ಕರ್ನಾಟಕ ಕಾಲೇಜಿನ ಪ್ರೊ. ಎಂ.ಎಸ್. ಚೆಲ್ವಾ ನಿವೃತ್ತಿ: ಬಿಳ್ಕೊಡುಗೆ ಸಮಾರಂಭ
ಬೀದರ: ಕರ್ನಾಟಕ ಕಾಲೇಜಿನ ಎಲೆಕ್ಟಾçನಿಕ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಎಸ್ ಚೆಲ್ವಾ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ. ನಿವೃತ್ತಿಯ ನಂತರವೂ ಅವರಿಂದ ವಿದ್ಯಾರ್ಥಿಗಳಿಗಾಗಿ ಹೊಸ ಹೊಸ ಕೈಪಿಡಿಗಳು ಬಿಡುಗಡೆಯಾಗಲಿ. ೩೬ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ನಿಮಗೆ ಭಗವಂತ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಕಲಬುರಗಿಯ ಬಸವೇಶ್ವರ ವಿಶ್ವವಿದ್ಯಾಲಯದ ಎಲೆಕ್ಟಾçನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಶರಣಪ್ಪ ಮೂಲಗಿ ನುಡಿದರು.
ಕರ್ನಾಟಕ ರಾಷ್ಟಿçÃಯ ಶಿಕ್ಷಣ ಸಂಸ್ಥೆ ಅಡಿಯಲ್ಲಿನ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ ಎಲೆಕ್ಟಾçನಿಕ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಚೆಲ್ವಾ ಅವರ ಸೇವಾನಿವೃತ್ತಿ ಹಾಗೂ ಅವರೇ ಬರೆದ ಪುಸ್ತಕ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ ಆಯೋಜಿಸಿದ ಬಿಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಚೆಲ್ವಾ ಅವರು ವಿದ್ಯಾರ್ಥಿಗಳಿಗಾಗಿ “ಎ ಸ್ಟಡಿ ಆಫ್ ದಿ ಇಮೇಜ್ ಪ್ರೊಸೆಸಿಂಗ್ ಅಲ್ಗೊರಿದಮ್ಸ್ ಇನ್ ಎಂಬೆಡೆಡ್ ಸಿಸ್ಟಮ್ ಎನ್‌ವಿರಾನ್‌ಮೆಂಟ್” ಪುಸ್ತಕ ರಚನೆ ಮಾಡಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದರಲ್ಲಿ ಇಮೇಜ್ ಪ್ರೊಸೆಸಿಂಗ್ ಪ್ರಕ್ರಿಯೆ ಕುರಿತು ಮಕ್ಕಳ ಸಂಶೋಧನೆಗೆ ಸಹಕಾರಿಯಾಗಲೆಂದು ರಚನೆ ಮಾಡಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಚಾರ್ಯರಾದ ಅನೀಲಕುಮಾರ ಚಿಕ್ಕಮಾಣೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲೆಕ್ಟಾçನಿಕ್ಸ್ ವಿಭಾಗದ ಮುಖ್ಯಸ್ಥರಾದ ಸೋಮನಾಥ ಬಿರಾದಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರೊ. ಎಂ.ಎಸ್.ಚೆಲ್ವಾ ಹಾಗೂ ಅವರ ಪತ್ನಿ ಜ್ಯೋತಿ ಎಂ. ಚೆಲ್ವಾ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.