ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಬೀದರ ಜಿಲ್ಲಾಧ್ಯಕ್ಷರಾಗಿ ಎಂ ಡಿ ಸಲೀಮ್ ಚಿಕನ ನೇಮಕ.
ಬೀದರಃ 20 ಜುಲೈ 2023 ರಂದು ಬೀದರ ನಗರಕ್ಕೆ ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್ ಕಿರಣಕುಮಾರ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಜ್ಜನ ಕುಮಾರ ರವರು ಬೀದರ ಜಿಲ್ಲೆ ಬೀದರ ತಾಲ್ಲೂಕಿನ ಅಮಲಾಪೂರ ನಿವಾಸಿ ಎಮ್ ಡಿ ಸಲೀಮ್ ಚಿಕನ ರವರಿಗೆ ಬೀದರ ಜಿಲ್ಲಾಧ್ಯಕ್ಷರಾಗಿ ನೇಮಕವನ್ನು ಮಾಡಿರುತ್ತಾರೆ. ಜೋತೆ ಬೀದರ ಜಿಲ್ಲಾ ಉಸ್ತವಾರಿ ಜವಬ್ದಾರಿಯನ್ನು ನೀಡಿರುತ್ತಾರೆ. ಸಂಘಟನೆಯ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಮೂಲಕ ಸಮಾಜ ಸೇವೆಯನ್ನು ಮಾಡಲು ಜವಬ್ದಾರಿಯನ್ನು ನೀಡಲಾಗಿದೆಯೆಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್ ಕಿರಣಕುಮಾ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.