ಬೀದರ್

ಕಸಿನೊ, ನಕಲಿ ಗುಟ್ಕಾ, ಗಾಂಜಾ ಸಾಗಾಟ ತಡೆಯಿರಿ: ಭಗವಂತ ಖೂಬಾ

ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರವರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆಯವರಿಗೆ ಪತ್ರ ಬರೆದು, ಜಿಲ್ಲೆಯಲ್ಲಿ ಗೋವಾ ಮಾದರಿ ಕಸಿನೋ (ರಿಕ್ರೆಯೇಷನ್ ಸೆಂಟರ್) ಪ್ರಾರಂಭಿಸಲು ನೆರೆಯ ತೆಲಂಗಾಣ ಮತ್ತು ಆಂದ್ರದ ಉದ್ಯಮಿಗಳು ಯತ್ನಿಸುತ್ತಿದ್ದಾರೆ, ಯಾವೂದೆ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದು, ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ನಕಲಿ ಗುಟ್ಕಾ ತಯ್ಯಾರಿಕೆ, ಮಾರಾಟ ಮತ್ತು ಅಕ್ರಮವಾಗಿ ನಡೆಯುತ್ತಿರುವ ಗಾಂಜಾ ಸಾಗಾಟ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಸುಮಾರು 10 ವರ್ಷಗಳಿಂದ ಬೀದರ ಜಿಲ್ಲೆಯ ಭಂಗೂರ ಮತ್ತು ಮುಂತಾದ ಸರಹದ್ದುಗಳ ಬಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಉದ್ಯಮಿಗಳು ರಿಕ್ರಿಯೇಷನ್ ಸೆಂಟರ್ (ವಿನೋದಕೂಟ) ಹೆಸರಿನಲ್ಲಿ (ಗೋವಾ ಮಾದರಿಯ ಕಸಿನೋ) ಪ್ರಾರಂಭಿಸಲು ಯತ್ನಿಸುತ್ತಿದ್ದಾರೆ, ಈ ಕುರಿತು ನನಗೆ ಸಾಕಷ್ಟು ಒತ್ತಡಗಳು ಬಂದರೂ ಸಹ ನಾನು ಈ ಕಾರ್ಯಕ್ಕೆ ತಡೆಗೊಡೆಯಾಗಿ ನಿಂತು ಯಶಸ್ವಿಯಾಗಿರುವೆ.

ಕೇವಲ ಊಟೋಪಚಾರಕ್ಕೆಂದು ಅನುಮತಿ ಪಡೆದು, ನಡೆಸಬಾರದೆಲ್ಲಾ ಅನೈತಿಕ ಅಕ್ರಮ ಚಟುವಟಿಕೆಗಳು ಇದರಲ್ಲಿ ನಡೆಸುತ್ತಾರೆ, ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರ ಮಕ್ಕಳು, ಬಡವರ ಮಕ್ಕಳಿದ್ದು, ಒಂದು ಬಾರಿ ಈ ರಿಕ್ರೆಯೇಷನ್ ಸೆಂಟರ ಒಳಗಡೆ ಪ್ರವೇಶ ಮಾಡಿದರೆ, ಅವರ ಕುಟುಂಬವೆ ಬೀದಿಗೆ ಬರುತ್ತದೆ, ಆದ್ದರಿಂದಲೆ ಇವುಗಳಿಗೆ ತೆಲಂಗಾಣದಲ್ಲಿ ಬ್ಯಾನ್ ಮಾಡಲಾಗಿದೆ, ಕಾರಣ ಅವರುಗಳು ನಮ್ಮ ಜಿಲ್ಲೆಗೆ ಬರಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿ ಮಾಹಿತಿ ನೀಡಿದ್ದಾರೆ.

ಆದರೆ ಸದ್ಯದ ರಾಜಕೀಯ ಪರಿಸ್ಥಿತಿಗಳು ಬದಲಾಗಿರುವುದರಿಂದ ಮತ್ತೆ ಅವರು ಈ ಪ್ರಯತ್ನ ಮುಂದುವರೆಸುವ ಸಾಧ್ಯತೆಗಳು ಹೇರಳವಾಗಿವೆ, ಜಿಲ್ಲೆಯ ಯುವಕರ, ಬಡವರ, ಮಹಿಳೆಯರ, ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವೂದೇ ಕಾರಣಕ್ಕೂ ತಾವು ರಿಕ್ರೆಯೇಷನ್ ಸೆಂಟರ್ ಪ್ರಾರಂಭಕ್ಕೆ ಅನುಮತಿಸಬಾರದೆಂದು ಈಶ್ವರ ಖಂಡ್ರೆಯವರಿಗೆ ಖೂಬಾ ಆಗ್ರಹಿಸಿದ್ದಾರೆ.

ಜೊತೆಗೆ ಅಕ್ರಮವಾಗಿ ಬೀದರನಲ್ಲಿ ನಕಲಿ ಗುಟ್ಕಾ ತಯ್ಯಾರಿಸಿ, ಅಮಾಯಕ ಯುವಕರನ್ನು ಬಳಸಿಕೊಂಡು ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸಾಗಿಸುತ್ತಿದ್ದಾರೆ, ಇದರಲ್ಲಿ ಜಿಲ್ಲೆಯ ಯುವಕರು ಬಲಿಯಾಗುತ್ತಿದ್ದಾರೆ, ಇದರ ಹಿಂದೆ ಜಿಲ್ಲೆಯ ಬಹಳ ದೊಡ್ಡವರ ಕೈವಾಡವು ಇದೆ ಎಂದು ಜನರು ಮಾತಾಡುತ್ತಾರೆ, ಆದರೆ ದೊಡ್ಡವರ ದುಡ್ಡಿನ ಆಸೆಗೆ ಯುವಕರ ಉತ್ತಮ ಭವಿಷ್ಯ ಹಾಳಾಗುತ್ತಿದೆ, ಆದ್ದರಿಂದ ಅಕ್ರಮ ಗುಟ್ಕಾ ತಯ್ಯಾರಿಕೆಯ ಮೇಲೆ ಅಧಿಕಾರಿಗಳಿಂದ ದಾಳಿ ಮಾಡಿಸಿ, ಗುಟ್ಕಾ ತಯ್ಯಾರಿಕೆ ಬಂದ ಮಾಡಿಸಬೇಕು ಮತ್ತು ಅಕ್ರಮ ಸಾಗಾಣಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೆಬೇಕೆಂದು ಒತ್ತಾಯಿಸಿದ್ದಾರೆ.

ಇದೇಲ್ಲದರ ಜೊತೆಗೆ ಅತಿ ಮುಖ್ಯವಾಗಿ ಸುಮಾರು ವರ್ಷಗಳಿಂದ ಔರಾದ ಮತ್ತು ಬಸವಕಲ್ಯಾಣ ತಾಲುಕು ಸರಹದ್ದುಗಳ ಮೂಲಕ ನಡೆಯುತ್ತಿರುವ ಗಾಂಜಾ ಸರಬರಾಜಿಗೆ ಕಡಿವಾಣ ಹಾಕಬೇಕಾಗಿದೆ, ಕಳೆದ ಪೋಲೀಸ್ ಅಧೀಕ್ಷಕರು ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿದ್ದರು, ಆದರೆ ಇದು ನಿರಂತರ ನಡೆಯುವ ಅಕ್ರಮ ಚಟುವಟಿಕೆ ಆಗಿದೆ, ಔರಾದ ಮತ್ತು ಬಸವಕಲ್ಯಾಣ ತಾಲುಕುಗಳ ಮೂಲಕ ನೇರೆ ರಾಜ್ಯಗಳಿಗೆ ಗಾಂಜಾ ಸಾಗಾಟ ನಡೆಯುತ್ತ್ತಿದೆ, ಆದ್ದರಿಂದ ತಾವುಗಳು ಜಿಲ್ಲೆಯ ಎಲ್ಲಾ ಸರಹದ್ದುಗಳಲ್ಲಿ ಪೋಲೀಸ್ ಚೇಕ್ ಪೋಸ್ಟ್‍ಗಳಲ್ಲಿ ಹೆಚ್ಚಿನ ಸಿಬ್ಬಂದಿಗಳ ನೇಮಕ, ಗಸ್ತುಗಳ ಹೆಚ್ಚಿಸುವಿಕೆ, ಮುಂತಾದ ಕ್ರಮಗಳು ತೆಗೆದುಕೊಂಡು, ಜಿಲ್ಲೆಯನ್ನು ಗಾಂಜಾ ಮುಕ್ತ ಮಾಡಲು ಶ್ರಮೀಸಬೆಕೆಂದು ಈಶ್ವರ ಖಂಡ್ರೆಯವರಿಗೆ ಭಗವಂತ ಖೂಬಾ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ, ಜಿಲ್ಲೆಯ ರೈತರ, ಯುವಕರ, ಮಹಿಳೆಯರ, ಮಕ್ಕಳ ಎಲ್ಲರ ಉದ್ಧಾರಕ್ಕಾಗಿ ಅವರ ಸಂರಕ್ಷಣೆಗಾಗಿ ಮೇಲಿನ ಈ ಎಲ್ಲಾ ವಿಷಯಗಳು ನಮ್ಮ ಸರ್ಕಾರದ ಗಮನದಲ್ಲಿಟ್ಟು ಆದಷ್ಟೂ ನಿಯಂತ್ರಿಸುವ ಕೆಲಸ ಮಾಡಿರುವೆ, ಈ ಕಾರಣಕ್ಕಾಗಿಯೆ ನನಗೆ ರಾಜಕೀಯ ವೈರಿಗಳು ಜಾಸ್ತಿಯಾದರು, ಆದರೆ ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲಾ, ಕೆಡಸಿಕೊಳ್ಳೋದು ಇಲ್ಲಾ. ಅದ್ದರಿಂದ ತಾವು ಕೂಡ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಿ, ಈ ಅಕ್ರಮಗಳನ್ನು ತಡೆಗಟ್ಟಬೇಕೆಂದು ಭಗವಂತ ಖೂಬಾ ಈಶ್ವರ ಖಂಡ್ರೆಯವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಜೊತೆಗೆ ನೂತನ ಜಿಲ್ಲಾಧಿಕಾರಿಗಳಿಗೂ ಮತ್ತು ಪೋಲೀಸ್ ಅಧೀಕ್ಷಕರರಿಗೂ ಇದರ ಪ್ರತಿಯನ್ನು ಲಗತ್ತಿಸಿ, ಈ ಕುರಿತು ಹೆಚ್ಚಿನ ನಿಗಾ ಇಡಬೇಕೆಂದು ಕೋರಿಕೊಂಡಿದ್ದಾರೆ. ಈ ನಿಟ್ಟನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಪೋಲೀಸ್ ಇಲಾಖೆ ಯಾವ ರೀತಿ ಕಾರ್ಯೋನ್ಮೂಖವಾಗುವುದು ಎಂದು ಕಾದು ನೋಡಬೇಕಾಗಿದೆ.

Ghantepatrike kannada daily news Paper

Leave a Reply

error: Content is protected !!