ಕಳ್ಳತನ ಪ್ರಕರಣದ 17 ಜನ ಆರೋಪಿಗಳ ಬಂಧನ-ಎಸ್.ಪಿ.ಪ್ರದೀಪ ಗುಂಟಿ
ಬೀದರ, ಜುಲೈ.25 :- ಬೀದರ ಜಿಲ್ಲೆಯ ಏಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 22 ಹಾಗೂ ತೆಲಂಗಾಣ ರಾಜ್ಯದ ಜಹೀರಾಬಾದ ಪೊಲೀಸ್ ಠಾಣೆಯಲ್ಲಿ ದಾಖಲದ 04 ಸ್ವತ್ತಿನ ಕಳುವು ಪ್ರಕರಣಗಳನ್ನು ಬೇಧಿಸಿ ಆರೋಪಿಗಳಿಂದ 38,29,000 ರೂ.ಬೆಲೆಯುಳ್ಳ ಸ್ವತ್ತನ್ನು ಜಪ್ತಿ ಮಾಡಿ 17 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದರು.
ಅವರು ಗುರುವಾರ ಬೀದರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಬೀದರ ಜಿಲ್ಲೆಯ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣ, ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಂದು ಪ್ರಕರಣ, ಹುಮನಾಬಾದ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಂದು ಪ್ರಕರಣ, ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಂದು ಪ್ರಕರಣ, ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣ, ಜನವಾಡಾ ಪೊಲೀಸ್ ಠಾಣೆಯ ಒಂದು ಪ್ರಕರಣ ಮತ್ತು ಮನ್ನಾಏಖೇಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಂದು ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣಗಳಡಿ ಬಂಧಿಸಲಾದ ಆರೋಪಿಗಳಿಂದ 1 ಕೆಜಿ ಗಾಂಜಾ ಅಂದಾಜು ಕಿಮ್ಮತ್ತು 1,00,000 ರೂ., 38 ದ್ವಿಚಕ್ರ ವಾಹನಗಳು ಅಂದಾಜು ಕಿಮ್ಮತ್ತು 28,33,000 ರೂ., 03 ಕಾರ್ಟನ ಗೋಲ್ಡ್ ಫಿಲ್ಯಾಕ ಸಿಗರೇಟಗಳು ಅಂದಾಜು ಕಿಮ್ಮತ್ತು 3,27,000 ರೂ., ವಿವಿಧ ಕಂಪನಿಯ 11 ನೀರಿನ ಮೋಟಾರಗಳು ಅಂದಾಜು ಕಿಮ್ಮತ್ತು 1,84,000 ರೂ., 2500 ಕೆಜಿ ಪಡಿತರ ಅಕ್ಕಿ ಹಾಗೂ 01 ಮಹಿಂದ್ರಾ ಗೂಡ್ಸ್ ವಾಹನ ನಂ. ಕೆಎ38 5801 ಸೇರಿ ಅಂದಾಜು ಕಿಮ್ಮತ್ತು 3,85,000 ಹೀಗೆ ಒಟ್ಟು 38,29,000 ರೂ.ಬೆಲೆಯುಳ್ಳ ಸ್ವತ್ತನ್ನು ಜಪ್ತಿ ಮಾಡಿ 17 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಚಂದ್ರಕಾAತ ಪೂಜಾರಿ, ಬೀದರನ ಡಿ.ವಾಯ್.ಎಸ್.ಪಿ.ಶಿವಣ್ಣಗೌಡ ಪಾಟೀಲ, ಭಾಲ್ಕಿ ಡಿ.ವಾಯ್.ಎಸ್.ಪಿ. ಶಿವಾನಂದ ಪಾವಡಶೆಟ್ಟಿ, ಹುಮನಾಬಾದ ಡಿ.ವಾಯ್.ಎಸ್.ಪಿ. ಜೆ.ಎಸ್.ನ್ಯಾಮಗೌಡರ್ ವಿವಿಧ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೇಕ್ಟರಗಳು, ಇನ್ಸಪೇಕ್ಟರಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.