ಬೀದರ್

ಔರಾದ ತಸಿಲ್ದಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪ್ರಭು ಚವ್ಹಾಣ

 

 

 

ಬೀದರನ ಔರಾದ ತಸಿಲ್ದಾರ ಕಚೇರಿಯಲ್ಲಿ ಅತಿರೆಕ್ಕೆರಿದ ಭ್ರಷ್ಟಾಚಾರ ವಿಚಾರ ತಿಳಿದಂತೆ ಬೆಟ್ಟಿನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಪ್ರಭು ಚವ್ಹಾಣ
ಬೀದರ ಜಿಲ್ಲೆಯ ಔರಾದ ತಾಲೂಕಿನ ತಸಿಲ್ದಾರ ಕಚೇರಿಯಲ್ಲಿ ದಲ್ಲಾಳಿಗಳೆ ಗುಮಾಸ್ತರಾಗಿ ಕಾರ್ಯ ನಿರ್ವಹಿಸುವುದು ಇಲ್ಲಿ ಏನೆ ಕಾರ್ಯಗಳಾಗಬೇಕಾದರೆ ಗುಮಾಸ್ತರಿಗೆ ಬದಲಾಗಿ ದಲ್ಲಾಳಿಗಳಿಗೆ ಬೆಟ್ಟಿ ಆಗಬೇಕು ಅಲ್ಲಿ ಗುಮಾಸ್ತ ಕುರ್ಚಿಯಲ್ಲಿ ಇರುವುದು ದಲ್ಲಾಳಿಗಳೆ ಹೋರತು ಯಾವ ಗುಮಾಸ್ತ ಕಾಣುವುದಿಲ್ಲ ಅವರು ಎನಿದರು ಸಂಬಳ ಪಡೆಯುವದಕ್ಕೆ ಮಾತ್ರ ಸಿಮಿತ ಎಂಬಂತಾಗಿದೆ ಇದರದ ಬೇಸತ್ತ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ದಲ್ಲಾಳಿಗಳು ಹಣ ಪಡೆದು ನೇರವಾಗಿ ಭ್ರಷ್ಟ ಅಧಿಕಾರಿಗಳಿಂದ ಸಹಿ ಪಡೆದು ವಿವಾಹ ನೊಂದಣಿ ಪ್ರಮಾಣ ಪತ್ರ ನೀಡುತಿರುವುದನ್ನು ಸರೆ ಹಿಡಿದು ಶಾಸಕರ ಗಮನಕ್ಕೆ ತಂದಾಗ ಶಾಸಕರಾದ ಪ್ರಭು ಚವ್ಹಾಣ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗದು ಕೊಂಡು ದೂರವಾಣಿ ಮೂಲಕ ಮೇಲ್ ಅಧಿಕಾರಿ ಗಳೊಂದಿಗೆ ಮಾತನಾಡಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳನ್ನು ಕೂಡಲೆ ಅಮಾನಾತು ಮಾಡುವಂತೆ ಹೇಳಿ ಕಚೇರಿಯ ಆವರಣದಲ್ಲಿ ಕಸದ ರಾಶಿನೋಡಿ ತಸಿಲ್ದಾರರನ್ನು ರೇಗಿದ ಶಾಸಕರು ಕೂಡಲೆ ತೆರವು ಗೊಳಿಸುವಂತೆ ತಿಳಿಸಿದಾಗ ತಸಿಲ್ದಾರರು ಹತ್ತು ದಿನಗಳಲ್ಲಿ ಕಚೇರಿಯಲ್ಲಿ ಎಲ್ಲಾ ಅನ್ಯೂನ್ನಯತೆಗಳನ್ನು ಸರಿಪಡಿಸುವುದಾಗಿ ಕೇಳಿಕೊಂಡಾಗ ಮಾದ್ಯಮದವರೊಂದಿಗೆ ಮಾತನಾಡಿ ಬರುವ ಹತ್ತು ದಿನಗಳು ತಸಿಲ್ದಾರರದು ಹನ್ನೊಂದನೆ ದಿನ ನನ್ನದು ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ಖಡಕ ಎಚ್ಚರಿಕೆಯನ್ನು ನೀಡಿದ ಪ್ರಭು ಚವ್ಹಾಣ
ಹತ್ತು ದಿನಗಳಲ್ಲಿ ಅಧಿಕಾರಿಗಳು ತಮ್ಮ ತಪ್ಪುಗಳನ್ನು ಸರಿ ಪಡಿಸಿಕೊಂಡು ಕಚೇರಿ ಆವರ್ಣವನ್ನು ಸ್ವಚ್ಚ ವಾಗಿ ಇಟ್ಟು ಕೊಂಡು ತಾಲೂಕಿನ ಜನತೆಗೆ ನ್ಯಾಯಯುತವಾಗಿ ಯಾವುದೆ ಭ್ರಷ್ಟಾಚಾರ ಇಲ್ಲದೆ ಕಾರ್ಯನಿರವಹಿಸುವಲ್ಲಿ ವಿಫಲ ವಾದಾಗ ಶಾಸಕರು ಹೇಳಿದಂತೆ ಹನೊಂದನೆ ದಿನ ದಂದು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗುವರೋ ಅಥವಾ ಇಲ್ಲವೋ ಕಾದು ನೋಡಬೇಕು

Ghantepatrike kannada daily news Paper

Leave a Reply

error: Content is protected !!