ಬೀದರ್

“ಕಲ್ಯಾಣ ಕರ್ನಾಟಕ ಹಚ್ಚು ಹಸಿರಾಗಿಸಲು ಸಂಕಲ್ಪ”

ಪರಿಸರದ ಅಸಮತೋಲನ ಜೀವ ಕಾರುಣ್ಯಕ್ಕೆ ಹಾನಿ. ಮೂರು ವರ್ಷದ ಜೋಕೆ ನೂರು ವರ್ಷ ಆರೈಕೆ. ನಮ್ಮಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಎಲ್ಲರೂ ಕಲ್ಯಾಣ ಕರ್ನಾಟಕ ಹಚ್ಚು ಹಸಿರಾಗಿಸಲು ಸಂಕಲ್ಪ ಮಾಡಿ ಪ್ರಯತ್ನ ವಾದಿಗಳಾಗಲು ಎ. ಬಿ. ಪಾಟೀಲ ಕರೆ ನೀಡಿದರು.
ವಚನ ಚಾರಿಟೇಬಲ್ ಸೊಸೈಟಿ ಹಮ್ಮಿಕೊಂಡ ಪರಿಸರ ದಿನಾಚರಣೆ – ಪ್ರತಿಭಾ ಪುರಸ್ಕಾರ ಸಸಿ ನೀರೆರೆದು ಚಾಲನೆ ನೀಡಿದ ಸಾಮಾಜಿಕ ಅರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಬಿ. ಪಾಟೀಲರು ಮುಂದುವರೆದು ಕಾಂಕ್ರಿಟಮಯ ಜಗತ್ತಿನಲ್ಲಿ ಕಷ್ಟ ಶತಸಿದ್ದ.
ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ಗಿಡ ಹಚ್ಚೋದಕಿಂತ ಅದರ ಪಾಲನೆ ಪೋಷಣೆಯ ಅರಿವು ಅಡವಡಲ್ಲಿ ವಚನ ಚಾರಿಟೇಬಲ್ ಸೊಸೈಟಿ ನವರು ಒಂದು ಓಣೆ, ಬಡಾವಣೆ ಹಳ್ಳಿ ದತ್ತು ತೆಗೆದುಕೊಂಡು ಮುನ್ನಡೆದರೆ ಇಲಾಖೆಯಿಂದ ಸಹಕರಿಸುತ್ತೇವೆ.
ಅನ್ನ ಆಶ್ರಯ, ಆರೋಗ್ಯ ವ್ಯಕ್ತಿಗೆ ಬೇಕು. ಆದರೆ ಗಿಡಮರಗಳ ಉಪಯೋಗ ಮರೆಯಲಾಗದು. ಬಿಸಿಲಿನಿಂದ ಬಂದು ನೆರಳಾಶ್ರಯದಲ್ಲಿ ನಿಂತಾಗ ಆಗುವ ಆನಂದ ವರ್ಣಿಸಲು ಅಸಾಧ್ಯ ಇದು ಪುಣ್ಯದ ಕೆಲಸ ಇಂದು ನಗರದಲ್ಲಿ ಮಂಗಗಳ ಕಾಟವಾಗಿದೆ. ಕಾರಣ ಗಿಡ-ಗಂಟಿಗಳಿಲ್ಲ, ಕುಡಿಯಲು ನೀರಿಲ್ಲ, ಹಣ್ಣುಗಳಿಲ್ಲ, ಇದಕ್ಕೆಲ್ಲ ನಾವೇ ಹೊಣೆಗಾರರು.
ಒಬ್ಬ ವ್ಯಕ್ತಿ ಜೀವ ಮಾನದಲ್ಲಿ ಕನಿಷ್ಟ ಹತ್ತು ಗಿಡಗಳನ್ನಾದರು ಬೆಳೆಸಿ, ಉಳಿಸಬೇಕು. ಹಸಿರು ಕಾರಣದಿಂದ ನೆಮ್ಮದಿ ಶಾಂತಿ ನೆಲೆಗೊಳ್ಳುತ್ತದೆ. ಆದರೆ ಸಂಸ್ಕಾರದ ಕೊರತೆ ತುಂಬಾ ಇದೆ. ಸಂಸ್ಕಾರ ಇಲ್ಲದ ಶಿಕ್ಷಣ ಬದುಕು ರೂಪಿಸಲಿಕ್ಕೆ ಕಷ್ಟ ಬಸವಣ್ಣನವನರ ಕಳಬೇಡ ಕೊಲಬೇಡ ವಚನ ಅರ್ಥೈಸಿಕೊಂಡು ನಡೆದರೆ ಬದುಕು ಸಂತೃಪ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಗದಲ ಮೋರಾರ್ಜಿ ವಸತಿ ಶಾಲೆ ಪ್ರಾಚಾರ್ಯರಾದ ಚನ್ನಬಸವ ಹೇಡೆ – ಅನುಭಾವ ನೀಡುತ್ತ, ನಮ್ಮ ಹೊಣೆಗಾರಿಕೆ ಜೋತೆಗೆ ಭೂಮಿ ಸಂರಕ್ಷಣೆ ಮಾಡಬೇಕು. ಪರಿಸರ ಸಮಸ್ಯೆ ಉಲ್ಬಣ ಗೊಂಡರೆ ಬದುಕು ಬರಡಾಗುತ್ತದೆ.
ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿದೆ ಬಡ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ನಮ್ಮ ವಸತಿ ಶಾಲೆ ಮಗು ರಾಜ್ಯಕ್ಕೆ ಪ್ರಥಮ, ವಚನ ಚಾರಿಟೇಬಲ ಸೊಸೈಟಿಯ ಶೈಕ್ಷಣಿಕ ಪ್ರೋತ್ಸಾಹ ಧನ ಮಕ್ಕಳಿಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಯಾಗಲಿದೆ ಇಂಥ ಸಾಮಾಜಿಕ ಸಂಘ – ಸಂಸ್ಥೆಗಳು ಮುಂದೆ ಬಂದಾಗ ಬಡ ಮಕ್ಕಳಿಗೆ ಅನೂಕೂಲವಾಗಲಿದೆ.
ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳಾದ ಮಹಾದೇವ ಪಾಟೀಲ, ವೀರಯ್ಯ ಪೂಜಾರಿ ಅತಿಥಿಗಳಾದ ಆಗಮಿಸಿದ್ದರು.
ಸಂಸ್ಥೆಯ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ಪ್ರಾಸ್ತಾವಿಕವಾಗಿ – ನಮ್ಮ ಸಂಸ್ಥೆ ಮೂರು ವರ್ಷದ ಮಗು, ನಲ್ವತ್ತು ಸಮಾನ ಮನಸ್ಕರು ಸೇರಿ ಸಾಮಾಜಿಕ ಕೆಲಸ ಯಾವುದೇ ಆಪೇಕ್ಷೆ ಇಲ್ಲದೆ ಮಾಡುತ್ತಿದ್ದೇವೆ.
ಇಲ್ಲಿಯವರೆಗೆ ಹತ್ತು ಮಕ್ಕಳಿಗೆ ತಲಾ 10,000/- ಪ್ರೋತ್ಸಾಹ ಧನ, ನಗರ ಸಭೆ ಮಹಿಳಾ ಕರ್ಮಚಾರಿಗಳಿಗೆ ಸ್ವೆಟರ್ ವಿತರಣೆ ದನಕರುಗಳಿಗೆ ನೀರಿಗಾಗಿ ತೊಟ್ಟಿ, ಕರೋನಾ ಸಂಧರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಗಂಜಿ, ಬಿಸಿಲಿನಲ್ಲಿ ಪಾದರಕ್ಷೆ ಕೆಲಸ ಮಾಡುವವರಿಗೆ ಕೊಡೆ ಹೀಗೆ ಹತ್ತಾರು ಕೆಲಸ ಮಾಡುತ್ತ ಮುಂದೆ ಸಾಗಿದ್ದೇವೆ. ತಮ್ಮೆಲ್ಲರ ಸಹಕಾರ ವಿದ್ದರೆ ಇನ್ನು ಹೆಚ್ಚಿನ ಕಾರ್ಯ ಮಾಡಲು ನಮಗೆ ಉತ್ತೇಜನ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ದೇಶಕರಾದ ಡಾ. ಸುರೇಶ ಪಾಟೀಲ ವಹಿಸಿದರೆ, ಸಾನಿಧ್ಯವನ್ನು ಗುರು ಬಸವೇಶ್ವರ ಸಂಸ್ಥಾನ ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿಗಳು ವಹಿಸಿ ಬಡಮಕ್ಕಳ ಶಿಕ್ಷಣ ಅಭಿವೃದ್ಧಿ, ಪರಿಸರ ಕಾಪಾಡುವಿಕೆ ನಮ್ಮೆರಡು ಕಣ್ಣುಗಳಿದಂತೆ ಎಲ್ಲರೂ ಸೇರಿ ಕೈಲಾದ ಮಟ್ಟಿಗೆ ಸೇವೆ ಮಾಡಬೇಕು. ಜಿಲ್ಲಾ ವಕೀಲ ಸಂಘದ ಅಧ್ಯಕ್ಷರಾದ ಶಿವಶರಣಪ್ಪ ಪಾಟೀಲ (ಪುಟ್ಟು) ಅವರನ್ನು ಗೌರವಿಸಲಾಯಿತು.
ಹತ್ತನೇ ಪಾಸಾದ ಬಡತನ ರೇಖೆಗಿಂತ ಕೆಳಗಿರುವ ಅಂಕಿತಾ ಅಂಬರೀಷ(96.33%), ಅಂಕಿತಾ ಓಂಕಾರ (92.80%), ಶಾಲಿನಿ ನಾಗೇಶ (95.68%) ಲಕ್ಷ್ಮಣ ಅನೀಲ 93.6%, ರಕ್ಷಿತಾ ಗಣಪತಿ 93%, ಹಾಗೂ ಪಿಯುಸಿ ಪಾಸಾದ ವಿಶಾಲ ಬಿರಾದಾರ (93.16%), ಅಂಬಿಕಾ ಸಂಗಯ್ಯ (96.66%), ಚಿನ್ನಮ್ಮ ದಶಮುಖಪ್ಪ 90.66%, ಶಿವಕುಮಾರ ಸಂಗಪ್ಪ 94.33%, ತ್ರಿವೇಣಿ ಶಾಂತಕುಮಾರ 94.83%, ಕಡುಬಡವ ಹತ್ತು ಮಕ್ಕಳೆಲ್ಲರಿಗೆ ತಲಾ ಹತ್ತು ಸಾವಿರ ರೂಪಾಯಿ ಪ್ರಶಸ್ತಿ ಪ್ರಮಾಣ ಪತ್ರ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ನೀಡಿ ಗೌರವಿಸಿದರು.
ಇನ್ನು ಜಿಲ್ಲೆಯ ಶೇಕಡಾ 90 ಅಂಕ ಪಡೆದು ಶೈಕ್ಷಣಿಕ ಸಾಧನೆ ಮಾಡಿದ 44 (ಹತ್ತನೆ, ಪಿಯುಸಿ) ಮಕ್ಕಳಿಗೆ “ವಚನ ರತ್ನ” ಪಶಸ್ತಿ ಹಾಗೂ ನೆನಪಿನ ಕಾಣಿಕೆ, ಶಾಲು, ಹಾರ ಹಾಕಿ ಗೌರವಿಸಲಾಯಿತು.
ವೈಜಿನಾಥ ಸಜ್ಜನಶೆಟ್ಟಿ ವಚನ ಗಾಯನ ನಡೆಸಿಕೊಟ್ಟರು.
ನಿರ್ದೇಶಕರಾದ ಪ್ರಕಾಶ ಮಠಪತಿ ಸ್ವಾಗತಿಸಿದರೆ, ಜಗನ್ನಾಥ ಶಿವಯೋಗಿ ವಂದಿಸಿದರೆ ಪ್ರಧಾನ ಕಾರ್ಯದರ್ಶಿ ಶಿವಶಂಕರ ಟೋಕರೆ ನಿರೂಪಿಸಿದರು.

Ghantepatrike kannada daily news Paper

Leave a Reply

error: Content is protected !!