ಕಲಾವಿದರ ಗುರುತಿನ ಚೀಟಿಗಾಗಿ ಅರ್ಜಿ ಆಹ್ವಾನ
ಬೀದರ. ಜೂನ್. 17 :- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೇವಾ ಸಿಂಧೂ ಪೋರ್ಟಾಲ್‌ನಲ್ಲಿ ಕಲಾವಿದರ ಗುರುತಿನ ಚೀಟಿ ನೋಂದಣಿಗಾಗಿ ಅರ್ಹ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಅನೇಕ ಕಲಾವಿದರಿಗೆ, ಕಲಾತಂಡಗಳಿಗೆ ಅವಕಾಶ ನೀಡುತ್ತಿದ್ದು, ಸದರಿ ಕಲಾವಿದರ ವಿವರಗಳನ್ನು ಕ್ರೂಢೀಕರಿಸುವ ದೃಷ್ಠಿಯಿಂದ ಜಿಲ್ಲೆಯಲ್ಲಿರುವ ಕಲಾವಿದರ/ಕಲಾತಂಡಗಳ/ ಶಿಲ್ಪಕಲಾವಿದರು, ಚಿತ್ರ ಕಲಾವಿದರ ಪಟ್ಟಿಯನ್ನು ತಯಾರಿಸಿ ಅವರಿಗೆ ಸೂಕ್ತ ಕಾರ್ಯಕ್ರಮಗಳನ್ನು ನೀಡಲು ಹಾಗೂ ನೈಜ ಕಲಾವಿದರ ಪಟ್ಟಿಯನ್ನು ತಯಾರಿಸಿ ಗುರುತಿನ ಚೀಟಿಯನ್ನು ನೀಡಲು ಕಲಾವಿದರು/ಕಲಾತಂಡದವರು ತಮ್ಮ ಸ್ವ ವಿವರವಾದ ಮಾಹಿತಿ, ಕಲಾಪ್ರದರ್ಶನಗಳ ದಾಖಲೆಗಳು ಆಧಾರ್ ಕಾರ್ಡ್ ಪ್ರತಿ ಮತ್ತು ಇತರೆ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ಈಗಾಗಲೇ 2020-21ನೇ ಸಾಲಿನಲ್ಲಿ ಇಲಾಖೆಯ ವತಿಯಿಂದ ಕಲಾವಿದರ ಗುರುತಿನ ಚೀಟಿ ನೊಂದಣಿಗಾಗಿ ಅರ್ಜಿಯನ್ನು ಕರೆಯಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ ಕಲಾವಿದರನ್ನು ಹೊರತು ಪಡಿಸಿ ಉಳಿದವರು ಅರ್ಜಿ ಸಲ್ಲಿಸಬಹುದಾಗಿದೆ.
ನಿಗದಿತ ಅರ್ಜಿ ನಮೂನೆಗಳನ್ನು ಉಚಿತವಾಗಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ , ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ ಇವರಿಂದ ಪಡೆದು ಜೂನ್.29 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಬೀದರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.