ಎಸ್.ಬಿ. ಪಾಟೀಲ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಡಿಜಿಟಲ್ ಸ್ಮೈಲ್ ಡಿಸೈನ್ ಕುರಿತು ಒಂದು ಅಧ್ಯಯನ
ಬೀದರ: ಡಿಜಿಟಲ್ ಸ್ಮೈಲ್ ಡಿಸೈನ್ ದಂತಚಿಕಿತ್ಸಾ ಕ್ಷೇತ್ರದಲ್ಲಿ ಬಹಳ ಮುಖ್ಯವಾದ ತಂತ್ರಜ್ಞಾನವಾಗಿದೆ. ಇದು ರೋಗಿಯ ನಗುವನ್ನು ಪೂರ್ವನಿಯೋಜಿತವಾಗಿ ಡಿಜಿಟಲ್ ಮಾಧ್ಯಮದಲ್ಲಿ ವಿನ್ಯಾಸಗೊಳಿಸುವ ವಿಧಾನವಾಗಿದೆ. ಈ ತಂತ್ರಜ್ಞಾನವು ದಂತ ವೈದ್ಯರನ್ನು ರೋಗಿಯ ನಗುವಿನ ಬದಲಾವಣೆಯನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಲು ಸಹಕಾರಿಯಾಗಿದೆ ಎಂದು ಡಾ. ಸಂತೋμï ದೊಡ್ಡಮಾಣಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಎಸ್.ಬಿ. ಪಾಟೀಲ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಶೈಲೇಂದ್ರ ಅವರು ಡಿಜಿಟಲ್ ಸ್ಮೈಲ್ ಡಿಸೈನ್ ಕುರಿತು ಸಿಡಿಇ ವಕ್ರ್ಶಾಪ್ ದಂತಚಿಕಿತ್ಸಾ ಕ್ಷೇತ್ರದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದು ದಂತ ವೈದ್ಯರಿಗೆ ವಿನೂತನ ತಂತ್ರಜ್ಞಾನವನ್ನು ಕಲಿಸುವ ಮೂಲಕ ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಗಾರವು ದಂತ ವೈದ್ಯರಿಗೆ ಡಿಜಿಟಲ್ ಸ್ಮೈಲ್ ಡಿಸೈನ್ ತಂತ್ರಜ್ಞಾನವನ್ನು ಕಲಿಸಲು ಉದ್ದೇಶಿತವಾಗಿದೆ. ಇದರಿಂದ ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಲು ಮತ್ತು ತಮ್ಮ ವೃತ್ತಿ ಕ್ಷೇತ್ರದಲ್ಲಿ ಮತ್ತಷ್ಟು ಪರಿಣಿತಿಗಳಿಸಲು ಸಹಕಾರಿಯಾಗಿದೆ. ಈ ಕಾರ್ಯಾಗಾರದಲ್ಲಿ ತಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳುವರು. ಅವರ ಮಾರ್ಗದರ್ಶನದಲ್ಲಿ ಕಾರ್ಯಾಗಾರವು ಅತ್ಯಂತ ಫಲಪ್ರದಾಯವಾಗುತ್ತದೆ. ಈ ಕಾರ್ಯಾಗಾರದಲ್ಲಿ ಪ್ರಶ್ನೋತ್ತರ ಸೂತ್ರಗಳು ಕೂಡ ಜರುಗುತ್ತವೆ. ಇದರಲ್ಲಿ ಭಾಗವಹಿಸುವವರು ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹದು ಮತ್ತು ತಂತ್ರಜ್ಞಾನ ಕುರಿತು ಮತ್ತಷ್ಟು ತಿಳಿಯಬಹುದು. ಈ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಲಿದೆ. ಈ ತಂತ್ರಜ್ಞಾನವು ದಂತ ವೈದ್ಯರಿಗೆ ಮುಂಬರುವ ಚಿಕಿತ್ಸೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಮೂಲಕ ಅವರ ವೃತ್ತಿ ಕ್ಷೇತ್ರವನ್ನು ಮತ್ತಷ್ಟು ಬೆಳೆಯುವಲ್ಲಿ ಸಹಕಾರಿಯಾಗಲಿದೆ. ಈ ಸಂಧರ್ಭದಲ್ಲಿ ಡಾ. ಪುಟ್ಟರಾಜ, ಡಾ. ಚಂದ್ರಶೇಖರ ಪಾಟೀಲ, ಡಾ. ಶರತಚಂದ್ರ, ಡಾ. ಸವಿತಾ, ಡಾ. ನಂದಿನಿ, ಡಾ. ಕಪೀಲ ಪಾಟೀಲ, ಡಾ. ಆರತಿ, ವಿದ್ಯಾರ್ಥಿಗಳು & ಸಿಬ್ಬಂದಿ ವರ್ಗದವರು ಹಾಜರಿದ್ದರು.