ಕರ್ನಾಟಕ ರಾಜ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘಗಳಖ ಒಕ್ಕೂಟದ ಬೇಡಿಕೆಗೆ ಸಾರಿಗೆ ಸಚಿವರ ಸ್ಪಂದನೆ ಬೇಡಿಕೆ ಈಡೇರಿಸಲು ಸಮಿತಿ ರಚನೆ; ಒಕ್ಕೂಟದಿಂದ ಹರ್ಷ
ಬೀದರ: ಕರ್ನಾಟಕ ರಾಜ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಇಲಾಖಾ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಿದೆ.
20204ರ ಜೂನ್ 1 ರಂದು ಸಾರಿಗೆ ಸಚಿವರು ಮತ್ತು ಮಜುರಾಯಿ ಇಲಾಕೆಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕನಾಟಕ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘಗಳ ಒಕ್ಕೂಟ ಬೆಂಗಳೂರು ಇವರೊಂದಿಗಿನ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಇನ್ನಿತರ ಸದಸ್ಯರುಗಳು ಹಲವು ಬೇಡಿಕೆಗಳನ್ನು ಈಢೇರಿಸಲು ಒತ್ತಾಯಿಸಿ, ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದೆ.
ಮನವಿಯ ಪ್ರಕಾರ ವಾಹನ ಚಾಲನಾ ಪರವಾನಿಗೆ (ಎಲ್ಎಲ್) ಪಡೆಯುವ ಪ್ರತಿಯೊಬ್ಬ ವಾಹನ ಚಾಲಕರಿಗೆ ರಸ್ತೆ ನಿಯಮ ಹಾಗೂ ರಸ್ಯೆ ಸುರಕ್ಷತೆಯ ಬಗ್ಗೆ ತಿಳಿವಳಿಕೆ ಮತ್ತು ಕಾನೂನು ಅರಿವು ಅವಶ್ಯಕತೆ ಇದೆ. ಆದ್ದರಿಂದ ವಾಹನ ಚಾಲನಾ ಪರವಾನಿಗೆ ಪಡೆಯುವ ಅಭ್ಯರ್ಥಿಗಳು ಕಲಿಕಾ ಚಾಲನಾ ಪತ್ರ ಪಡೆಯುವ ಪ್ರತಿಯೊಬ್ಬ ಅಭ್ಯರ್ಥಿಗೆ ವಾಹನ ಚಾಲನಾ ತರಬೇತಿ ಶಾಲೆಗಳಿಂದ ನಮೂನೆ- 14 ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ಒಕ್ಕೂಟದಿಂದ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಸಂಘದ ಈ ಮೇಲಿನ ಬೇಡಿಕೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ.
ಈ ಬೇಡಿಕೆಯ ಜತೆಗೆ ಒಕ್ಕೂಟದ ಇನ್ನಿತರೆ ಬೇಡಿಕೆಗಳ ಸಂಬಂಧ ವರದಿಗಾಗಿ ಕೆಳಕಂಡ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರನ್ನಾಗಿ ಅಪರ ಸಾರಿಗೆ ಆಯುಕ್ತರಾದ ಮಾರುತಿ ಸಾಂಬ್ರಾಂನಿ, ಸಂಚಾಲಕರನ್ನಾಗಿ ಜಂಟಿ ಸಾರಿಗೆ ಆಯುಕ್ತರಾದ ಸಿದ್ದಪ್ಪ ಎಚ್. ಕಲ್ಲೇರೆ, ಸದಸ್ಯರುಗಳನ್ನಾಗಿ ಅಧಿಕಾರಿಗಳಾದ ವಸಂತ ಈಶ್ವರ್ ಚವ್ಹಾನ್, ಜಿ.ಕೆ. ಬಿರಾದಾರ್, ಸಾದಿಕ್ ಜಾಫರ್, ಶರಣಪ್ಪ ಕಲ್ಲಪ್ಪ ಹುಗ್ಗಿ, ಭೀಮರಾಯ ಹಾಗೂ ದಿನಮಣಿ ಅವರುಗಳನ್ನು ನೇಮಿಸಲಾಗಿದೆ.
ಈ ಸಮಿತಿಯು ಒಕ್ಕೂಟದ ಬೇಡಿಕೆಗಳ ಕುರಿತು ಕರ್ನಾಟಕ ರಾಜ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್ನ ಮಾಲೀಕರ ಒಕ್ಕೂಟದವರಿಂದ ಮಾಜಿತಿ ಪಡೆದು, ಚರ್ಚಿಸಿ, ವಾಹನ ಚಾಲನಾ ಪರವಾನಿಗೆ ಪಡೆಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಸಮಯದಲ್ಲಿ ನಮೂನೆ- 14 ಅನ್ನು ಕಡ್ಡಾಯಗೊಳಿಸುವ ಸಂಬಂಧ ಹಾಗೂ ಒಕ್ಕೂಟದವರು ನೀಡಿರುವ ಇನ್ನಿತರೆ ಬೇಡಿಕೆಗಳ ಕುರಿತು ಪರಿಶೀಲಿಸಿ ವಿವರವಾದ ವರದಿಯನ್ನು ಜುಲೈ 10ರೊಳಗೆ ನೀಡುವಂತೆ ಬೆಂಗಳೂರಿಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶದ ಪತ್ರದಲ್ಲಿ ಸೂಚಿಸಿದ್ದಾರೆ.
ಒಕ್ಕೂಟದಿಂದ ಹರ್ಷ
ತಮ್ಮ ಮನವಿಯನ್ನು ಪುರಸ್ಕರಿಸಿ ಸರಕಾರ ಕೂಡಲೇ ಸಮಿತಿ ರಚಿಸಿರುವುದಕ್ಕೆ ಒಕ್ಕೂಟದ ಅಧ್ಯಕ್ಷರಾದ ಆನಂದ್ ವಿ ಪಾಟೀಲ್, ರಾಜ್ಯ ಒಕ್ಕೂಟದ ಉಪಾಧ್ಯಕ್ಷರು ಮತ್ತು ಕಲಬುರಗಿ ಉಸ್ತುವಾರಿ ಯಲ್ಲಪ್ಪ ದೊಡ್ಡಮನಿ ಹಾಗೂ ಪ್ರಮುಖರಾದ ಮಂಜುನಾಥ ಶೆಟಕಾರ್, ಇರ್ಫಾನ್ ಅಹ್ಮೆದ್, ಸುರೇಶ್ ಬಿರಾದಾರ್ ಹಾಗೂ ಒಕ್ಕೂಟದ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.