ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ಡಾ. ಚನ್ನವೀರ ಶಿವಾಚಾರ್ಯ ಆಯ್ಕೆಃ ಡಾ. ಸುಬ್ಬಣ್ಣ ಕರಕನಳ್ಳಿ.
ಬೀದರಃ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ತನ್ನ 6 ನೇ ವಾರ್ಷಿಕೋತ್ಸವ, ಹಾಗೂ ಕರ್ನಾಟಕಕ್ಕೆ 50 ಸಂಭ್ರಮ ನಿಮತ್ತವಾಗಿ, ಕಲ್ಯಾಣ ನಾಡಿನ ಕಾಯಕ ಜೀವಿ ಸರಳತೆಯ ಜೀವನ ಭಕ್ತಾದಿಗಳ ಶಕ್ತಿ, ಸಾಹಿತ್ಯ ಸಂಗೀತ ಸಂಸ್ಕೃತಿಯ ಆರಾದಕ ಶಿಕ್ಷಣ ಪ್ರೇಮಿ,ಧಾರ್ಮಿಕತೆಯ ನಿಜಾರ್ಥ ಕಲಿಸಿಕೊಡುತ್ತಿರುವ, ಹಾರಕೂಡ ಮಠದ ಗುರುಗಳಾದ ಪೂಜ್ಯ ಡಾ. ಚನ್ನವೀರ ಶಿವಚಾರ್ಯರಿಗೆ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯ ಘಟಕದಿಂದ, ರಾಜ್ಯ ಮಟ್ಟದ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಗಸ್ಟ 11 ರಂದು ಬೀದರ ನಗರದ ಪೂಜ್ಯ ಡಾ. ಚನ್ನಬಸವಪಟ್ಟದೇವರು ಜಿಲ್ಲಾ ರಂಗಮAದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೀದರ ಜಿಲ್ಲೆಯಿಂದ, ಜಾನಪದ ಚಿಂತಕ ಶಂಭುಲಿAಗ ವಾಲದೊಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ ಚನ್ನಶೇಟ್ಟಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ, ಜಾನಪದ ಆಕಡಮಿ ಸದಸ್ಯ ವಿಜಕುಮಾರ ಸೋನಾರೆ, ಸಂಗೀತ ಸೇವಕಿ ಶ್ರೀಮತಿ ಭಾನುಪ್ರೀಯಾ ಅರಳಿ, ವೈದ್ಯಕೀಯ ಸೇವಕಿ ಡಾ. ಸುಜಾತ ಹೊಸಮನಿ, ಶಿಕ್ಷಕಿ ಸಾಹಿತ್ಯ ಸೇವಕಿ ಕಸ್ತೂರಿ ಪಟಪಳ್ಳಿ, ಜಾನಪದ ಗಾಯಕ ದೇವಿದಾಸ ಚಿಮಕೊಡ್, ಸಮಾಜಸೇವಕ ಭೀಮರಡ್ಡಿ, ಸಿಂಧನಕೇರಾ, ಸಾಹಿತ್ಯ ಕೃಷಿಕ ಡಾ. ಗವಿಸಿದ್ದಪ್ಪ ಪಾಟೀಲ್, ಕ್ರಾಂತಿ ಗೀತೆಗಳ ಗಾಯಕ ಬಕ್ಕಪ್ಪ ದಂಡಿನ, ಪತ್ರಕರ್ತ ಅಪ್ಪರಾವ ಸವದಿ, ವಿಜಕುಮಾರ ಅಷ್ಟೂರೆ, ಗಜಲ್ ವಚನ, ಸುಗಮಸಂಗೀತ ಪಂಚಭಾಷೆ ಗಾಯಕ ಜಿ ಚಂದ್ರಕಾAತ ರವರಿಗೆ ಬೀದರ ಜಿಲ್ಲೆಯಿಂದ ಆಯ್ಕೆಮಾಡಲಾಗಿದೆಯೆಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಸ್ಥೆ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.