ಬೀದರ್

ಕಂದಾಯ ಇಲಾಖೆ ಜನಸ್ನೇಹಿ ಇಲಾಖೆ ಮಾಡುವ ಗುರಿ:ಸಚಿವ ಕೃಷ್ಣ ಬೈರೇಗೌಡ

ಬೀದರ, ಅಗಸ್ಟ್ 24 – ನಮ್ಮ ಸರ್ಕಾರÀ ಜಾರಿಗೆ ಬಂದ ನಂತರ ಕಂದಾಯ ಇಲಾಖೆಯನ್ನು ಜನಸ್ನೇಹಿ ಇಲಾಖೆ ಮಾಡುವ ಗುರಿಯಿಂದ ಕಂದಾಯ ಇಲಾಖೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಹಂತ ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅವರು ಗುರುವಾರ ಬೀದರ ಜಿಲ್ಲಾ ಪಂಚಾಯತ ಕಛೇರಿ ಸಭಾಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬೀದರ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
“ಜನ ಸಾಮಾನ್ಯರು ಹೊಸ ಸರ್ಕಾರದ ಮೇಲೆ ಸಾಕಷ್ಟು ಭರವಸೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ಭರವಸೆಗಳಿಗೆ ನೀರೆರೆಯುವ ಸಲುವಾಗಿ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಕಳೆದ ಎರಡು ತಿಂಗಳಿನಿAದ ತತ್ವರಿತಗೊಳಿಸಲಾಗಿದೆ. ವಿಳಂಬವಾಗುತ್ತಿದ್ದ ತಕರಾರು ಅರ್ಜಿಗಳನ್ನು ಕಾಲಮಿತಿ ನಿಗದಿ ಮಾಡಿ ಜನಗಳು ತಾಲೂಕು ಕಚೇರಿಗಳಿಗೆ ದಿನನಿತ್ಯ ಅಲೆಯುವುದನ್ನು ಕಡಿಮೆ ಮಾಡಲಾಗಿದೆ. ಮತ್ತು ಆ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆಗೆ ಚಿಂತನೆಯೂ ನಡೆಯುತ್ತಿದ್ದು, ಬೀದರ್ ಜಿಲ್ಲೆಯಲ್ಲೂ ಸಹ ಅಧಿಕಾರಿಗಳು ಜನಪರ ಸೇವೆ ನೀಡುವ ಸಂಕಲ್ಪ ಮಾಡಬೇಕು” ಎಂದರು.
ಜನ ಸಾಮಾನ್ಯರ ತಕರಾರು ಅರ್ಜಿಗಳನ್ನು ಕಳೆದ ಎರಡು ತಿಂಗಳಿನಿAದ ಕಾಲಮಿತಿಯೊಳಗೆ ತ್ವರಿತ ವಿಲೇವಾರಿಗೊಳಿಸಲಾಗುತ್ತಿದೆ, ತಾಲೂಕು ಕಚೇರಿಗಳಿಗೆ ಜನರ ಅನಗತ್ಯ ಓಡಾಟಕ್ಕೂ ಇದೀಗ ಬ್ರೇಕ್ ಹಾಕಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ಜನಪರ ಸೇವೆ ಹೀಗೆ ಮುಂದುವರೆಯಲಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಹಕ್ಕು ಬದಲಾವಣೆಯ ವಿಳಂಬಕ್ಕೆ ತಡೆ:ಹಕ್ಕು ಬದಲಾವಣೆ ಪ್ರಕರಣಗಳಲ್ಲಿ ಉಂಟಾಗುತ್ತಿದ್ದ ಅನೇಕ ರೀತಿಯ ವಿಲೆಯಲ್ಲಿ ಆಗುತ್ತಿದ್ದ ವಿಳಂಬಗಳನ್ನು ಗಂಭೀರವಾಗಿ ಪರಿಗಣಿಸಿ ವಿಲೆಯನ್ನು ತ್ವರಿತಗೊಳಿಸಲಾಗಿದೆ. ಸಮಸ್ಯಾತ್ಮಕ ಹಕ್ಕು ಬದಲಾವಣೆ ತಕರಾರು ಪ್ರಕರಣಗಳ ವಿಲೆಯನ್ನು ಜೂನ್ ತಿಂಗಳಿನಲ್ಲಿ ಸರಾಸರಿ 27 ದಿನ ಇದ್ದಂತಹದ್ದನ್ನು ಆಗಸ್ಟ್ ತಿಂಗಳಿನಲ್ಲಿ 9 ದಿನಗಳ ಒಳಗೆ ವಿಲೆ ಮಾಡುವಂತಹ ಸುಧಾರಣಾ ಬದಲಾವಣೆ ತರಲಾಗಿದೆ.
ಸಾಧಾರಣ ಸಮಸ್ಯೆಯುಳ್ಳ ಹಕ್ಕು ಬದಲಾವಣೆ ತಕರಾರು ಪ್ರಕರಣಗಳ ವಿಲೆಗೆ ಜೂನ್‌ನಲ್ಲಿ ಸರಾಸರಿ 27 ದಿನ ತಗಲುತ್ತಿತ್ತು. ಆದರೆ, ಆಗಸ್ಟ್ ತಿಂಗಳಿನಲ್ಲಿ 13 ದಿನಗಳ ಒಳಗೆ ವಿಲೆ ಮಾಡಲಾಗಿದೆ. ಸಮಸ್ಯೆ ಇದ್ದಂತಹ ಹಕ್ಕು ಬದಲಾವಣೆ ಪ್ರಕರಣಗಳ ವಿಲೆಗೆ ಜೂನ್‌ನಲ್ಲಿ ಸರಾಸರಿ 4 ದಿನ ತೆಗೆದುಕೊಂಡಿದ್ದರೆ, ಆಗಸ್ಟ್ ನಲ್ಲಿ ಸರಾಸರಿ 1 ದಿನದಲ್ಲಿ ವಿಲೆ ಮಾಡಲಾಗುತ್ತಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಪ್ರಶಂಸಿಸಿದರು.
ತಕರಾರು ಪ್ರಕರಣಗಳ ಶೀಘ್ರ ಇತ್ಯರ್ಥ: ಅಧಿಕಾರಿಗಳಿಗೆ ಪ್ರಶಂಶೆ: ಬೀದರ್ ಜಿಲ್ಲೆಯಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಪಹಣಿ ತಿದ್ದುಪಡಿ ಪ್ರಕರಣಗಳು 4310 ಬಾಕಿ ಇತ್ತು. ಆದರೆ, ವಿಭಾಗವಾರು ಸಭೆಯ ನಂತರ ಇದೀಗ ಈ ಪ್ರಕರಣಗಳ ಸಂಖ್ಯೆ 3010ಕ್ಕೆ ಇಳಿಕೆಯಾಗಿದೆ. ಸುಮಾರು 1300 ಪ್ರಕರಣಗಳಲ್ಲಿ ತತ್ವರಿತ ವಿಲೇವಾರಿ ಮಾಡಲಾಗಿದೆ.
ಇದೇ ಸಮಯದಲ್ಲಿ ತಹಶೀಲ್ದಾರ್ ನ್ಯಾಯಾಲಯದಲ್ಲೂ 651 ಪ್ರಕರಣಗಳು ಬಾಕಿ ಇದ್ದವು. ಆದರೆ, ಇದೀಗ ಆ ಪ್ರಕರಣಗಳ ಸಂಖ್ಯೆ 488ಕ್ಕೆ ಇಳಿದಿದೆ. ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ 1319 ರಿಂದ 321ಕ್ಕೆ ಇಳಿಸಲಾಗಿದೆ. ಇದು ನಿಜಕ್ಕೂ ಇಲಾಖೆಯಲ್ಲಿನ ಉತ್ತಮ ಪ್ರಗತಿಯಾಗಿದ್ದು, ಇದನ್ನು ಹೀಗೆ ಮುಂದುವರೆಸುವAತೆ ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಅವರು ಸೂಚಿಸಿದರು.

ಇ-ಆಡಳಿತಕ್ಕೆ ಸೂಚನೆ:ಆಡಳಿತಕ್ಕೆ ವೇಗ ನೀಡುವ ಸಲುವಾಗಿ ಬೀದರ್ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ (ಎಸಿ) ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಇ-ಆಫೀಸ್ ಅಂದರೆ ಆನ್‌ಲೈನ್ ಮೂಲಕ ಕಡತ ವಿಲೇವಾರಿ ಮಾಡುವಂತೆಯೂ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಆಗಸ್ಟ್ 15 ರಿಂದಲೇ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ಕಡತಗಳನ್ನೂ ಇದೀಗ ಆನ್ ಲೈನ್ ಮೂಲಕವೇ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 1ನೇ ತಾರೀಖಿನ ಒಳಗಾಗಿ ಎಲ್ಲಾ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗ ಕಚೇರಿಗಳಲ್ಲೂ ಆನ್ ಲೈನ್ ಮೂಲಕವೇ ಎಲ್ಲಾ ಕಡತಗಳ ವಿಲೇವಾರಿ ಆಗಬೇಕು. ಆಡಳಿತಕ್ಕೆ ವೇಗ ನೀಡಲು, ಪಾರದರ್ಶಕತೆ ಜವಾಬ್ದಾರಿ ಸುಧಾರಣೆಗೆ ಇ-ಆಡಳಿತ ಸಹಕಾರಿ ಎಂದು ಅವರು ತಿಳಿಸಿದರು.
ಸಮಯ ವಿಳಂಬ ತಗ್ಗಿಸಲು ಕಾವೇರಿ-2 ಜಾರಿ: ಸಬ್ ರೇಜಿಸ್ಟಾರ ಕಛೇರಿಗಳಲ್ಲಿ ನೋಂದಣಿ ಪ್ರಕ್ರಿಯನ್ನು ಸರಳಿಕರಣಗೊಳಿಸು ಕಾವೇರಿ-2 ತಂತ್ರಾಶ ಜಾರಿಗೆ ತಂದಿದ್ದು ಹಿಂದ ಪ್ರತಿ ಅರ್ಜಿ ಸಲ್ಲಿಕೆ ಮೂರು ಗಂಟೆ ತಗಲುವ ಸಮಯ ಇದರಿಂದ 15 ನಿಮಿಷಕ್ಕೆ ಇಳಿಕೆಯಾಗಿದೆ.
ದಾಖಲಾತಿ ಡಿಜಿಟಲಿಕರಣ: ತಾಲ್ಲೂಕ ಹಾಗೂ ಜಿಲ್ಲಾ ಇಲಾಖೆಯಲ್ಲಿರು ಹಳೆಯ ದಾಖಲಾತಿಗಳನ್ನು ಡಿಜಿಟಲಿಕರಣ ಮಾಡುವ ಉದ್ದೇಶವಿದೆ. ರಾಜ್ಯದ ಹಲವು ಕಂದಾಯ ಇಲಾಖೆ ಕಛೇರಿಗಳಲ್ಲಿ ಹಲವು ವರ್ಷದ ದಾಖೆಲೆಗಳಿದ್ದು ಅವು ಹಾಳಾಗುವು ಸ್ಥಿತಿಯಲ್ಲಿವೆ ಆದರಿಂದ ಅವು ಹಾಳಾಗುವ ಮುಂಚೆ ಅವುಗಳ ಡಿಜಿಟಲಿಕರಣ ಕಾರ್ಯ ಮಾಡಿ ಅವುಗಳನ್ನು ಸಂರಕ್ಷಿಸಲಾಗುವುದು. ಅಲ್ಲದೆ, ಇದೇ ಸಂದರ್ಭದಲ್ಲಿ ಜಿಲ್ಲೆಯ ನೈಸರ್ಗಿಕ ವಿಕೋಪ ಪ್ರಕರಣಗಳಲ್ಲಿ ಪರಿಹಾರ ಕೈಗೊಳ್ಳಲು 21.34 ಕೋಟಿ ಅನುದಾನ ಲಭ್ಯವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬೀದರ್ ಜಿಲ್ಲೆ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.
ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ,ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಭೂಮಿಯ ಜಂಟಿ ಸಮಿಕ್ಷೆ ನಡೆಸಿ ಯಾರಾದರು ಒತ್ತುವರಿ ಮಾಡಿದ್ದು ಕಂಡುಬAದಲ್ಲಿ ಅವರ ವಿರುದ್ಧ ಕ್ರಮಕೈಗೊಂಡು ಅದನ್ನು ತೆರವುಗೊಳಿಸಬೇಕು. ಬೀದರ ಜಿಲ್ಲಾ ಆಡಳಿತ ಸಂಕಿರ್ಣ ನೆನೆಗುದ್ದಿಗೆ ಬಿದ್ದಿದ್ದು ಹಿಂದೆ ನಮ್ಮದೆ ಸರ್ಕಾರ ಇದ್ದಾಗ ಇದರ ಚಾಲನೆಗೆ ಆಡಳಿತ ಅನುಮೊದನೆ ನೀಡಲಾಗಿತ್ತು. ಆದರಿಂದ ಕಂದಾಯ ಇಲಾಖೆಯಿಂದ ಲೋಕಪಯೋಗಿಗೆ ನಿರ್ದೇಶನ ನಿಡುವ ಮೂಲಕ ಜಿಲ್ಲಾ ಆಡಳಿತ ಕಟ್ಟಡದ ಶೀಘ್ರ ವಿನ್ಯಾಸ ಸಿದ್ದಪಡಿಸಿ ಕಟ್ಟಡ ಕಾರ್ಯ ಆರಂಭಿಸಬೇಕೆAದು ಕಂದಾಯ ಸಚಿವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಪೌರಾಡಳಿ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್, ವಿಧಾನ ಪರಿಷತ ಸದಸ್ಯರುಗಳಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ್,ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ, ಕಂದಾಯ ವಿಪತ್ತು ನಿರ್ವಹಣೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ, ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ, ಕಲಬುರ್ಗಿ ವಿಭಾಗದ ಪ್ರದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಕಂದಾಯ ಇಲಾಖೆ ಎಲ್ಲಾ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!