ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘದಿAದ ಮನವಿಪತ್ರ
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘ (ಂIಖಿUಅ) ಬೀದರವು ವತಿಯಿಂದ ಇಂದು ಬೀದರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ 2007 ರಿಂದ ಪ್ರಾರಂಭವಾಗಿರುತ್ತದೆ. ಆನಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಪ್ರಕ್ರಿಯೆ ಪ್ರಾರಂಭ ಆದ ನಂತರ ಸೇವಾಸಿಂಧು ಕೇಂದ್ರ ಮತ್ತು ಗ್ರಾಮ ಒನ ಮುಖಾಂತರ ಪಡೆದ ಅರ್ಜಿಗಳಲ್ಲಿ 40% ಅರ್ಜಿಗಳು ಬೊಗಸ ಆಗಿರುತ್ತವೆ. 2021-2022 ರಿಂದ ಇಲ್ಲಿಯವರೆಗೆ ಶೈಕ್ಷಣಿಕ ಧನ ಸಹಾಯಕ ಅರ್ಜಿಗಳು ಮದುವೆ ಧನ ಸಹಾಯ ಅರ್ಜಿಗಳು, ಅಂತಿಮ ಸಂಸ್ಕಾರ ಅರ್ಜಿಗಳು, ಪಿಂಚಣಿ ಅರ್ಜಿಗಳು ವಿಲೆವಾರಿಯಾಗದೆ, ತಮ್ಮ ಅಧಿನ ಕಚೇರಿಗಳಲ್ಲಿ ಬಾಕಿ ಇರುತ್ತವೆ ಮತ್ತು ವಿಲೇವಾರಿಯಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ತಮ್ಮ ಅಧಿನ ಕಛೇರಿಯ ಲಾಗಿನ್ (ಐogiಟಿ) ಸಂಖ್ಯೆ ಕೆಲವೊಂದು ಸೇವಾಸಿಂಧು ಕೇಂದ್ರಗಳಿಗೆ ಬಹಿರಂಗ ಆದರಿಂದ ತಮ್ಮ ಆಧೀನದ ಕಾರ್ಮಿಕ ನೀರಿಕ್ಷಕ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಸಂಘದ ಬೈಲಾಜನ್ನು ಜಿಲ್ಲಾ ಕಛೇರಿ ಮತ್ತು ತಾಲುಕ ಕಾರ್ಮಿಕ ನೀರಿಕ್ಷಕರಿಗೆ ಸಲ್ಲಿಸಲಾಗಿದೆ. ಸಂಘದ ಬೈಲಾಜ ಪ್ರಕಾರ ಸಹಾಯಕ ಆಯುಕ್ತರ ಎಂದರೆ ಕರ್ನಾಟಕ ರಾಜ್ಯದ ಎಲ್ಲಾ ಸಹಾಯಕ ಆಯುಕ್ತಕರ ಒಳಗೊಂಡಿರುತ್ತಾರೆ. ಈ ರೀತಿ ಸ್ಪಷ್ಟನೆ ಇದ್ದರೂ ಕೂಡ ತಾಲೂಕ ಕಾರ್ಮಿಕ ನೀರಿಕ್ಷಕರು ಬೀದರ ರವರು (ಂIಖಿUಅ) ಗೆ ಸಂಯೋಜಿತವಾಗಿರುವ ಸಂಘದಿAದ ಸಲ್ಲಿಸಲಾದ ಅರ್ಜಿಗಳು ದುರುದ್ದೇಶದಿಂದ ತಿರಸ್ಕರಿಲಾಗಿವೆ.
ಬೇಡಿಕೆಗಳು: 2021-22 ರಿಂದ ಇಲ್ಲಿಯವರೆಗೆ ಬಾಕಿ ಇರುವ ಧನ ಸಹಾಯ ಅರ್ಜಿಗಳನ್ನು ವಿಲೇವಾರಿ ಮಾಡಬೇಕು.ಕಾರ್ಡ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿಯನ್ನು ಕಡ್ಡಾಯ ಮಾಡಿದ ಆದೇಶವನ್ನು ಹಿಂಪಡೆಯಬೇಕು. ಸೇವಾ ಸಿಂಧು ಮತ್ತು ಗ್ರಾಮ ಒನ ಕೇಂದ್ರಗಳನ್ನು ನೊಂದಣಿ ಮತ್ತು ನವೀಕರಣ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು. ಕಾರ್ಮಿಕ ಕಚೇರಿಯಲ್ಲಿ ಭ್ರಷ್ಟಚಾರ ತಡೆಗಟ್ಟಬೇಕು.ಸಹಾಯ ಧನದ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿರುವ ಕಾರ್ಮಿಕ ನೀರಿಕ್ಷಕರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.ಕಟ್ಟಡ ಕಾರ್ಮಿಕರ ಮನೆ ನಿರ್ಮಾಣಕ್ಕೆ ರೂ 5,00,000 (ಐದು ಲಕ್ಷ) ಸಹಾಯಧನ ನೀಡಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ಸ್ಲಂಬೋರ್ಡಗೆ ಕೊಡಲಾದ ಹಣವನ್ನು ವಾಪಸ ಪಡೆಯಬೇಕು. ಕಟ್ಟಡ ಕಾರ್ಮಿಕರಿಗೆ ಪ್ರತಿ ತಿಂಗಳು ರೂ 5000 ಐದು ಸಾವಿರ ಪಿಂಚಣಿ ಕೊಡಬೇಕು. ಕಾರಖಾನೆಗಳಲ್ಲಿ ಹೆಣ್ಣು ಮಕ್ಕಳನ್ನು ರಾತ್ರಿ ವೇಳೆಯಲ್ಲಿ ದುಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕ.ಒ.ಕ್ವಾ.ಕಾ ಸಂಘದ ಜಿಲ್ಲಾಧ್ಯಕ್ಷರಾದ ಎಮ.ಡಿ ಶಫಯತ ಅಲಿ, ನಜೀರ ಅಹ್ಮದ, ಅಲಿ ಅಹ್ಮದ ಖಾನ, ಶಿವಾಜಿರಾವ ಭೋಸಲೆ, ಗೌಸೊದ್ದಿನ ಭಾಲ್ಕಿ, ಪಪ್ಪುರಾಜ ಮೇತ್ರೆ , ಪ್ರಭು ಹೊಚಕನಳ್ಳಿ, ಸುನಿಲ ವರ್ಮಾ, ಖಾದರ ಶಾ, ಪ್ರಭು ತಗಣಿಕರ, ನನ್ನೆಸಾಬ, ಅಬ್ದುಲ ಖಾದರ, ಎಂ.ಡಿ ಖಮರ ಪಟೇಲ, ಗುರುಪಾದಯ್ಯ,
ಚಾಂದೋಬಾ, ಯಶವಂತ ಬಿರಿಕರ, ಶಿವರಾಜ ಕಮಠಾಣ, ಮುನಿರೊದ್ದಿನ, ಶಾಮರಾವ ಬಂಗೆ, ರಾಮಣ್ಣಾ ಅಲಮಾಸಪುರ, ಇಮ್ಮಾನವೇಲ್ ಗಾದಗಿ, ತುಕಾರಾಮ ಇದ್ದರು.