ಬೀದರ್

ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಶಿಬಿರ

ಬೀದರ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಬೀದರ ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬೀದರ, ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ, ಬೀದರ ಮತ್ತು ಸಹಕಾರ ಇಲಾಖೆ, ಬೀದರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾಲ್ಕಿ ತಾಲೂಕಿನಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಶಿಬಿರವನ್ನು ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ, ಬೀದರನಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗುರುನಾಥಪ್ಪ ಎಖ್ಖೆಳ್ಳಿ ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ ನಿ., ಬೀದರ ಇವರು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಜಿಲ್ಲಾ ಸಹಕಾರ ಯೂನಿಯನ್ ತರಬೇತಿಗಳನ್ನು ನೀಡುತ್ತಾ ಬಂದಿದೆ. ಅದೇ ರೀತಿ ಇವತ್ತು ಸಹ ಸಂಘಗಳಲ್ಲಿ ಚುನಾವಣೆ ನಡೆಯುವುದರಿಂದ ಚುನಾವಣೆಯ ವಿಧಿ ವಿಧಾನಗಳನ್ನು ಕುರಿತು ಈ ತರಬೇತಿಯಲ್ಲಿ ಉಪನ್ಯಾಸ ನೀಡುತ್ತಾರೆ. ಈ ತರಬೇತಿಯ ಸದುಪಯೋಗ ಪಡೆದುಕೊಂಡು ಮುಂದೆ ಬರುವ ಚುನಾವಣೆಗೆ ಸಂಬಂಧಿಸಿದ ಕೆಲಸಗಳನ್ನು ಸರಿಯಾಗಿ ಮಾಡಿಕೊಂಡು ಹೋಗಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯತಿಥಿಗಳಾದ ಶ್ರೀ ಪ್ರಭುಸುಬ್ರಮಣ್ಯ ನಿರ್ದೇಶಕರು, ಸಹಾರ್ದ ತರಬೇತಿ ಕೇಂದ್ರ ಡಿ.ಸಿ.ಸಿ ಬ್ಯಾಂಕ್ ನೌಬಾದ, ಬೀದರ ಇವರು ಮಾತನಡುತ್ತಾ ಸರಕಾರವು ಸಹಕಾರ ಕ್ಷೇತ್ರಕ್ಕೆ ತುಂಬಾ ಸಹಾಯ ಮಾಡುತ್ತಿದೆ. ಇಂತಹ ತರಬೇತಿಗಳಿಂದ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು..

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಪರಮೇಶ್ವರ ಮುಗಟೆ ಅಧ್ಯಕ್ಷರು, ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ಇವರು ಮಾತನಾಡುತ್ತಾ ನಮ್ಮ ಯೂನಿಯನ್ನಿನ ಮೂಲ ಉದ್ದೇಶ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರ ಮಾಡುವುದಾಗಿದೆ. ನಮ್ಮ ಯೂನಿಯನ್ ವತಿಯಿಂದ ಚುನಾವಣೆಗೆ ಸಂಬಂಧಿಸಿದ ವಿಧಿ ವಿಧಾನಗಳು ಕುರಿತು ಸದರಿ ತರಬೇತಿಯಲ್ಲಿ ತಿಳಿಸಲಿದ್ದಾರೆ. ಅದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮಲ್ಲಿನಾಥ ಮಠಪತಿ, ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ, ನಿರ್ದೇಶಕರಾದ ಶ್ರೀ ಸುಬ್ರಮಣ್ಯ ಪ್ರಭು, ಸಹಾರ್ದ ತರಬೇತಿ ಕೇಂದ್ರ, ಡಿ.ಸಿ.ಸಿ ಬ್ಯಾಂಕ್ ನೌಬಾದ ಉಪನ್ಯಾಸಕರಾದ ಶ್ರೀ ಮಂಜುನಾಥ ಭಾಗವತ, ನಿವೃತ್ತ ಅಪರನಿಬಂಧಕರಾದ ಶ್ರೀ ಎಚ್.ಎಸ್. ನಾಗರಾಜಯ್ಯ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ಯೂನಿಯನ್ನಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. “ ಸಹಕಾರ ಸಂಘಗಳಲ್ಲಿ ಜರುಗಿಸುವ ಚುನಾವಣೆಯ ವಿಧಿವಿಧಾನಗಳು ಕುರಿತು”, “ ಸಹಕಾರ ಸಂಘಗಳಲ್ಲಿ ದಾವಾ ಪಂಚಾಯಿತಿ, ಅಮಲ್ಜಾರಿ ಮತ್ತು ಸಹಕಾರ ಸಂಘಗಳ ಸಮಾಪನ ಪ್ರಕ್ರಿಯೆ ಕುರಿತು” ಮತ್ತು “ ಸಹಕಾರ ಸಂಘಗಳ ಇತ್ತೀಚಿನ ಕಾಯ್ದೆ ತಿದ್ದುಪಡಿ ಅಂಶಗಳು ಕುರಿತು” ಉಪನ್ಯಾಸ ನೀಡಿದರು.

ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಹೆಚ್. ಆರ್. ಮಲ್ಲಮ್ಮ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ನಡೆಸಿಕೊಟ್ಟರೆ, ಶ್ರೀ ಮಾರುತಿ ಜಿಲ್ಲಾ ಸಹಕಾರ ಶಿಕ್ಷಕರು ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ಇವರು ವಂದನಾರ್ಪಣೆ ಮಾಡಿದರು.

Ghantepatrike kannada daily news Paper

Leave a Reply

error: Content is protected !!