗಿ ಅರ್ಜಿ ಆಹ್ವಾನ
ಬೀದರ. ಜೂನ್. 18 :- 2024-25ನೇ ಸಾಲಿಗಾಗಿ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವಿಧರರಿಗೆ ಆಡಳಿತ ಮತ್ತು 2 ವರ್ಷ ನ್ಯಾಯಾಂಗ ತರಬೇತಿಗಾಗಿ ಸದರಿ ಯೋಜನೆಯ ಸರಳೀಕರಣ ಹಾಗೂ ಶಿಷ್ಯವೇತನ ತ್ವರಿತ ಮಂಜೂರಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಇಲಾಖೆಯ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾvದೆ.
ತರಬೇತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ತಿತಿತಿ.sತಿ.ಞಚಿಡಿ.ಟಿiಛಿ.iಟಿ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾತಿಯ ಒಟ್ಟು ಅಭ್ಯರ್ಥಿಗಳು 14 ಇದರಲ್ಲಿ 33% ಪ್ರತಿಶತ ಮಹಿಳೆಯುರಿಗೆ ಮೀಸಲಿರಿಸಿದೆ. ಅಭ್ಯರ್ಥಿಯು ಎಲ್.ಎಲ್.ಬಿ.ಯಲ್ಲಿ ತೆರ್ಗಡೆಯಾಗಿರಬೇಕು ಮತ್ತು ಅಭ್ಯರ್ಥಿಗಳ ವಯಸ್ಸು 40 ವರ್ಷಗಳಿಗೆ ಮಿರಿರಬಾರದು. ಅಭ್ಯರ್ಥಿಯ ಆದಾಯ ವಾರ್ಷಿಕ 2,50,000 ರೂ. ಸಾವಿರಕ್ಕಿಂತ ಕಡಿಮೆ ಇರತಕ್ಕದ್ದು. ತರಬೇತಿಯ ಅವಧಿಯಲ್ಲಿ ತಿಂಗಳಿಗೆ 10,000 ರೂ. ತರಬೇತಿ ಭತ್ಯೆ ನೀಡಲಾಗುವುದು. ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಎರಡು (2) ವರ್ಷಗಳವರೆಗೆ ತರಬೇತಿ ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ಜೂನ್.18 ರಿಂದ ಜುಲೈ.31 ರವರೆಗೆ ಅರ್ಜಿ ಸಲ್ಲಿಸಬಹ್ಮದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08482-233147ಗೆ ಸಂರ್ಪಕಿಸಬಹುದಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.