ಬೀದರ್

“ಕಂಜಕ್ವಿವೈಟಿಸ್” ಸೋಂಕಿನ ಬಗ್ಗೆ ಮುಂಜಾಗೃತೆ ವಹಿಸಲು ಸಾರ್ವಜನಿಕರಿಲ್ಲಿ ಮನವಿ

ಬೀದರ, ಆಗಸ್ಟ್ 1 :- ಕಳೆದ ವಾರದಿಂದ ಜಿಲ್ಲೆಯಲ್ಲಿ ಉಲ್ಬಣಗೋಂಡಿರುವ “ಕಂಜಕ್ವಿವೈಟಿಸ್” ಸೋಂಕಿನ ಪ್ರಕರಣಗಳು ಬೀದರ ಜಿಲ್ಲೆಯಲ್ಲಿ ಮಾತ್ರವಿಲ್ಲದೆ ಇಡಿ ರಾಜ್ಯದಲ್ಲಿ ಹರಡುವುದು ಕಂಡು ಬಂದಿರುತ್ತದೆ. ಈ ಕಾಯಿಲೆಯು ಏಡಿನೊ ವೈರಸ್ ಎಂಬ ವೈರಾಣುವಿನಿಂದ ಸಾಮಾನ್ಯವಾಗಿ ಹರಡುತ್ತದೆ. ಕೆಲವು ಬಾರಿ ಬ್ಯಾಕಟೇರಿಯಾ ಸೋಂಕಿನಿAದನು ಕುಡಿರುತ್ತದೆ ಈ ಕಾಯಿಲೆಯು ಸಾಮಾನ್ಯವಾಗಿ ಮಳೆಗಾಲದಲ್ಲಿ ಹರಡುತ್ತದೆ. ಈ ಕಾಯಿಲೆಯ ರೋಗಲಕ್ಷಣಗಳು ಕಣ್ಣು ಕೆಂಪಾಗುತ್ತದೆ, ಕಣ್ಣಿನಲ್ಲಿ ನೀರುಬರುತ್ತದೆ, ಕಣ್ಣಿನಲ್ಲಿ ತುರಿಕೆ ಇರುತ್ತದೆ, ಕಣ್ಣಿನಲ್ಲಿ ನೋವು ಹಾಗೂ ತೇಲೆನೋವು ಇರುತ್ತದೆ, ಬೆಳ್ಳಿಗ್ಗೆ ಎದ್ದಾಗ ಕಣ್ಣುಗಳು ಅಂಟಿಕೊಳ್ಳುತ್ತವೆ.
ಈ ರೋಗವು ಸಾಂಕ್ರಾಮಿಕವಾಗಿದ್ದು, ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೂ ಹರಡುವುದು ಸಹಜ, ಆದಕಾರಣ ವೈಯಕ್ತಿಕ ಸುಚಿತ್ವ ಕಾಪಾಡಿಕೊಳ್ಳುವುದು ಅವಶ್ಯಕ ಇರುತ್ತದೆ. ಸಾಮಾನ್ಯವಾಗಿ ಶಾಲಾ ಕಾಲೇಜು ಮಕ್ಕಳಿಗೆ ಹರಡುವುದು ಕಂಡುಬAದಿರುತ್ತದೆ. ಕಳೆದ ವಾರದಿಂದ ಸುಮಾರು 950 ಜನರಿಗೆ ಈ ಸೋಂಕು ಕಾಣಿಸಿಕೊಂಡಿರುತ್ತದೆ, ಅಂದರೆ ನಮ್ಮ ಸಂಸ್ಥೆಗಳಲ್ಲಿ ಬರುವ ಕಣ್ಣಿನ ಹೋರ ರೋಗಿಗಳ ಶೇಕಡ 20% ಜನರಿಗೆ ಈ ಸೋಂಕುನ ಕಾಣಿಸಿಕೊಂಡಿರುತ್ತದೆ. ಈಗಾಗಲೇ ಈ ಸೋಂಕಿನ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಾಗೃತಿ ವಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರವಾರು, ತಾಲೂಕವಾರು ಹಾಗೂ ಜಿಲ್ಲಾವಾರು ಆರೋಗ್ಯ ಸಿಬ್ಬಂದಿಗಳಿಗೆ ಈ ಸೋಂಕಿನ ಕುರಿತು ಸಭೆಯನ್ನು ಮಾಡಿ ಮುಂಜಾಗೃತ ಕ್ರಮ ವಹಿಸಲು ಸೂಚಿಸಲಾಗಿದೆ ಹಾಗೂ ನಮ್ಮ ತಾಲೂಕವಾರು ಆರ್.ಬಿ.ಎಸ್.ಕೆ ತಂಡ ಶಾಲೆಗಳಲ್ಲಿ ಕಣ್ಣಿನ ತಪಾಸಣೆ ಹಾಗೂ ಮುಂಜಾಗೃತ ಕ್ರಮ ವಹಿಸುವ ಬಗ್ಗೆ ಕ್ರಮಕೈಗೊಳ್ಳುತಿದ್ದಾರೆ.
ಪ್ರಯುಕ್ತ ಸಾರ್ವಜನಿಕರು ಈ ಸೋಂಕಿನ ಬಗ್ಗೆ ಭಯಪಡದೆ, ನಮ್ಮ ಇಲಾಖೆಯವರು ಸೂಚಿಸಿರುವ ಮುಂಜಾಗೃತ ಕ್ರಮಗಳನ್ನು ವಹಿಸಲು ಸೂಚಿಸಲಾಗಿದೆ ಹಾಗೂ ಯಾರಿಗಾದರೂ ರೋಗ ಲಕ್ಷಣಗಳು ಕಂಡುಬAದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕ ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!