ಬೀದರ್

ಕರವೇ ಕಾವಲುಪಡೆ  ಅಬಕಾರಿ ಸಚಿವರಿಗೆ ಮನವಿ  ಚಂದ್ರಕಾAತ ಹಿಪ್ಪಳಗಾಂವ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಿಸಿ

ಬೀದರಃ ಶನಿವಾರ  ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮAದಿರದಲ್ಲಿ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ  ಆರ್ ಬಿ ತಿಮ್ಮಪೂರ ರವರಿಗೆ  ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಜಿಲ್ಲಾ ಘಟಕ ಬೀದರ ಜಿಲ್ಲಾಧ್ಯಕ್ಷರಾದ ಅವಿನಾಶ ಬುದೇರಾಕರ  ಕರ್ನಾಟಕ  ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ ಘೋಡಂಪಳ್ಳಿ  ಮನವಿ ಪತ್ರ ಸಲ್ಲಿಸಿ, ಜಿಲ್ಲೆಯಲ್ಲಿ ಕಳೆದ ೪೩ ವರ್ಷಗಳಿಂದ ಕಾಂಗ್ರೇಶ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಸೇವೆಯನ್ನು ಮಾಡುತ್ತಿರುವ  ಚಂದ್ರಕಾAತ ಹಿಪ್ಪಳಗಾಂವ ರವರಿಗೆ, sಸರ್ಕಾರದ ಯಾವುದಾದರೋಂದು ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿ ನಾಮನಿರ್ದೇಶನ  ಮಾಡಲು ವಿನಂತಿಸಿದ್ದಾರೆ.
ಬೀದರ ಜಿಲ್ಲೆಯಲ್ಲಿ ಕಾಂಗ್ರೇಸ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ, ಶ್ರಮದಾನ ನೀಡಿದ್ದಾರೆ.  ನಾಲ್ಕನೆ ಭಾರಿಗೆ, ಬೀದರ ಉತ್ತರ ಕ್ಷೇತ್ರದ ಶಾಸಕರು, ಪೌರಾಡಳಿತ ಮತ್ತು ಹಜ್ ಸಚಿವರಾಗಿ ಕೆಲಸವನ್ನು ಮಾಡುತ್ತಿರುವ  ರಹೀಂಖಾನ್ ರವರಿಗೆ ಗೆಲ್ಲಿಸಲು ಶ್ರಮಿಸಿದ್ದಾರೆ.
ಚಂದ್ರಕಾAತ ಹಿಪ್ಪಳಗಾಂವ ರವರಿಗೆ  ಮಾಡುವುದರಿಂದ ಜಿಲ್ಲೆಗೆ ರಾಜ್ಯಕ್ಕೆ ಪರಿಶಿಷ್ಟ ಜಾತಿ ಎಡಗೈಯಿ ಸಮಾಜಕ್ಕೆ ನ್ಯಾಯವನ್ನು ಸಿಕ್ಕಂತಾಗುತ್ತದೆ.
ಮುಖ್ಯ ಮಂತ್ರಿಗಳು, ಸಮಾಜ ಕಲ್ಯಾಣ ಸಚಿವರ,  ಗಮನಕ್ಕೆ ತಂದು ಚಂದ್ರಕಾAತ ಹಿಪ್ಪಳಗಾಂವ ರವರಿಗೆ ಸರ್ಕಾರದ ಯಾವುದಾದರೊಂದು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲು ಆಗ್ರಹಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!