ಔರಾದ್ ಪಟ್ಟಣ ಪಂಚಾಯತ್ ಅಧ್ಯಕ್ಷ, ಹಾಗೂ ಉಪಾಧ್ಯಕ್ಷ ಚುನಾವಣೆಯ ಗದ್ದುಗೆ ಏರಲು ಕಾಂಗ್ರೆಸ್ ಕಸರತ್ತು.
ಬೀದರ್ : ಜಿಲ್ಲೆ ಔರಾದ ಪಟ್ಟಣದ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸೆಪ್ಟೆಂಬರ್ 6ನೇ ತಾರೀಕು ದಿನಾಂಕ ನಿಗದಿಗೊಂಡಿದೆ. ಒಟ್ಟು 20 ಸದಸ್ಯರ ಸಂಖ್ಯೆ ಬಲ ಹೊಂದಿದ ಪಟ್ಟಣ ಪಂಚಾಯಿತಿಯಲ್ಲಿ 12 ಬಿಜೆಪಿ ಆರು ಕಾಂಗ್ರೆಸ್ ಎರಡು ಪಕ್ಷೇತರ ಅಭ್ಯರ್ಥಿಗಳು ಚುನಾಯಿತಗೊಂಡಿದ್ದಾರೆ.
ಇದರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತಗೊಂಡ ಮೂರು ಜನ ಸದಸ್ಯರು ಬಿಜೆಪಿ ಪಕ್ಷ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಆರು ಜನರ ಪೈಕಿ ಇನ್ನುಳಿದ ಮೂರು ಜನ ಕಾಂಗ್ರೆಸ್ ಪಕ್ಷದಲ್ಲಿ ಉಳಿದು ಪಕ್ಷ ಸಿದ್ದಾಂತದAತೆ ಕಾರ್ಯನಿರ್ವಹಿಸುತ್ತಿದ್ದಾರೆ.ಆದರೂ ಕೂಡ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ಪಕ್ಷದಲ್ಲಿರುವ ಸದಸ್ಯರನ್ನು ಸೆಳೆಯಲು ತೆರೆಮರೆಕಸರತ್ತು ನಡೆಸಿದ್ದಾರೆ.
ಈಗಾಗಲೇ ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ಯುವ ಮುಖಂಡ ಸುಧಾಕರ್ ಕೊಳ್ಳುರ ತಿಳಿಸಿದ್ದಾರೆ.
ಪಕ್ಷಕ್ಕೆ ದ್ರೋಹ ಬಗೆದು ಪಕ್ಷ ತೊರೆದು ಹೋದ ನರೋಟೆ ಪರಿವಾರಕ್ಕೆ ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ನೀಡಲು ತಯಾರಿ ನಡೆಸಿದೆ. ನರೋಟೆ ಅವರು ಕಾಂಗ್ರೆಸ್ ಪಕ್ಷದ ಚಿನ್ನೆ ಅಡಿ ಗೆದ್ದು ಪಕ್ಷಕ್ಕೆ ದ್ರೋಹ ಬಗೆದಿದ್ದು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ , ಈಗಾಗಲೇ ದೊಂಡಿಬಾ ನರೋಟೆ, ರಾಧಾಬಾಯಿ ನರೋಟೆ, ಗುಂಡಪ್ಪ ಮುದ್ದಾಳೆ ಅವರು ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಕೂಡ ಹೋಗಲಾಗಿದೆ .ಆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಾ ಇದೆ.
ಇವರುಗಳಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಎಲ್ಲಾ ರೀತಿ ತಯಾರಿ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಬಗೆದವರನ್ನು ಈ ಚುನಾವಣೆಯಲ್ಲಿ ಉತ್ತರ ನೀಡಲು ತಯಾರಿ ನಡೆಸಿದೆ. ಎಂದು ಪಕ್ಷದ ಯುವ ಮುಖಂಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಸಂಚಾಲಕ ಸುಧಾಕರ ಕೊಳ್ಳುರ ರವರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.