ಒಬ್ಬರಿಗೆ ಸಾಧ್ಯವಾದದ್ದು ಎಲ್ಲರಿಗೂ ಸಾಧ್ಯವಾಗುತ್ತದೆ – ಗೋವಿಂದರೆಡ್ಡಿ ಜಿಲ್ಲಾಧಿಕಾರಿ
ಐಎಎಸ್, ಐಪಿಎಸ್ ಮೊದಲಾದ ಉನ್ನತ ಹುದ್ದೆಗಳು ಒಬ್ಬರಿಗೆ ಸಾಧ್ಯವಾಗುವುದಾದರೆ, ಎಲ್ಲರಿಗೂ ಸಾಧ್ಯವಾಗುತ್ತದೆ. ಆದರೆ ಅದಕ್ಕೆ ತಕ್ಕ ಓದು ಹಾಗೂ ಪರಿಶ್ರಮ ಅಗತ್ಯವೆಂದು ಬೀದರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರಾಶಿ ಸಂಸ್ಥೆಯ ಕರ್ನಾಟಕ ಪದವಿ ಪೂರ್ವ ಕಾಲೇಜು ಆಯೋಜಿಸಿದ ಭಾರತ ಸ್ವತಂತ್ರ್ಯದ 75ನೆಯ ವರ್ಷದ ಆಜಾದಿಯ ಅಮೃತ ಮಹೋತ್ಸವದ ನಿಮಿತ್ತ ಮನೆಮನೆಗೂ ರಾಷ್ಟ್ರಧ್ವಜ ಕಾರ್ಯಕ್ರಮದ ಭಾಗವಾಗಿ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಸ್ವಾತಂತ್ರ್ಯವೆಂಬುವುದು ಬರಿ ಪದವಲ್ಲ ನಮ್ಮ ಪೂರ್ವಜರ ತ್ಯಾಗ ಬಲಿದಾನದ ಸಂಕೇತವಾಗಿದೆ ಸಾವಿರಾರು ಜನರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದಕ್ಕಿದ್ದು ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದರಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿಯವರು ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ ವಿತರಿಸುತ್ತಿರುವುದು ಅಭಿಮಾನ, ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ಮುಗಿವವರೆಗೆ ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ದೇಶಪ್ರೇಮ ಮೆರೆಯಬೇಕೆಂದು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೀದರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಡಾ. ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡುತ್ತ ಇಡಿ ಜಗತ್ತಿನಲ್ಲಿ ಸತ್ಯ ಮತ್ತು ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ಏಕೈಕ ರಾಷ್ಟ್ರ ಭಾರತವಾಗಿದೆ. ಆ ಕಾರಣಕ್ಕಾಗಿಯೇ ಇಲ್ಲಿ ಸ್ವಾತಂತ್ರ್ಯದ 75ನೆಯ ವರ್ಷದ ಅಮೃತ ಮಹೋತ್ಸವ ಆಚರಿಸಲು ಸಾಧ್ಯವಾಗುತ್ತಿದೆ. ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಪಡೆಯುತ್ತಲೆ ಒಳಜಗಳಾಗಿ ವಿಘನೆಯಾಗಿವೆ. ನಮ್ಮಲ್ಲಿ ಇವತ್ತಿಗೂ ಸೌಹಾರ್ದತೆ ಹಾಗೂ ಭಾವೈಕ್ಯತೆಯಿಂದ ಜೀವನ ನಡೆಸುತ್ತಿವ ಕಾರಣ ನಾವು ಜಗತ್ತಿಗೆ ಗುರುವೆನಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಮಕ್ಕಳ ವಿಷಯವಾಗಿ ಹೇಳುವುದಾದರೆ ಉತ್ಕøಷ್ಟ ಜೀವನವೆಂದರೆ ಅದು ವಿದ್ಯಾರ್ಥಿ ಜೀವನ ನೀವೆ ಭವ್ಯ ಭಾರತದ ಭವಿಷ್ಯ ಆದ್ದರಿಂದ ಸಹನೆ ಹಾಗೂ ಸುರಕ್ಷತೆ ಅಗತ್ಯವೆಂದು ಹೇಳಿದರು.
ಪಾಟೀಲ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಜಿ. ಶೆಟಕಾರ, ಕಾರ್ಯದರ್ಶಿಗಳಾದ ಸಿದ್ರಾಮ ಪಾರಾ ಆಡಳಿತ ಮಂಡಳಿ ಸದಸ್ಯರಾದ ವೀರಭದ್ರಪ್ಪ ಬುಯ್ಯ, ಸಿದ್ರಾಜ ಪಾಟೀಲ ಭಾಗವಹಿಸಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ದೇಶಭಕ್ತಿ, ರಾಷ್ಟ್ರ ಪ್ರೇಮ ನಮ್ಮ ಜೀವನದ ಮೊದಲ ಆದ್ಯತೆಗಳಾಗಬೇಕು ಎಂದು ನುಡಿದರು.
ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದರು.
ಕರ್ನಾಟಕ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಸ್ವಾಗತಿಸಿದರೆ, ಶಿವಕುಮಾರ ಕಟ್ಟೆ ವಂದಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು.
“ಪ್ರತಿ ನಿತ್ಯ ನಡೆಯುವ ರಸ್ತೆ ಅಪಘಾತದ ಬಗ್ಗೆ ಮನವರಿಕೆ ಮಾಡಿ ದ್ವಿಚಕ್ರ ವಾನಕ್ಕೆ ಕಡ್ಡಾಯ ಹೆಲ್ಮೆಟ್, ಹಾಗೂ ನಾಲ್ಕುಚಕ್ರ ವಾನಕ್ಕೆ ಕಡ್ಡಾಯ ಸೀಟ್‍ಬೆಲ್ಟ ಧರಿಸುವಂತೆ ಪಾಲಕರಿಗೆ ಹೇಳಲು ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಡಾ. ಚನ್ನಬಸವಣ್ಣ ಎಸ್.ಎಲ್ ತಾಕೀತು”