ಐ ನ ಟಿ ಯು ವಾಯ್ ಸಿ ಯುವ ಘಟಕ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದೇವದಾಸ ಚಿಂತಲಗೇರಾ ನೇಮಕ.
ಬೀದರ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು ಹಾಗು ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ ಮತ್ತು ಗ್ರಾಮೀಣಾಭಿರುದ್ಧಿ ಹಾಗು ಪಂಚಾಯತ ರಾಜ ಸಚಿವರಾದ ಪ್ರಿಯಾಂಕ ಖರ್ಗೆ, ಮಾಜಿ ಸಚಿವರಾದ ಹೆಚ್. ಆಂಜನೇಯ ಐ ನ ಟಿ ಯು ವಾಯ್ ಸಿ ರಾಜ್ಯಾಧ್ಯಕ್ಷರಾದ ಲಕ್ಷ್ಮಿ ವೆಂಕಟೇಶ ಅವರ ಹಾಗು ಮಾಜಿ ಶಾಸಕರಾದ ಅಶೋಕ ಖೇಣಿ ಅವರ ಆದೇಶ ಮೇರೆಗೆ ಇಂಡಿಯನ ನ್ಯಾಷನಲ ಟ್ರೇಡ ಯೂನಿಯನ ಯುಥ ಕಾಂಗ್ರೆಸ (ಐ ನ ಟಿ ಯು ವಾಯ್ ಸಿ )ಯುವ ಘಟಕ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲೆಯ ದೇವದಾಸ ಚಿಂತಲಗೇರಾ ಇವರನ್ನು ಐ ನ ಟಿ ಯು ವಾಯ್ ಸಿ ರಾಜ್ಯ ಯುವ ಘಟಕ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಾ. ಕುಮಾರ ಟಿ. ವೈ. ರವರು ನೇಮಕ ಮಾಡಿ ಆದೇಶ ಹೋರಡಿಸಿರುತ್ತಾರೆ.
ದೇವದಾಸ ಇವರು ಎಂ. ಟೆಕ್. ಪದವಿದರರಾಗಿದು, ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ತೆಲಂಗಾಣ ವಿಧಾನ ಸಭೆ ಚುನಾವಣೆಯಲ್ಲಿ ಕೂಡ ಪಕ್ಷದ ಪರ ಕೆಲಸ ಮಾಡಿರುತ್ತಾರೆ. ಬಿಹಾರ, ಪಶ್ಚಿಮ ಬಂಗಾಳ, ಹಾಗು ರಾಜ್ಯದ ಬೀದರ, ಕಲಬುರ್ಗಿ, ಚಿತ್ರದುರ್ಗಾ, ಬಾಗಲಕೋಟ, ವಿಜಯಪುರ ಲೋಕ ಸಭೆ ಚುನಾವಣೆಯಲ್ಲಿ ಪಕ್ಷದ ಆದೇಶದಂತೆ ಪ್ರಚಾರ ಕಾರ್ಯದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿರುತ್ತಾರೆ. ಹಾಗು ಕೋವಿಡ -19 ಮಹಾ ಮಾರಿ ಸಮಯದಲ್ಲಿ ಎಲ್ಲಾ ವರ್ಗದ ಬಡವರಿಗೆ ಉಚಿತ ಆಹಾರ ವಿತರಣೆ ಮತ್ತು ಉಚಿತ ವೈದ್ಯಕೀಯ ಉಪಚಾರ ಮಾಡಿರುತ್ತಾರೆ. ತಮ್ಮ ಸಂಸ್ಥೆ ವತಿಯಿಂದ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುತ್ತಿದಾರೆ. ವಿವಿಧ ಸಂಘಟನೆಗಳ ಮೂಲಕ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ ಇವರು ಕಾಂಗ್ರೆಸನ ಹಿರಿಯ ಮಹಿಳಾ ಮುಖಾಂಡರಾದ ಸ್ವ. ಸುಂದ್ರಮ್ಮ ಚಿಂತಲಗೇರಾ ಇವರ ಮಗನಾಗಿದ್ದಾರೆ.