ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ : ಕೈರೋನ್ ಕ್ಯಾನ್ಸರ್ ಸೆಂಟರ್
ಬೀದರನಲ್ಲಿಯೂ ಕ್ಯಾನ್ಸರ್‌ಗೆ ಸಂಬAಧಿಸಿದ ಎಲ್ಲಾ ಕಾಯಿಲೆಗಳಿಗೆ ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೆ ಅತಿಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಕೈರೋನ್ ಕ್ಯಾನ್ಸರ್ ಸೆಂಟರ್ ಸ್ಥಾಪಿಸಲಾಗಿದೆ,ಬೀದರನಲ್ಲಿ ಮೊದಲ ಮೀಸಲಾದ ಕ್ಯಾನ್ಸರ್ ನಿವಾರಣೆಯ ಕೇಂದ್ರವನ್ನು ಸ್ಥಾಪಿಸುವುದರ ಮೂಲ ಉದ್ದೇಶ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆನೀಡುವ ಮೂಲಕ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದು,ಅತಿ ಮುಖ್ಯವಾಗಿ ಆಸ್ಪತ್ರೆಗೆ ತಪಾಸಣೆಗೆಂದು ಬಂದ ಜನರಿಗೆ ಮೊದಲು ಕೌನ್ಸಿಲ್ ಮಾಡಿ ಅವರಿಗಿರುವ ಕಾಯಿಲೆ ಬಗ್ಗೆ ತಿಳಿಹೇಳಿ ಯಾವರೀತಿ ಅದನ್ನು ಪ್ರಾಥಮಿಕ ಹಂತದಲ್ಲಿ ನಿವಾರಣೆ ಮಾಡಬೇಕು ಎನುವ ಬಗ್ಗೆ ಮನವರಿಕೆ ಮಾಡುವುದು ಈ ಕೈರಾನ್ ಕ್ಯಾನ್ಸರ್ ಸೆಂಟರ್ ಉದ್ದೇಶವಾಗಿದೆ ಎಂದು ಡಾ.ಹರೀಶ ಕಕನಾಳೆ ಹಾಗೂ ಡಾ.ಅರುಣ ಶೇಖರ ಅವರು ಮಾತನಾಡಿ ಮಾಹಿತಿ ನೀಡಿದರು ಬೀದರನ ಖಾಸಗಿ ಹೊಟೆಲ್‌ನಲ್ಲಿ ಕೂರೋನ್ ಕ್ಯಾನ್ಸರ್ ಸೆಂಟರ್‌ನ ನುರಿತ ತಜ್ಞರ ತಂಡದ ನೇತೃತ್ವದಲ್ಲಿ ವೈದ್ಯರಿಗಾಗಿ ಕ್ಯಾನ್ಸರ್ ರೋಗಗಳು ಹಾಗೂ ಪರಿಣಾಮಕಾರಿಯಾಗಿ ಯಾವ ರೀತಿ ತಡೆಗಟ್ಟಬೇಕು ಎನ್ನುವ ಬಗ್ಗೆ ಅರಿವು ಜಾಗ್ರತಿ ಮೂಡಿಸುವ ಕಾರ್ಯಗಾರ ಹಮ್ಮಿಕೊಳ್ಳಲಾಯಿತು
ಕೈರೋನ್ ಕ್ಯಾನ್ಸರ್ ಚೆಂಟರ್ ತಮ್ಮದೆ ಆದ ನುರಿತ ತಜ್ಞರ ತಂಡ ೨೪ ತಾಸುಗಳ ಲಭ್ಯವಿರಲಿದ್ದು ಮೊದಲಿಗೆ ರೋಗಿಗಳನ್ನು ಬೇರು ಮಟ್ಟದಿಂದ ತಪಾಸಣೆ ಮಾಡುತ್ತೆವೆ ಚಿಕಿತ್ಸೆ ನೀಡುತ್ತೆವೆ,ಕ್ಯಾನ್ಸರ್ ಎನ್ನುವಂತಹದ್ದು ಮಾರಣಿಂತಿಕ ದೊಡ್ಡ ಕಾಯಿಲೆ ಎನ್ನುವ ಮನೋಭಾವ ಎಲ್ಲರಲ್ಲಿ ಇದೆ ಆದರೆ ಸಕಲಾಕ್ಕೆ ನಮಗೆ ಕಾಯಿಲೆ ಬಗ್ಗೆ ಅರಿವಾದಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಿದ್ದಲ್ಲಿ ರೋಗ ಗುಣಮುಖವಾಗಬಹುದು ಹಾಗಾಗಿ ಮೊದಲು ಕಾಯಿಲೆ ಬಗ್ಗೆ ಜಾಗೃತಿ ಅರಿವು ಮೂಡಿಸುವುದು ಹಲವಾರು ರೀತಿಯ ಕ್ಯಾನ್ಸರ್ ತಡೆಗಟ್ಟುವಿಕೆಗೆ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಗ್ರಾಮ ಗ್ರಾಮಗಳಿಗೆ ತೆರಳಿ ಕ್ಯಾಂಪ ಆರೋಗ್ಯ ತಪಾಸಣಾ ಶಿಬಿರ ಮೂಲಕ ಅರಿವು ಮೂಡಿಸಲಾಗುವುದು ಎಂದರುಮೊದಲೆಲ್ಲ ಕ್ಯಾನ್ಸರ್ ಸಂಬAಧಿಸಿದ ಕಾಯಿಲೆಗಳ ಚಿಕಿತ್ಸೆಗೆ ದೂರದ ಬೆಂಗಳೂರು,ಹೈದ್ರಬಾದ,ಸೋಲಾಪುರ ಹೀಗೆ ಬೇರೆ ನೆರೆ ರಾಜ್ಯಗಳಿಗೆ ಹೊಗುವ ಪರಿಸ್ಥತಿ ಇತ್ತು ಒಂದು ಸಮಯ ಇನ್ನೊಂದು ದುಡ್ಡು ಕೂಡ ವ್ಯಯ ಖರ್ಚು ಆಗುವ ಪರಿಸ್ಥಿತಿಯನ್ನು ನಮ್ಮ ಬೀದರ ನಗರವಾಸಿಗರು ಎದುರಿಸಬೇಕಾಗಿತ್ತು ಆದರೆ ಅಂಡರ್ ಒನ್ ರೂಫ್ ಅಂದರೆ ಒಂದೆ ಸೂರಿನಡಿಯಲ್ಲಿ ಇಲ್ಲಿಯ ಜನರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಕಡಿಮೆ ದರದಲ್ಲಿ ಅಸಂಖ್ಯಾತ ವ್ಯಕ್ತಿಗಳ ಜೀವನದ ಮೇಲೆ ಸಕಾರಾತ್ಮಕ ಮನೋಭಾವನೆಯೊಂದಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ನಮ್ಮ ತಂಡ ಮುಂದೆ ಬಂದಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಪ್ರಮುಖರು ಮಾತನಾಡಿ ಮನವಿ ಮಾಡಿದ್ದರು
ಇದೆ ವೇಳೆ ರೇಡಯೇಷನ್ ಒಂಕಾಲೋಜಿಸ್ಟ್ ಡಾ.ಮಾತಂಗಿ ಜೆ,ಹೀಮಾಟೊಲಾಜಿ & ಬಿಎಮ್ಟಿ ಡಾ.ನಿಶಿತ,ಇಎನ್ಟಿ & ಹೆಡ್ ನೆಕ್ ಒಂಕಾಲಾಜಿಸ್ಟ್ ಡಾ.ಹರ್ಷಾ ಸುರಿ ಮಾತನಾಡಿದರು ಈ ಸಂದರ್ಭದಲ್ಲಿ ಹೀಮಾಟೋಲಾಜಿ & ಬಿ.ಎಮ್.ಟಿ ಡಾ.ಸಚಿನ ಸುರೇಶ ಜಾಧವ,ಡಾ.ನೀತಿ ಕೃಷ್ಣಾ ರೈಜಾದಾ,ಡಾ ತೇಜಸ ಚೀರಂಜೀವಿ,ಡಾ ಸುರಜ ಎಚ್.ಪಿ,ಡಾ ವಿಜಯ ಮೂರ್ತಿ,ಡಾ ಮಧುಸುಧನ ಸೇರಿದಂತೆ ಇನ್ನಿತರರು ಇದ್ದರು